ಗಾಂಧೀಜಿ ಆಶಯದಂತೆ ಹಳ್ಳಿಗಳನ್ನು ಬಲಗೊಳಿಸೋಣ

ಕೋಲಾರ,ಅ,೩- ರಾಷ್ಟ್ರಪಿತ ಗಾಂಧೀಜಿ ಕನಸಿನ ಹಳ್ಳಿಗಳ ಅಭಿವೃದ್ದಿಗೆ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯಿತಿಗಳು ಬಲಿಷ್ಠವಾಗಿ ಜನಪರ ಕೆಲಸ ನಿರ್ವಹಿಸುವಂತೆ ಮಾಡಬೇಕು ಈ ನಿಟ್ಟಿನಲ್ಲಿ ನಡೆಯುವ ಗ್ರಾಮಸಭೆಗಳ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದು ಕೆನರಾಬ್ಯಾಂಕಿನ ವ್ಯವಸ್ಥಾಪಕಿ ಸುಶ್ಮಿತಾ ಕರೆ ನೀಡಿದರು.


ನಗರದ ಪತ್ರಕರ್ತರ ಭವನದಲ್ಲಿ ಧಾನ್ ಫೌಂಡೇಷನ್ ೨೯ನೇ ಸಂಸ್ಥಾಪನಾ ದಿನ, ಗಾಂಧಿಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನವನ್ನು ಜನತೆ ಪಡೆದುಕೊಳ್ಳಲು ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ಧಾನ್ ಫೌಂಡೇಷನ್ ಕೆಲಸ ಮಾಡುತ್ತಿದ್ದು, ಮಹಿಳೆಯರಿಗದ ಬ್ಯಾಂಕಿನ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.


ಧಾನ್ ಫೌಂಡೇಷನ್ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸು ತ್ತಿದ್ದು, ಹಲವಾರು ಹೊಸ ಸಂಘ ಹಾಗೂ ಸಾವಿರಾರು ಹೊಸ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.ಹೆಚ್ಚುವರಿ ತೋಟಗಾರಿಕಾ ಅಧಿಕಾರಿ ವಿನಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತೋಟಗಾರಿಕೆಯಿಂದ ಲಾಭದಾಯಕ ಜೀವನ ನಡೆಸಿ ಎಂದ ಅವರು, ಇಲಾಖೆಯಿಂದ ಸಿಗುವ ಯೋಜನೆಗಳು, ಸಹಾಯಧನ ಮತ್ತಿತರ ಮಾಹಿತಿ ನೀಡಿದರು.


ರೈತರಿಗೆ ಸಾವಯವ ಗೊಬ್ಬರದ ಮಹತ್ವ ತಿಳಿಸಿಕೊಡಬೇಕು, ಧಾನ್ ಫೌಂಡೇಷನ್ ನಂತಹ ಸಂಸ್ಥೆಗಳು ಕೃಷಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದನೆ ನೀಡಬೇಕು, ರೈತರಿಗೆ ಬೆಳೆಪದ್ದತಿಯ ಅರಿವು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಧಾನ್ ಫೌಂಡೇಷನ್ ಪ್ರಾದೇಶಿಕ ನಿರ್ದೇಶಕ ಶಂಕರಯ್ಯ ಮಾತನಾಡಿ, ದೇಶದ ೧೪ ರಾಜ್ಯಗಳಲ್ಲಿ ಕಾರ್ಯನಿರ್ವಹಿಸು ತ್ತಿದೆ, ೧೯೯೭ರಲ್ಲಿ ಮಧುರೆಯಲ್ಲಿ ಪ್ರಾರಂಭವಾದ ಸಂಸ್ಥೆ ಇಂದು ವಿಶಾಲವಾಗಿ ಬೆಳೆದಿದೆ ಎಂದ ಅವರು, ಬಡತನ ನಿರ್ಮೂಲನೆ ನಮ್ಮ ಉದ್ದೇಶವಾಗಿದೆ,ಜತೆಗೆ ಗ್ರಾಮಾಭಿ ವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿ ಜನತೆಗೆ ಮಣ್ಣು, ನೀರು ನಿರ್ವಹಣೆ ಕುರಿತು ಅರಿವು ನೀಡಲಾಗುತ್ತಿದೆ ಎಂದು ತಿಳಿಸಿದರು.