
ಕೋಲಾರ,ಜ.೧೭-: ಮಾಧ್ಯಮಗಳು ವೃತ್ತಿಯಲ್ಲಿ ಬದ್ಧತೆ ಹೊಣೆಗಾರಿಕೆಯಿಂದ ಕೆಲಸ ನಿರ್ವಾಹಿಸುವ ಮೂಲಕ ಸಮಾಜವನ್ನು ಬಲಿಷ್ಟವಾಗಿ ಹಾಗೂ ಆರೋಗ್ಯಕರವಾಗಿ ರೂಪಿಸಲು ಸಾಧ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಯಲು ಉಪಕುಲಪತಿ ಬಿ.ಕೆ.ರವಿ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪತ್ರಿಕೋದ್ಯಮದ ಸವಾಲುಗಳು ಅದಕ್ಕೆ ಪತ್ರಕರ್ತರ ಮುಂದಿರುವ ಆಯ್ಕೆಗಳ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾದ್ಯಮಗಳು ಮನಸ್ಸು ಮಾಡಿದರೆ ಬದಲಾವಣೆ ತರಲು ಸಾಧ್ಯ ಎಂಬುವುದಕ್ಕೆ ಪಲ್ಸ್ ಪೋಲಿಯೋ ಹಾಗೂ ಕುಷ್ಟ ರೋಗ ನಿಯಂತ್ರಣದ ಜಾಗೃತಿಯನ್ನು ಸಮಾಜದಲ್ಲಿ ಪ್ರಚಾರ ಪಡಿಸುವ ಮೂಲಕ ಮುಕ್ತಗೊಳಿಸುವಲ್ಲಿ ಯಶಸ್ವಿಗೊಳಿಸಿರುವುದನ್ನು ಉದಾಹರಿಸಿದ ಅವರು ಆರೋಗ್ಯಕಾರಿ ಮಾಧ್ಯಮಗಳಿಂದ ಆರೋಗ್ಯಕಾರಿ ಸಮಾಜ ನಿರ್ಮಾಣ ಸಾಧ್ಯ ಹಾಗಾಗಿ ಆರೋಗ್ಯಕಾರಿ ಸಮಾಜ ನಿರ್ಮಾಣಕ್ಕೆ ಮಾಧ್ಯಮಗಳು ಕೈ ಜೋಡಿಸುವಂತಾಗ ಬೇಕೆಂದು ಕರೆ ನೀಡಿದರು.
ಕಳೆದ ೧೯೮೦ ರಿಂದ ೨೦೨೫ರ ವರೆಗಿನ ಬಹಳಷ್ಟು ಭಾಷ ಮಾಧ್ಯಮದಲ್ಲೂ ಬದಲಾವಣೆಗಳನ್ನು ಕಂಡಿದೆ. ಕನ್ನಡ ಮಾಧ್ಯಮವು ಭಾರತೀಯ ಮಾಧ್ಯಮಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಭಾಷಾಂತರ ತಂತ್ರಜ್ಞಾನ ಜಾಗತೀಕರಣದ ಅಲೆಯಲ್ಲಿ ಮಾಧ್ಯಮಗಳು ವಾಣಿಜ್ಯಕರೀಣ ಭರಾಟೆಯಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಸಾಕಷ್ಟು ಬದಲಾವಣೆಯಾಗಿ ಅಧುನೀಕರಣಗೊಂಡಿದೆ. ತಂತ್ರಜ್ಞಾನ ಜಾಗತೀಕರಣದಲ್ಲಿ ಭಾರತವು ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮನರಂಜನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳು ಭಾರತೀಯ ಮಾಧ್ಯಮಗಳಲ್ಲಿ ಹೂಡಿಕೆ ಮಾಡಲು ಸರದಿ ಸಾಲಿನಲ್ಲಿ ನಿಂತಿದೆ ಎಂದು ಉದಾಹರಿಸಿದರು.
ಇಂದು ಅಧುನಿಕ ತಂತ್ರಜ್ಞಾನವು ಬಹಳಷ್ಟು ಮುಂದುವರೆದಿದ್ದರೂ ಸಹ ಮಾನವನ ಮೆದುಳಿಗೆ ಸಮಾನವಾಗದು ಎ.ಐ. ಹಾಗೂ ಬುದ್ದಿ ಮತ್ತೆ ಎರಡರ ನಡುವೆ ಮಾನವನಿಗೆ ಸ್ವರ್ಧೆ ಇದ್ದರೂ ಸಮಾನಾಗಿ ಬರುವುದಿಲ್ಲ, ಎ,ಐ. ವೇಗವಾಗಿ ಕೆಲಸ ಮಾಡಿ ಸಮಯವನ್ನು ಉಳಿಸ ಬಹುದಾಗಿದೆ. ಸಮಾಜದ ಮೇಲೆ ಪರಿಣಾಮ ಬೀರುವಂತೆ ಪ್ರಚೋದಕಾರಿ ಪ್ರಕರಣಗಳನ್ನು ವೈಭವೀಕರಿಸುವುದು ಸಲ್ಲದು. ಅಧುನೀಕ ತಂತ್ರಜ್ಞಾನಗಳನ್ನು ಅರ್ಥಪೂರ್ಣವಾಗಿಸಿಕೊಂಡು ಸದ್ಬಳಿಸಿಕೊಂಡಾಗ ಮಾತ್ರ ಸಾರ್ಥಕತೆ ಉಂಟಾಗಲಿದೆ ಇದು ನಮ್ಮನ್ನು ಅವಲಂಭಿಸಿದೆ. ಮಾಧ್ಯಮ ಲೋಕಕ್ಕೆ ಪೂರಕವಾಗಲಿದೆ ಹೊರತಾಗಿ ಮಾರಕವಾಗದು ಎಂದರು.
