
ಕಲಬುರಗಿ:ಜೂ: 23:ಇಂದಿನ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಿ ಸಮ ಸಮಾಜ ಕಟ್ಟಲು ಸಾಹಿತ್ಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಅಭಿಪ್ರಾಯಪಟ್ಟರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಚಿತ್ರಕಲಾವಿದ ಡಾ. ರೆಹಮಾನ್ ಪಟೇಲ್ ಹಾಗೂ ಡಾ. ಸೈಯದಾ ಸೀಮಾ ದಂಪತಿಗಳಿಗೆ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೆಳೆಯರ ಬಳಗವು ನಗರದ ಕನ್ನಡ ಭವನದ ಕಲಾ ಸೌಧಲ್ಲಿ ರವಿವಾರ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜಮುಖಿ ಚಿಂತನೆಯ ವ್ಯಕ್ತಿ ಸಾಂಸ್ಕøತಿಕವಾಗಿ ಬೆಳೆಯಬಲ್ಲ. ಇದಕ್ಕೆ ಪೂರಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ,ಅವರು ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ರ ಆದರ್ಶಗಳತ್ತ ಕಾರ್ಯಕ್ರಮಗಳು ರೂಪಿಸುತ್ತಿದ್ದಾರೆ. ಜಾತ್ಯತೀತ ನೆಲೆಯಲ್ಲಿ ಎಲ್ಲರನ್ನು ಒಂದುಗೂಡಿಸಿ ಹೊಸ ಹೊಸ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪಾಲಿಕೆಯ ಮಾಜಿ ಮೇಯರ್ ಭೀಮರೆಡ್ಡಿ ಕುರುಕುಂದಾ ಮಾತನಾಡಿ, ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಾವಿದರ ಕೊರತೆ ಇಲ್ಲ. ಆದರೆ ಅವಕಾಶಗಳು ಸೂಕ್ತ ರೀತಿಯಲ್ಲಿ ಒದಗಿಸಿ ಕೊಡಬೇಕಾಗಿದೆ. ಮತ್ತು ಈ ಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಮದ ಕಲಾವಿದರಿಗೆ ಸ್ಳಾವಕಾಶ ಮಾಡಿಕೊಟ್ಟಿದೆ. ಇದು ಇಡೀ ರಾಜ್ಯದ ಮಾದರಿ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲಾ ಕುಂಚದಲ್ಲಿನ ಕೈ ಚಳಕ ತುಂಬಾ ಅದ್ಭುತವಾದುದು. ಡಾ. ರೆಹಮಾನ್ ಪಟೇಲ್ ಅವರು ಈ ಭಾಗದ ಪ್ರಸಿದ್ಧ ಕಲಾವಿದರು. ಪ್ರಕೃತಿ ಸೌಂದರ್ಯ , ನೈಜ ಸ್ಥಿತಿ-ಗತಿಯ ಸತ್ಯ ಸಂಗತಿಗಳನ್ನು ಬಣ್ಣದ ಮೂಲಕ ಜೀವ ತುಂಬಿದ ಕಲಾವಿದರಲ್ಲಿ ಪ್ರಮುಖರಾಗಿದ್ದಾರೆ. ಅವರ ಚಿತ್ರಕಲಾ ಪ್ರಪಂಚ ಸದಾ ಕಣ್ಣಿಗೆ ಹಬ್ಬ ಇದ್ದಂತೆ. ಆಸ್ವಾದಿಸುವ ಗುಣ ಪ್ರತಿಯೊಬ್ಬರಲ್ಲಿ ಬರಬೇಕಾಗಿದೆ. ಅವರು ಇತ್ತೀಚೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾಗಿದ್ದು ಅಭಿಮಾನ ಪಡುವಂತಾಗಿದೆ ಎಂದರು.
ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ, ಅಕಾಡೆಮಿ ಪ್ರಶಸ್ತಿ ಪುರಸ್ಕøತ ಚಿತ್ರಕಲಾವಿದ ಡಾ. ರೆಹಮಾನ್ ಪಟೇಲ್ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಡಾ. ಎಸ್.ಎಂ. ನೀಲಾ, ಮಹ್ಮದ್ ಅಯಾಜೋದ್ದೀನ್ ಪಟೇಲ್, ರಾಜಶೇಖರ ಶಾಮಣ್ಣ, ಸೈಯ್ಯದ್ ನಜೀರುದ್ದೀನ್ ಮುತ್ತವಲಿ, ಎಂ.ಎಚ್. ಬೆಳಮಗಿ, ಶಕುಂತಲಾ ಪಾಟೀಲ, ಸಿದ್ಧಲಿಂಗ ಬಾಳಿ ವೇದಿಕೆ ಮೇಲಿದ್ದರು.
ವಿವಿಧ ಕ್ಷೇತ್ರದ ಗಣ್ಯರಾದ ಎಸ್.ಕೆ. ಬಿರಾದಾರ, ಪ್ರಭುಲಿಂಗ ಮೂಲಗೆ,ಡಾ. ಗವಿಸಿದ್ದ ಪಾಟೀಲ, ಸಿ.ಎಸ್. ಮಾಲಿಪಾಟೀಲ, ನವಾಬ ಖಾನ್, ಮಡಿವಾಳಪ್ಪ ಹೇರೂರ, ಪ್ರಭಾಕರ ಜೋಶಿ, ರವೀಂದ್ರ ಇಂಜಳ್ಳಿಕರ್, ಕುಪೇಂದ್ರ ಬರಗಾಲಿ, ಎಂ.ಎನ್. ಸುಗಂಧಿ, ರೇವಣಸಿದ್ದಪ್ಪ ಜೀವಣಗಿ, ಜಗದೀಶ ಮರಪಳ್ಳಿ, ಮಲ್ಲಿನಾಥ ಸಂಗಶೆಟ್ಟಿ, ಈರಣ್ಣ ಸೋನಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.