Home ಜಿಲ್ಲೆ ಕಲಬುರಗಿ ಶಾಸಕ ಎಂ.ವೈ.ಪಾಟೀಲ ಭ್ರಷ್ಟ ಅನ್ನುವವರ ಆದಾಯ ಮೂಲ ತಾಲೂಕಿನ ಜನತೆಗೆ ತಿಳಿಸಲಿ ; ರವಿ ಪಾಟೀಲ

ಶಾಸಕ ಎಂ.ವೈ.ಪಾಟೀಲ ಭ್ರಷ್ಟ ಅನ್ನುವವರ ಆದಾಯ ಮೂಲ ತಾಲೂಕಿನ ಜನತೆಗೆ ತಿಳಿಸಲಿ ; ರವಿ ಪಾಟೀಲ

ಅಫಜಲಪುರ ; ತಾಲ್ಲೂಕಿನ ಜನಪ್ರಿಯ ಶಾಸಕರಾದ ಎಂ.ವೈ. ಪಾಟೀಲರ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಹಾಗೂ “ಭ್ರಷ್ಟ ಶಾಸಕ” ಎಂದು ಹೇಳುವ ಮೊದಲು ತಮ್ಮ ಅಸ್ತಿತ್ವ ಏನು ಅನ್ನೋದು ಅರಿತುಕೊಂಡು ಮಾತನಾಡಲಿ ಎಂದು ಕಾಂಗ್ರೆಸ್ ಯುವ ಮುಖಂಡರಾದ ರವಿ ಪಾಟೀಲ ಕುಲಾಲಿ ಹೇಳಿದರು.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಆಧಾರವಿಲ್ಲದೇ ರಾಜಕೀಯ ಜೀವನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕಿ ಇಲ್ಲದೇ ಜನರ ಒಳಿತಿಗಾಗಿ 84ರ ಇಳಿ ವಯಸ್ಸಿನಲ್ಲೂ ಕ್ಷೇತ್ರ ಸುತ್ತಿ ಮತಕ್ಷೇತ್ರದ ಜನರಿಗಾಗಿ ಸೇವೆ ಸಲ್ಲಿಸುತ್ತಿರುವ ಶಾಸಕ ಎಂ.ವೈ.ಪಾಟೀಲ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಪತ್ರಿಕಾ ಮಾದ್ಯಮದಲ್ಲಿ ಕಾಣಿಕೊಳ್ಳುವುದು ಕೆಲ ಮುಖಂಡರ ಚಾಳಿಯಾಗಿದೆ ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಅವ್ಯವಹಾರದ ಕುರಿತು ನಿಮ್ಮ ಬಳಿ ದಾಖಲೆ, ಸಾಕ್ಷ್ಯ ಅಥವಾ ಅಧಿಕೃತ ವರದಿ ಇದ್ದರೆ ತಕ್ಷಣವೇ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದೆ ಮಂಡಿಸಿ. ನಿಷ್ಪಕ್ಷಪಾತ ತನಿಖೆಯನ್ನು ಎದುರಿಸಲು ನಮ್ಮ ಶಾಸಕರು ಸಿದ್ದರಿದ್ದಾರೆ. ಆದರೆ, ಯಾವುದೇ ಸಾಕ್ಷ್ಯವಿಲ್ಲದೆ ಆರೋಪ ಮಾಡುವುದು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರಜ್ಞಾವಂತ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರವಿ ಪಾಟೀಲ ತಿಳಿಸಿದರು.