
ಬೀದರ, ಜೂ.೨೧: ಸರ್ಕಾರಿ ಆಸ್ಪತ್ರೆಗಳ ಕಡೆಗೆ ಜನರು ಮುಖ ಮಾಡುವಂತಾಗಲಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್ ೨೦೨೫ ರ ಜಿಲ್ಲಾಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ಮತ್ತು ತಿವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ೨೦೨೫ ರ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ಜನರು ಹೆಚ್ಚು ವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಆಸ್ಪತ್ರೆಯ ಅಧಿಕಾರಿಗಳು ಜನರೊಂದಿಗೆ ಉತ್ತಮ ಬಾಂಧವ್ಯದೊAದಿಗೆ ನಡೆದುಕೊಳ್ಳಬೇಕು ಮತ್ತು ಜನರಿಗೆ ಕಾಡುವ ಸಾಮಾನ್ಯ ವಿಷಯವೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವುದಿಲ್ಲ ಎಂಬುದಾಗಿದೆ ಆದರೆ ಇದನ್ನು ನಾವು ಅವರ ಮನಸ್ಸಿನಿಂದ ಹೋಗಲಾಡಿಸಿ ಉತ್ತಮ ಸಹಕಾರದೊಂದಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಈಗಾಗಲೇ ಮಳೆಗಾಲ ಆರಂಭವಾಗಿದ್ದು ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ನಾವು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸಿ ಮಲೇರಿಯಾ, ಡೆಂಗ್ಯೂ, ಚಿಕನ್ ಗೂನ್ಯ, ಆನೆಕಾಲು ರೋಗ ಮುಂತಾದವುಗಳನ್ನು ಹರಡುವುದನ್ನು ನಿಯಂತ್ರಿಸಬೇಕು ಮತ್ತು ಹಳ್ಳಿ ಹಳ್ಳಿಗೆ ಭೇಟಿ ನೀಡಿ ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ತಿಳಿಸಿದರು. ಶಾಲಾ ಮಕ್ಕಳ, ಅಂಗನವಾಡಿ ಮಕ್ಕಳ ಮತ್ತು ಗರ್ಭಿಣಿಯರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಬೀದರ ಜಿಲ್ಲೆಯನ್ನು ಅನಾಮೀಯಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅರಿವು ಮೂಡಿಸಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ಮತ್ತು ತಾಯಂದಿರಿಗೆ ಪೌಷ್ಟಿಕ ಆಹಾರ ಒದಗಿಸಲಾಗು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ರೋಗಗಳ ಜಾಗೃತಿ ಮತ್ತು ಅರಿವು ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಭೆಯಲ್ಲಿ ಪ್ರೊಬೇಷನರಿ IಂS ಅಧಿಕಾರಿ ರಮ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಧ್ಯಾನೇಶ್ವರ ನಿರಗುಡೆ, ಜಿಲ್ಲಾ ಕೆ.ಪಿ.ಎಮ್.ಇ ನೋಡಲ್ ಅಧಿಕಾರಿ ಡಾಕ್ಟರ್ ದಿಲೀಪ್ ಡೋಂಗ್ರೆ, ಜಿಲ್ಲಾ ಆಯುಷ್ ಅಧಿಕಾರಿ ಖುತಿಜಾ ಬೇಗಂ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಗಾಯತ್ರಿ, ಡಾ. ಸಂಗಾರೆಡ್ಡಿ, ಡಾ. ಶಿವಕುಮಾರ ಸಿದ್ದೇಶ್ವರ, ರವಿ ಕಲಶೆಟ್ಟಿ ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಕಲಿ ವೈದರಿಗೆ ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ
ಬೀದರ, ಜೂ.೨೧: ಔರಾದ (ಬಿ) ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಕಲಿ ವೈದ್ಯರಾದ ನಾರಾಯಣರಾವ ಕುಲರ್ಕಣಿ, ಬಸವರಾಜ ಒಂಟೆ ಇವರಿಗೆ ತಲಾ ೫೦,೦೦೦ ರೂ. ಹಾಗೂ ಸ್ಟಾಫ್ ನರ್ಸ ಪ್ರೇಮ ಜಿರಗೆ ಇವರಿಗೂ ೧,೦೦,೦೦೦ ರೂ. ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆದೇಶ ಹೊರಡಿಸಿರುತ್ತಾರೆ
ಅವರು ಗುರುವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ನೊಂದಣಿ ಮತ್ತು ಕುಂದು ಕೂರತೆ ಪರಿಹಾರ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದೆ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಿರುತ್ತಾರೆ ಮತ್ತು ಆರ್ಯುವೇದ ವೈದ್ಯರಾದ ಡಾ. ರಂಜಿತ ಬಿರಾದರ ಇವರಿಗೆ ಕರ್ನಾಟಕ ಆರ್ಯುವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಮಂಡಳಿಯಿAದ ಪ್ರಮಾಣ ಪತ್ರ ಪಡೆದು ಕೆ.ಪಿ.ಎಂ.ಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಬೇಕೆಂದು ಎಚ್ಚರಿಕೆ ನೀಡಿರುತ್ತಾರೆ.