ಯಾರು ಸೃಜನಶೀಲತೆಯ ಪರಿಶ್ರಮ, ಶಿಸ್ತು, ಬದ್ದತೆ ಇರುವವರನ್ನು ಗುರುತಿಸಿ ಮಾದ್ಯಮಗಳನ್ನು ಸಮಾಜವು ಸ್ವೀಕರಿಸಲಿದೆ. ಯಾವೂದೇ ವರದಿಗಳು ವಸ್ತುನಿಷ್ಟತೆಯಿಂದ, ಸತ್ಯಕ್ಕೆ ಸಮೀಪವಾಗಿರಬೇಕು ಟಿ.ವಿ.ಗಳು ಬಂದ ನಂತರವೂ ಮುದ್ರಣ ಮಾದ್ಯಮಗಳು ಬಲಷ್ಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೆಗಳು ಬಿಡುಗಡೆಯಾಗುತ್ತಿರುವುದನ್ನು ಕಾಣಬಹುದಾಗಿದೆ. ಮುದ್ರಣ ಮಾಧ್ಯಮಕ್ಕೆ ವಿದ್ಯುತ್‌ಮಾನ ಮಾಧ್ಯಮಗಳು, ಯೂ ಟ್ಯೂಬ್, ಸಾಮಾಜಿಕ ಜಾಲತಾಣಗಳು, ಸೇರಿದಂತೆ ಚಲನ ಚಿತ್ರಗಳು ವಾಣಿಜ್ಯೋದ್ಯಮಗಳು ಇಂದಿನ ಜಾಗತೀಕರಣದಲ್ಲಿ ಸ್ವರ್ಧೆಗಳು ಇರುವುದು ಸಹಜ, ಯಾವುದೇ ತಂತ್ರಜ್ಞಾನಗಳು ಪರಿಚಿತವಾದ ಸಂದರ್ಭದಲ್ಲಿ ಸಮಾಜದಲ್ಲಿ ಬದಲಾವಣೆಗಳು ಸಹಜವಾದ ಪ್ರಕ್ರಿಯೆ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಇವತ್ತಿನ ಮಾದ್ಯಮ ಕ್ಷೇತ್ರಕ್ಕೆ ಕಾರ್ಪೊರೇಟ್ ಕಂಪನಿಗಳು ಲಗ್ಗೆ ಇಟ್ಟಿರುವುದರಿಂದ ನೈಜ ಪತ್ರಕರ್ತರಿಗೆ ನೆಲೆ ಇಲ್ಲದಿರುವುದರಿಂದ ಜೀವನಕ್ಕೆ ಭದ್ರತೆ ಇಲ್ಲವಾಗಿದೆ. ಇದರಿಂದ ಉತ್ಸಾಹಿ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಬರುವುದಕ್ಕೆ ಹಿಂಜರಿಯುತ್ತಿದ್ದಾರೆ ಎಂದರು.
ಪತ್ರಕರ್ತರು ಸವಾಲುಗಳ ನಡುವೆ ವೃತ್ತಿಯನ್ನ ತೊಡಗಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಇವತ್ತಿನ ದಿನಗಳಲ್ಲಿ ಪತ್ರಕರ್ತರಿಗೆ ಬರವಣಿಗೆಯ ಮೇಲೆ ಹಿಡಿತವಿಲ್ಲದೆ ದಾರಿ ತಪ್ಪುತ್ತಿದ್ದಾರೆ. ಬೆಂಗಳೂರು ಉತ್ತರ ವಿ.ವಿ ಯಿಂದ ಪತ್ರಕರ್ತರಿಗೆ ಕಾರ್ಯಗಾರಗಳು ಅವಶ್ಯಕತೆ ಇದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಎಸ್. ರವಿಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್‌ಕುಮಾರ್, ಖಜಾಂಚಿ ಬಿ.ಎಲ್. ರಾಜೇಂದ್ರಸಿಂಹ ಉಪಸ್ಥಿತರಿದ್ದರು. ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ಓಂಕಾರಮೂರ್ತಿ, ಸುನೀಲ್‌ಕುಮಾರ್, ಶಮ್ಗರ್, ಸುದರ್ಶನ್ ಮುಂತಾದವರು ಸಂವಾದದಲ್ಲಿ ಭಾಗವಹಿಸಿದ್ದರು.

























