Home ಜಿಲ್ಲೆ ಕಲಬುರಗಿ ಶ್ರಮ ಸಂಸ್ಕøತಿಯಿಂದ ಬದುಕು ಉಜ್ವಲ

ಶ್ರಮ ಸಂಸ್ಕøತಿಯಿಂದ ಬದುಕು ಉಜ್ವಲ

ಜೇವರ್ಗಿ:ಮೇ.23: ‘ಭಗವಂತನ ಸೃಷ್ಟಿಯಲ್ಲಿ ಎಲ್ಲರೂ ಬದುಕಿ ಬಾಳುವ ಅವಕಾಶ ಕೊಟ್ಟಿದ್ದಾನೆ. ಸಾಧನೆಯಿಂದ ಶ್ರೇಯಸ್ಸು ಕಾಣಲು ಸಾಧ್ಯ. ಶ್ರಮ ಸಂಸ್ಕೃತಿಯಿಂದ ಬದುಕು ಉಜ್ವಲಗೊಳ್ಳುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಐemes ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.

ಮಾತನಾಡಿದರು.

ಯಡ್ರಾಮಿ ತಾಲ್ಲೂಕಿನ ಬೆಣ್ಣೂರು ಗ್ರಾಮದ ರಂಭಾಪುರಿ ಶಾಖಾ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಮತ್ತು ಶಿವಲಿಂಗ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ

‘ಪ್ರವಚನ ಪ್ರವೀಣ ಶಿವಲಿಂಗಯ್ಯ ಶಾಸ್ತ್ರಿ ಅವರು ಹಳ್ಳಿಹಳ್ಳಿಗೆ ಸಂಚರಿಸಿ ಭಕ್ತರಲ್ಲಿ ಜಾಗೃತಿ ಮೂಡಿಸಿ ಧರ್ಮ ಸಂಸ್ಕೃತಿಗಳನ್ನು” ಪ್ರಸಾರಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಭಕ್ತರು ಭಕ್ತಿಯಿಂದ ಕೊಟ್ಟ ದಾನ ಧರ್ಮಗಳನ್ನು ಮಠದ ಅಭಿವೃದ್ಧಿಗಾಗಿ ಮತ್ತು ಭಕ್ತರ ಒಳಿಗಾಗಿ ವಿನಿಯೋಗಿಸಿರುವುದು ಅವರಲ್ಲಿರುವಂಥ ಧರ್ಮ ನಿಷ್ಠೆಯನ್ನು ಕಾಣಬಹುದು. ಶ್ರೀ ಮಠ ಅಭಿವೃದ್ಧಿಯಾಗಿ ಭಕ್ತರಿಗೆ ಮಾರ್ಗದರ್ಶನ ನೀಡಲಿ’ ಎಂದರು.

ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯರು, ಕೆಂಭಾವಿ ಹಿರೇಮಠದ ಚನ್ನಬಸವ

ಶಿವಾಚಾರ್ಯರು ಸೇರಿದಂತೆ ಅನೇಕ ಸ್ವಾಮಿಗಳು ಮಾತನಾಡಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಉದ್ಯಮಿ ಶಿವಶರಣಪ್ಪ ಸಿರಿ. ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಭಗವಂತರಾಯ ಹಿರೇಮಠದ ಸಿದ್ದರಾಮಯ್ಯ ಸ್ವಾಮಿ, ಚಂದ್ರಶೇಖರ ಪುರಾಣಿಕ, ಹಣಮಂತ್ರಾಯಗೌಡ ಮಾಲಿಪಾಟಲ, ಭಗವಂತರಾಯ ಬೆಣ್ಣೂರ ಗೊಲ್ಲಾಳಪ್ಪ ನ್ಯಾವನೂರ ಭಗವಮಪ್ರಾಯ ಮೇಲದಂಟ್,ಸುಧಾ ಭಗವಂತರಾಯ ಬೆಣ್ಣರ ವಿಜಯಕುಮಾರ ಸೊಲ್ಲಾಪೂರ, ಭೀಮರಾಯ ನೆಲೋಗಿ, ಸಿದ್ದು ನಾಲ್ನೋಡಿ, ಅಮೃತರಾಯಗೌಡ ಅಮೃತರಾಯಗೌಡ ಗುಡೂರ,ಮರೆಪ್ಪ ಬೇಗಾರ್ ಬಿ.ಎಚ್.ಮಾಲಿಪಾಟೀಲ, ಯಮನಸಿಂಗ್ ಠಾಕೂರ ಸೇರಿದಂತೆಮೊದಲಾದ ಗಣ್ಯರು ಉಪಸ್ಥಿತರಿದ್ದರು. ಭಗವಂತ್ರಾಯ ಬೆಣ್ಣೂರ ನಿರೂಪಿಸಿ ವಂದಿಸಿದರು. ಶ್ರೇಯಸ್ ಬೆಣ್ಣೂರು ಸ್ಪೂರ್ತಿ ಬೆಣ್ಣುರ ಸಮಾರಂಭಕ್ಕೂ ಮುನ್ನ

ಸಾರೋಟಿನಲ್ಲಿ ಮೆರವಣಿಗೆ ಕುಂಭ ಹಿಡಿದ ಮಹಿಳೆಯರು, ಪುರವಂತರರು ಮತ್ತು ಭಜನಾ ಮಂಡಳಿಯವರು ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದರು.