
ಕಲಬುರಗಿ,ಜು.೫: ರಾಜ್ಯದ ಹಲವೆಡೆ ಮಳೆಯಾಗದೆ ರೈತರು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಳೆ ಇಲ್ಲದೇ ಎಲ್ಲಿಯೂ ಬಿತ್ತನೆ ಕಾರ್ಯ ಕೂಡ ನಡೆಯುತ್ತಿಲ್ಲ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕೃತಿಯ, ವರುಣದೇವರ ಕೃಪೆಗಾಗಿ ಪ್ರತಿಯೊಬ್ಬರೂ ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಾಮೂಹಿಕವಾಗಿ ಪ್ರಾರ್ಥಿಸಬೇಕಾದ ಅವಶ್ಯಕತೆಯಿದೆ.ಈ ಸಂದರ್ಭದಲ್ಲಿ ನಮ್ಮ ಹಿರಿಯರು ಪಾರಂಪರ್ಯವಾಗಿ ಪಠಿಸುತ್ತ ಬಂದಿರುವ “ವೃಷ್ಟಿ (ಮಳೆ) ಪ್ರಾರ್ಥನೆ” ಮಂತ್ರವನ್ನು ಪ್ರತಿದಿನ ಭಕ್ತಿಭಾವದಿಂದ ಪಠಿಸುವಂತೆ ಸಾರ್ವಜನಿಕರಲ್ಲಿ ವಿನಂತಿ. ಈ ಕೆಳಗಿನ ಪ್ರಾರ್ಥನಾ ಮಂತ್ರವನ್ನು ಪ್ರತಿಯೊಬ್ಬರೂ ಪಠಿಸಬಹುದು. ಎಲ್ಲ ಜಾತಿ-ಮತ-ಧರ್ಮ-ಸಮುದಾಯ-ಸಂಪ್ರದಾಯದವರೂ ಪಠಿಸಬಹುದು.
ಋಷ್ಯ ಶೃಂಗಾಯ ಮುನಯೇ ವಿಭಾಂಡಕ ಸುತಾಯಚ |
ನಮಃ ಶಾಂತಾಧಿಪತಯೇ ಸದ್ಯಃ ಸುವೃಷ್ಟಿ ಹೇತವೇ ||
ವಿಭಾಂಡಕ ಸುತ ಶ್ರೀಮಾನ್ ಶಾಂತಾ ಪತಿರ ಕಲ್ಮಶಃ |
ಋಷ್ಯ ಶೃಂಗ ಇತಿ ಖ್ಯಾತಃ ಮಹಾವರ್ಷಂ ಪ್ರಯಚ್ಛತು ||
|| ಶ್ರೀಕೃಷ್ಣಾರ್ಪಣಮಸ್ತು ||ಪ್ರಕೃತಿಯ, ವರುಣದೇವರ ಅನುಗ್ರಹಕ್ಕಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಪ್ರಾರ್ಥನೆಯನ್ನು ಭಕ್ತಿಯಿಂದ ಪಠಿಸಿ, ಉತ್ತಮ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸೋಣ. `ಸರ್ವರ ಪ್ರಾರ್ಥನೆ – ಸಮೃದ್ಧಿಯ ನಾಳೆ’ ಎಂಬ ಸಂಕಲ್ಪದೊAದಿಗೆ ಎಲ್ಲರೂ ಕೈಜೋಡಿಸೋಣ. ಎಂದು ವೇ.ಮೂ. ಕನಕಗಿರಿ ವಸಂತಮಾಧವಾಚಾರ್ಯ,ವಿದ್ಯಾಮಾನ್ಯ ಕುಟೀರ, ಎನ್‌ಜಿಒ ಕಾಲೋನಿ, ಜೇವರ್ಗಿ ರಸ್ತೆ.ಕಲಬುರಗಿ ಅವರು ತಿಳಿಸಿದ್ದಾರೆ.





























