
ರಬಕವಿ-ಬನಹಟ್ಟಿ,ಡಿ.೧೯: ತಾಲೂಕಿನ ಜನರ ಪ್ರಮುಖ ಬೇಡಿಕೆಯಾಗಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬಕ್ಕೆ ರಾಜಕೀಯ ಬದಿಗೊತ್ತಿ, ಸಣ್ಣ ಸಮಸ್ಯೆಯಾಗಿರುವ ಸೇತುವೆ ಕಾರ್ಯಕ್ಕೆ ಜನಪ್ರತಿನಿಧಿಗಳು ಮುಂದಾಗಬೇಕೆAದು ಕುಡಚಿ-ಬಾಗಲಕೋಟೆ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಹೇಳಿದರು.
ರಬಕವಿಯ ಶ್ರೀಶಂಕರಲಿAಗ ದೇವಸ್ಥಾನ ಮುಂಭಾಗ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ಎರಡನೇಯ ದಿನ ಸ್ಥಳಕ್ಕೆ ಭೆಟ್ಟಿ ನೀಡಿ ಬೆಂಬಲಿಸಿ ಮಾತನಾಡಿದ ಅವರು, ಈ ಹೋರಾಟ ವಿಕೋಪಕ್ಕೆ ಹೋಗುವ ಮುನ್ನವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಯಾದವರು ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಜನತೆಯ ಕೂಗಿಗೆ ಸ್ಪಂದನೆಯಾಗದಿದ್ದರೆ ಇದು ಜನಾಂದೋಲನದ ಸ್ವರೂಪ ಬದಲಾಗಬಹುದು. ಇದಕ್ಕೆ ಅವಕಾಶ ನೀಡದೆ ತಕ್ಷಣ ಸ್ಪಂದಿಸುವಲ್ಲಿ ಸರ್ಕಾರ ಮುಂದಾಗಬೇಕೆAದರು.
ಬೆAಬಲ : ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಮಿತಿಗೆ ರಬಕವಿ-ಬನಹಟ್ಟಿ ವಕೀಲರ ಸಂಘ ಹಾಗೂ ಅಟೋ ಚಾಲಕರ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿ ಸತ್ಯಾಗ್ರಹ ನಡೆಸಿದರು.
ಡಾ. ಸಂಜಯ ಪಾಟೀಲ, ಡಾ.ಜಂಬಗಿ, ಡಾ.ಬಸವರಾಜ ಡಂಗಿ, ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ವರ್ಧಮಾನ ಕೋರಿ, ಎಂ.ಜಿ. ಕೆರೂರ, ಶ್ರೀಶೈಲ ಬೀಳಗಿ, ಪ್ರವೀಣ ದಭಾಡಿ, ರವಿ ಕೊರತೆ, ಮಾಳು ಹಿಪ್ಪರಗಿ, ಬಸವರಾಜ ತೆಗ್ಗಿ, ಗಣಪತರಾವ್ ಹಜಾರೆ, ರಾಮಣ್ಣ ಹುಲಕುಂದ, ಸಂಜಯ ತೇಲಿ, ಮಲ್ಲಿಕಾರ್ಜುನ ಸಾಬೋಜಿ, ಧರೆಪ್ಪ ಉಳ್ಳಾಗಡ್ಡಿ, ಸಿದ್ಧರಾಜ ಪೂಜಾರಿ, ಬಸವರಾಜ ದಲಾಲ, ನೀಲಕಂಠ ಮುತ್ತೂರ, ಸಂಜಯ ತೆಗ್ಗಿ ಸೇರಿದಂತೆ ಅನೇಕರಿದ್ದರು.

























