ಜಿಲ್ಲೆಯ ಮಹತ್ವ ಹೆಚ್ಚಾಗಲಿ:ವೃಷಬೇಂದ್ರಯ್ಯ

ಸೈದಾಪುರ:ನ.28:ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಮಹತ್ವ ಹೆಚ್ಚಾಗುವಂತಾಗಲಿ ಎಂದು ಡಯಟ ಪ್ರಾಂಶುಪಾಲರಾದ ವೃಷಬೇಂದ್ರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಯಾದಗಿರಿ ಡಯಟ್‍ದಲ್ಲಿ ನಡೆದ ವೈಯಕ್ತಿಕ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಸಂಹನಾ ಹಾಗೂ ಗುಂಪು ವಿಭಾಗದಲ್ಲಿ 9ನೇ ತರಗತಿಯ ಭಾಗ್ಯಶ್ರೀ ಮತ್ತು ಭಾವನಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು. ಕೃತಕ ಬುದ್ಧಿಮತ್ತೆ ಯನ್ನು ಉಪಯೋಗಿಸಿಕೊಂಡು ನೀರಾವರಿ ವ್ಯವಸ್ಥೆ ಮತ್ತು ಹಾನಿಕಾರಕ ಕೀಟಗಳನ್ನು ಪತ್ತೆ ಮಾಡುವ ಪೆÇ್ರಜೆಕ್ಟ್ ತಯಾರಿಸಿ ಪ್ರಥಮ ಸ್ಥಾನ ಪಡೆದಿರುವುದು ಸಂತಸವನ್ನುಂಟು ಮಾಡಿದೆ. ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹಾರೈಸಿದರು.

ವಿಜ್ಞಾನ ವಸ್ತು ಪ್ರದರ್ಶನದ ನೋಡಲ್ ಅಧಿಕಾರಿ ವಿದ್ಯಾ ಸಜ್ಜನ್, ಉಪನ್ಯಾಸಕರಾದ ಶೇಖರಪ್ಪ, ಇಂದಿರಾ ಬಡಿಗೇರ್ , ಅನ್ನಪೂರ್ಣ, ನಿರ್ಣಾಯಕರಾದ ಯಾಸ್ಮಿನ್ ಸುಲ್ತಾನ್, ನಾಗರೆಡ್ಡಿ ಅಕ್ಕಿ, ಸಾಯಪ್ಪ ಗಿಡ್ಡಿ, ಮತ್ತು ಜ್ಯೋತಿ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ ಸೇರಿದಂತೆ ಇತರೆ ಶಿಕ್ಷಕರಿದ್ದರು.

ಇಗಾಗಲೇ ವಿದ್ಯಾ ವರ್ಧಕ ಸಂಸ್ಥೆಯ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಯಶಸ್ವಿಯಾಗಿ ದಕ್ಷಿಣ ಭಾರತದ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿವುದರ ಮೂಲಕ ಜಿಲ್ಲೆಯ ಮಹತ್ವ ಹೆಚ್ಚಾಗುವಂತೆ ಮಾಡಲಿ.

ವೃಷಬೇಂದ್ರಯ್ಯ ಡಯಟ ಪ್ರಾಂಶುಪಾಲರು

ವಿದ್ಯಾರ್ಥಿಗಳ ಸಾಧನೆ ಹರ್ಷವನ್ನುಂಟು ಮಾಡಿದೆ. ಸತತವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಸಂಸ್ಥೆಯ ಮಹತ್ವ ಹೆಚ್ಚಾಗುವಂತೆ ಮಾಡಿದೆ. ಇದಕ್ಕಾಗಿ ಪ್ರಯತ್ನ ಮಾಡಿದ ಮಾರ್ಗದರ್ಶಕರಿಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
ಲಿಂಗಾರೆಡ್ಡಿ ನಾಯಕ ಮುಖ್ಯಗುರುಗಳು ವಿ.ವ.ಪ್ರೌ.ಶಾಲೆ ಸೈದಾಪುರ