Home ಜಿಲ್ಲೆ ಅಂತರAಗ ಬಹಿರಂಗ ಶುದ್ಧವಾಗಿರಲಿ

ಅಂತರAಗ ಬಹಿರಂಗ ಶುದ್ಧವಾಗಿರಲಿ

ಭಾಲ್ಕಿ: ಶರಣರ ವಿಚಾರದಲ್ಲಿ ಅಂತರAಗ ಮತ್ತು ಬಹಿರಂಗ ಎರಡೂ ಒಂದೇ ಆಗಿದೆ. ಮನುಷ್ಯನಿಗೆ ಶುದ್ಧವಾದ ಮನಸ್ಸು ಮತ್ತು ಸಮಾಜದಲ್ಲಿನ ಪ್ರಾಮಾಣಿಕ ನಡತೆ ಅತ್ಯಗತ್ಯ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ತಾಲೂಕಿನ ಏಣಕೂರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕೇವಲ ಹೊರಗಿನ ಆಡಂಬರ ಮುಖ್ಯವಲ್ಲ. ಒಳಗಿನ ಶುದ್ಧತೆಯೇ ನಿಜವಾದ ಭಕ್ತಿ. ಮನಸ್ಸಿನಲ್ಲಿ ದುರಾಸೆ, ಕೋಪ, ಅಸೂಯೆ ಮುಂತಾದ ಕೆಟ್ಟ ಗುಣಗಳನ್ನು ಬಿಟ್ಟು ದಯೆ, ಕರುಣೆ, ಪ್ರೀತಿಯನ್ನು ಬೆಳೆಸಿಕೊಳ್ಳುವುದೇ ಅಂತರAಗ ಶುದ್ಧಿ. ಕಾಯಕದಲ್ಲಿ ಪ್ರಮಾಣಿಕತೆ ಸತ್ಯಶುದ್ಧ ಕಾಯಕ ಮತ್ತು ಇತರರಿಗೆ ಮೋಸ ಮಾಡದಿರುವುದೇ ಬಹಿರಂಗ ಶುದ್ಧಿಯಾಗಿದೆ. ವ್ಯಕ್ತಿಯ ನಡತೆ ಸಮಾಜಕ್ಕೆ ಮಾದರಿಯಾಬೇಕು. ದೇವರು ಸೃಷ್ಟಿಸಿದ ಈ ಪ್ರಕೃತಿ ಹಾಳು ಮಾಡಬಾರದು. ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಶರೀರ ಆರೋಗ್ಯವಾಗಿಟ್ಟುಕೊಳ್ಳಬೇಕು. ಬೇರೆಯವರಿಗೆ ಕಣ್ಣೀರು ಬರಸದೇ ಕಣ್ಣೀರು ಒರೆಸುವ ಕಾರ್ಯ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದು ತಿಳಿಸಿದರು.

ಗ್ರಾಮದ ಪುಟಾಣಿ ಮಕ್ಕಳು ಬಸವ ಗುರುವಿನ ಪೂಜೆ ನೆರವೇರಿಸಿದರು. ಗ್ರಾಮದ ಹಿರಿಯರಾದ ಬಾಬುರಾವ ಹಂಚೆ, ಕಾಶಪ್ಪ ಸೋನಾರ, ರಾಜಕುಮಾರ ಮಾನಕಾರ ಅವರು ಪೂಜ್ಯರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜಕುಮಾರ ಕೊನಗುತ್ತೆ, ಶಾಂತಪ್ಪ ಸಜ್ಜನಶೆಟ್ಟಿ, ಗುರುಬಸಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ವಿಠಲರಾವ ಚಿಟಗುಪ್ಪೆ, ಚನ್ನಬಸಪ್ಪ ಹಚ್ಚೆ, ವೈಜಪ್ಪ ರೆಡ್ಡಿ, ಅನೀಲಕುಮಾರ ಪಾಟೀಲ, ಮೌಲಾನಾಸಾಬ್ ಮಿರಕಲ್ಲೆ, ರಾಜಕುಮಾರ ಓತಗೆ, ಸಂತೋಷ ತಳವಾಡೆ, ವೀರಭದ್ರಪ್ಪ ತೆಲಗಾಣೆ, ಸತೀಶ ತೇಲಂಗ, ಪ್ರದೀಪ ಬಿರಾದಾರ, ಉಮೇಶ ತಳವಾಡೆ, ಸತೀಶ ಸಜ್ಜನ, ಶಿವು ಓತಗೆ, ಗುರುಸಿದ್ಧಯ್ಯ ಕಿಣಗಿ, ರಮೇಶ ಪಟ್ನೆ, ಬಾಬುರಾವ ಮದಕಟ್ಟಿ, ಸಂಗಮೇಶ ಬಿರಾದಾರ, ಅಶೋಕ ತುಮ್ಮನಪಳ್ಳೆ, ಶಾಂತವೀರ ತುಮ್ಮನಪಳ್ಳೆ, ಸಂತೋಷ ಕೊನಗುತ್ತೆ, ಮಹೇಶ ಕೊನಗುತ್ತೆ, ಚಂದು ಕೊನಗುತ್ತೆ ಶರಣು ತೆಲಗಾಣೆ, ಗುರುರಾಜ, ಶಿವಕುಮಾರ, ರಾಜಕುಮಾರ, ಸಂಜು ಮೇತ್ರೆ, ಸಿದ್ಧು ಕಡಗ, ರಾಜಕುಮಾರ ಸ್ವಾಮಿ ಮುಂತಾದವರು ಇದ್ದರು.

ಸುಶೀಲಮ್ಮ ಕಗಡ, ರಾಜಕುಮಾರ ಮಾನಕಾರ, ರಾಜಕುಮಾರ ಕೊನಗುತ್ತೆ, ಪ್ರಭುರಾವ ತೆಲಗಾಣೆ ಅವರಿಂದ ದಾಸೋಹ ಸೇವೆ ನಡೆಯಿತು. ಗ್ರಾಮದ ಚಿಕ್ಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿದರು. ಕೊನೆಗೆ ಭಾಲ್ಕಿ ಶ್ರೀಮಠದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ಬಸವ ಆಸ್ತಿ ರೂಪಕ ನೋಡುಗರ ಮನ ರಂಜಿಸಿತು.