ಔರಾದ(ಬಿ) ತಾಲೂಕಿನ ಮುಧೋಳ(ಬಿ)ಗ್ರಾಮದಲ್ಲಿರುವ ನಕಲಿ ವೈದ್ಯರಾದ ನಾರಾಯಣರಾವ ಕುಲರ್ಕಣಿ, ಬಸವರಾಜ ಒಂಟೆ ಹಾಗೂ ಸ್ಟಾಫ್ ನರ್ಸ ಪ್ರೇಮ ಜಿರಗೆ ಇವರು ಯಾವುದೇ ವೈದ್ಯಕೀಯ ಪದವಿ ಪಡೆಯದೆ ವೈದ್ಯಕೀಯ ಪದವಿ ನಡೆಸುತ್ತೀದ್ದಾರೆ ಎಂದು ದೂರ ಬಂದ ಪ್ರÀಯುಕ್ತ ಔರಾದ(ಬಿ) ತಾಲ್ಲೂಕಿನ ಆರೋಗ್ಯ ಅಧಿಕಾರಿಗಳಾದ ಡಾ|| ಗಾಯತ್ರಿ ಹಾಗೂ ಜಿಲ್ಲಾ ಕೆ.ಪಿ.ಎಮ.ಇ ನೋಡಲ ಅಧಿಕಾರಿಗಳಾದ ಡಾ||ದಿಲೀಪ್ ಡೋಂಗ್ರೆ ಅವರು ಸದರಿ ಗ್ರಾಮಕ್ಕೆ ಭೇಟಿ ನೀಡಿ ಕ್ಲಿನಿಕಗಳನ್ನು ಸೀಜ ಮಾಡಿರುತ್ತಾರೆ.
ಔರಾದ(ಬಿ) ತಾಲೂಕಿನ ಎಕಂಬಾ ಗ್ರಾಮದಲ್ಲಿ ಡಾ. ರಂಜಿತ ಬಿರಾದರ ಇವರು ಮಹಾರಾಷ್ಟçÀ ರಾಜ್ಯದಿಂದ ಆರ್ಯುವೇದ ಪದ್ದತಿಯಲ್ಲಿ ಪದವಿ ಹೊಂದಿದ್ದು ಇಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಆದರೆ ಕರ್ನಾಟಕ ರಾಜ್ಯದಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ಕರ್ನಾಟಕ ಆರ್ಯುವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಮಂಡಳಿಯಿAದ ಪ್ರಮಾಣ ಪತ್ರ ಪಡೆದು ಕೆ.ಪಿ.ಎಂ.ಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಬೇಕಾಗಿರುತ್ತದೆ. ಇದು ಕೆ.ಪಿ.ಎಂ.ಇ ಕಾಯ್ದೆ ೨೦೦೭ ಕಲಂ ೧೯ ಮತ್ತು ೨೨ ಸ್ಪಷ್ಟ ಉಲ್ಲಂಘನೆಯಾಗಿರುವುದರಿAದ ಕ್ರಮಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ||ಧ್ಯಾನೇಶ್ವರ ನಿರಗುಡೆ ಜಿಲ್ಲಾ ಕೆ.ಪಿ.ಎಮ.ಇ ನೋಡಲ ಅಧಿಕಾರಿಗಳಾದ ಡಾ||ದಿಲೀಪ್ ಡೋಂಗ್ರೆ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ|| ಗಾಯತ್ರಿ, ಡಾ|| ಸಂಗಾರೆಡ್ಡಿ,ಡಾ|| ಶಿವಕುಮಾರ ಸಿದ್ದೇಶ್ವರ,ಡಾ||ರವಿ ಕಲಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.