ಕನ್ನಡ ಉಳಿಸಿ ಬೆಳೆಸಲು ನಿರಂತರ ಕನ್ನಡ ಬಳಕೆ ಇರಲಿ

ಶಿಡ್ಲಘಟ್ಟ. ಡಿ,೧- ವಿಶಾಲ ಮೈಸೂರು ಪ್ರಾಂತ್ಯದಿಂದಲೇ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ದೊರೆಯುವಂತೆ ಹೋರಾಡಲಾಗಿತ್ತು. ನಂತರ ಹೈದರಾಬಾದ್-ಕರ್ನಾಟಕ ಪ್ರದೇಶದ ಏಕೀಕರಣದೊಂದಿಗೆ ೧೯೭೩ರಲ್ಲಿ ಹಳೆಯ ಮೈಸೂರು ಸೇರಿ ಒಂದಾದ ಈ ನಾಡಿಗೆ ಕರ್ನಾಟಕ ಎಂದು ಹೆಸರು ಲಭಿಸಿದೆ ಎಂದು ಮುಖ್ಯ ಅತಿಥಿಯಾದ ಆಗಮಿಸಿದ್ದ ಶೂದ್ರ ಶಕ್ತಿ ಪತ್ರಿಕೆ ಸಂಪಾದಕರಾದ ರಾಮೇಗೌಡರು ಹೇಳಿದರು.


ನಗರದ ಕೋಟೆ ವೃತ್ತದಲ್ಲಿ ಆಲೂರು ವೆಂಕಟರಾಯರ ವೇದಿಕೆಯಲ್ಲಿ ೭೦ ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಪ್ರಗತಿಪರ ಹೋರಾಟಗಾರರ ಸಂಘ ವತಿಯಿಂದ ವಿಶೇಷವಾಗಿ ಹಮ್ಮಿಕೊಂಡಿದ್ದರು.


ಸಂಘದ ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ್ ಮಾತನಾಡಿ ಈ ವರ್ಷದಿಂದ ಬರುವ ಕನ್ನಡ ಕಾರ್ಯಕ್ರಮಗಳಾದ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ, ನಾಡ ಹಬ್ಬಗಳನ್ನು ಮುಂದಿನ ದಿನದಲ್ಲಿ ಅಧಿಕಾರಿಗಳ ಬಳಿ, ರಾಜಕಾರಣಿಗಳ ಬಳಿ ಹಣ ವಸೂಲಿ ಮಾಡದೆ ಭಾಷೆ ಮತ್ತು ನಾಡಿಗೆ ಸೇವೆ ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ನಮ್ಮ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.


ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಮಾರ್ ಮಾತನಾಡಿ ಬೆಳಿಗ್ಗೆದಿಂದ ಸಂಜೆಯವರೆಗೆ ಹಾಲು ಮತ್ತು ರೇಷ್ಮೆ ವೃತ್ತಿಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳುತ್ತಿರುವ ಸುಮಾರು ಶೇ ೭೦ ಜನಸಂಖ್ಯೆ ಅಂದರೆ ಅದು ರೈತರು ಕೃಷಿ ದುