
ಚನ್ನಮ್ಮನ ಕಿತ್ತೂರು,ಮೇ29: ರೈತರು ಕೃಷಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಕಷ್ಟಕ್ಕೆ ಇಂದಿನ ಸೊಸೈಟಿಗಳು (ಪಿಕೆಪಿಎಸ್‍ಗಳು) ಸಹಕಾರ ನೀಡಬೇಕು. ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸ್ಥಳೀಯ ಸೋಮವಾರ ಪೇಟೆ ವೀರಭದ್ರೇಶ್ವರ ವಿವಿಧ್ಯೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಂಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಬೆಳೆ ಸಾಲ ಪತ್ರ ನೀಡಿ ಮಾತನಾಡಿ ಭೇದ ಮರೆತು ರೈತರಿಗೆ ಸಾಲ ವಿತರಣೆ ಮಾಡಬೇಕು. ಸಾಲ ಸರಿಯಾದ ಸಮಯಕ್ಕೆ ವಿತರಿಸಬೇಕು. ಇದರಿಂದ ರೈತರಿಗೂ ಅನುಕೂಲವಾಗುತ್ತದೆ. ಅದಲ್ಲದೇ ಸೊಸೈಟಿಯವರನ್ನು ರೈತರು ನೆನೆಯುವುದರೊಂದಿಗೆ ಬೆಳವಣಿಗೆಯಾಗುತ್ತದೆ. ಸಂಸ್ಥೆಯ ಏಳಿಗೆಗೆ ಬೇಕಾದ ಎಲ್ಲ ಸಹಾಯವನ್ನು ನಮ್ಮ ಡಿಸಿಸಿ ಬ್ಯಾಂಕಿನಿಂದ ಕೊಡಿಸಲಾಗುವುದು. ಅದಲ್ಲದೇ ರಸಗೊಬ್ಬರ, ಕೀಟನಾಶಕ, ವಿತರಿಸಲು ಎ¯್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ನೀವು ಮಾಡುವ ವ್ಯಾಪಾರ, ವಾಹನ ಸಾಲ ಸೇರಿದಂತೆ ಇನ್ನೂಳಿದ ಎಲ್ಲ ವ್ಯಾಪಾರಗಳಿಗೆ ಸಂಸ್ಥೆ ಸಾಲ ನೀಡುವಲ್ಲಿ ಆರ್ಥಿಕವಾಗಿ ಪ್ರಬಲವಾಗಬೇಕು. ಎಂದು ತಿಳಿಸಿದರು.
ರೈತ ಮುಖಂಡ ನಿಂಗಪ್ಪ ತಡಖೋಡ ಮಾತನಾಡಿ. ರೈತರ ಕಷ್ಟಗಳಿಗೆ ಸಾಲ ವಿತರಿಸುವ ಸಂಘ- ಸಂಸ್ಥೆಗಳು ಮುಂಗಾರು ಮಳೆ ಸುರಿಯುವುದರೊಳಗಾಗಿ ರೈತರಿಗೆ ಸ್ವಲ್ಪ ಸಾಲ ನೀಡಿ ಏಕೆಂದರೆ ಬಿತ್ತನೆ ಬೀಜ-ಗೊಬ್ಬರ ಖರೀದಿಸಲು ಸಹಾಯವಾಗುತ್ತದೆ. ಆ ಸಂದರ್ಭದಲ್ಲಿ ರೈತನ ಕೈಯಲ್ಲಿ ಹಣವಿರುವುದಿಲ್ಲ. ನೀವು ಹಣ ನೀಡವುರದರಿಂದ ಅವನಿಗೂ ಅನುಕೂಲ, ಸಂಸ್ಥೆಯೂ ಬೆಳೆಯುತ್ತದೆ ಎಂದರು.
ಈ ವೇಳೆ ಅಧ್ಯಕ್ಷ ಉದಯ ಇಂಗಳೆ, ಉಪಾಧ್ಯಕ್ಷ ಜಗದೀಶ ಗಟನಟ್ಟಿ, ಡಿಸಿಸಿ ಬ್ಯಾಂಕ ನಿರೀಕ್ಷಕ ವಿಕ್ರಮ್ ಖೋದಾನಪೂರ, ರೈತರಾದ ಅರುಣ ಬಿಕ್ಕಣ್ಣನವರ, ವಿಶ್ವನಾಥ ಹಿರೇಮಠ, ಶಾಮ ಭಾವನ್ನವರ, ಮಹಾದೇವ ಸಾಣಿಕೊಪ್ಪ, ದೀಪರಾಜ ಅಡಿಬಟ್ಟಿ, ರಾಜಶೇಖರ ಇನಾಮದಾರ, ಪರುಶುರಾಮ ಕೋಳಿಕೊಪ್ಪ, ಕಾರ್ಯದರ್ಶಿ ಬಸಯ್ಯ ಕಾಳಚರಂತಿಮಠ, ವೀರಣ್ಣಾ ದೊಡಮನಿ, ಸೇರಿದಂತೆ ಇನ್ನೂಳಿದ ಸದಸ್ಯರು, ರೈತರಿದ್ದರು.