Home ಜಿಲ್ಲೆ ಪ್ರಕರಣ ಬೇದಿಸಿದ ಪಿಎಸ್‌ಐ ಜ್ಯೋತಿಗೆ ಪ್ರಶಂಸನಾ ಪತ್ರ

ಪ್ರಕರಣ ಬೇದಿಸಿದ ಪಿಎಸ್‌ಐ ಜ್ಯೋತಿಗೆ ಪ್ರಶಂಸನಾ ಪತ್ರ

ತಾಳಿಕೋಟೆ:ಮಾ.೧೭: ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ಕಳ್ಳತನ, ದರೋಡೆ ಅಲ್ಲದೇ ವಾಹನಗಳ ಕಳ್ಳತನ ಪ್ರಕರ್ಣಗಳನ್ನು ಬೇದಿಸಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ಅವರು ಸೋಮವಾರರಂದು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ತಾಳಿಕೋಟೆ ಪಟ್ಟಣದ ಲಕ್ಷಿö್ಮÃಬಾಯಿ ಎಂಬವರ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಪ್ರಕರ್ಣಕ್ಕೆ ಸಂಬAದಿಸಿ ಮತ್ತು ಹೂವಿನ ಹಿಪ್ಪರಗಿಯ ಲಾಲಬಿ ಎಂಬವರು ತಿಂಥಣಿಗೆ ತೆರಳುವ ಸಮಯದಲ್ಲಿ ತಾಳಿಕೋಟೆ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಇಟ್ಟಿದ್ದ ಬ್ಯಾಗನ್ನೇ ಎಗರಿಸಿದ್ದ ಕೂಸಪ್ಪನನ್ನು ಬಂದಿಸಿ ಆತನಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದು ದರೋಡೆ ಮತ್ತು ಕಳ್ಳತನ, ೮ ಕಳ್ಳತನವಾದ ಬೈಕ್‌ಗಳನ್ನು ಪತ್ತೇ ಹಚ್ಚಿದ್ದಕ್ಕಾಗಿ ಮತ್ತು ಆರೋಪಿ ಕೂಸಪ್ಪನು ಕೊಲೆ ಮತ್ತು ಹಲವಾರು ದರೋಡೆ ಪ್ರಕರ್ಣದಲ್ಲಿ ಭಾಗಿಯಾಗಿ ಪೊಲೀಸ್‌ರಿಗೆ ಕಣ್ಣು ತಪ್ಪಿಸಿ ಪರಾರಿಯಾಗುತ್ತಾ ಸಾಗಿದ್ದ ವ್ಯಕ್ತಿಯು ಹಲವಾರು ಪೊಲೀಸ್ ಠಾಣೆಗೆ ಬೇಕಾಗಿದ್ದ ಕೂಸಪ್ಪ ವ್ಯಕ್ತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಕ್ಕೆ ಎಸ್‌ಪಿ ಲಕ್ಷö್ಮಣ ನಿಂಬರಗಿ ಅವರು ಪಿಎಸ್‌ಐ ಜ್ಯೋತಿ ಖೋತ್ ಅವರ ಕಾರ್ಯವನ್ನು ಪ್ರಶಂಶಿಸಿ ಅಭಿನಂದಿಸಿದ್ದಾರೆ.
ಇದು ಅಲ್ಲದೇ ಕಳ್ಳತನವಾಗಿದ್ದ ಸ್ಕಾ÷್ವರಿಪೇಯೋ ವಾಹನ್‌ವನ್ನು ವಶಪಡಿಸಿಕೊಂಡಿದ್ದಲ್ಲದೇ ಸುಮಾರು ೧೮ ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವದರೊಂದಿಗೆ ಹಲವಾರು ಕೇಸುಗಳು ಬೇದಿಸುವಲ್ಲಿ ಯಶಸ್ವಿಯಾದ ಪಿಎಸ್‌ಐ ಜ್ಯೋತಿ ಖೋತ್ ಅವರಿಗೆ ಸೋಮವಾರರಂದು ವಿಜಯಪುರ ಕಚೇರಿಯಲ್ಲಿ ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಇದೇ ಸಮಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಚಿನ್ನಾಭರಣ ಕಳೆದುಕೊಂಡವರಿಗೆ ವಶಪಡಿಸಿಕೊಳ್ಳಲಾದವುಗಳನ್ನು ಮರಳಿಸಿದರು.
ಈ ಸಮಯದಲ್ಲಿ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಡಿಎಸ್‌ಪಿ ಬಲಪ್ಪ ನಂದಗಾವಿ, ಸಿಪಿಐ ಮಹ್ಮದಪೈಶುದ್ದೀನ, ಅವರು ಉಪಸ್ಥಿತರಿದ್ದರು.