ಕನ್ನಡ ಸಂಸ್ಕøತಿ ಬೆಳೆಸೋಣ: ಅಜಯಸಿಂಗ್

ಜೇವರ್ಗಿ: ನ.3:ಕನ್ನಡದ ನೆಲ, ಜಲಕ್ಕಾಗಿ ಕನ್ನಡಿಗರಾದ ನಾವುಗಳು ಹೋರಾಡಬೇಕಾಗಿದೆ. ಪ್ರಾಮಾಣಿಕವಾಗಿ ಅಂದಾಗ ಮಾತ್ರ ರಾಜ್ಯದಲ್ಲಿ ಕನ್ನಡ ಕಂಪು ಎಲ್ಲೆಡೆ ಹರಡಿ ಕನ್ನಡ ಭಾಷೆಯಾಗಿ ಉಳಿಯಲು ಸಾಧ್ಯ. ಕನ್ನಡ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.

ಅವರು ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜೋತ್ಸವ ದಿನಾಚರಣೆ ಚಾಲನೆ ನೀಡಿ ಮಾತನಾಡುತ್ತಾ, ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ತನ್ನದೆ ಆದ ಪ್ರಾತಿನಿಧ್ಯವಿದೆ. ಕನ್ನಡ ಭಾಷೆಯ ಅಳವು ಉಳಿವು ಕನ್ನಡಿಗರ ಕೈಯಲಿದ್ದು ಅವರೇ ಅದನ್ನು ಉಳಿಸಬೇಕಾಗಿದೆ ಎಂದರು.

ಆಔP ಕಾರ್ಯಕ್ರಮಕ್ಕೂ ಮುನ್ನ ವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್‍ಮಲ್ಲ ಧ್ವಜಾರೋಹಣ ನೆರವೇರಿಸಿದರು. ನಂತರ ಮಿನಿ ವಿಧಾನಸೌಧದಿಂದಭುವನೇಶ್ವರಿಭಾವಚಿತ್ರವನ್ನು ವಿಜಯಪುರ ಕ್ರಾಸ್ ಮಾರ್ಗವಾಗಿ ಅಖಂಡೇಶ್ವರ ವೃತ್ತದಿಂದ ಹಳೆ ತಹಶೀಲ್ದಾರ್ ಕಚೇರಿಯ ಟೌನ್ ವರೆಗೆ ಮೆರವಣಿಗೆ ನಡೆಸಲಾಯಿತು.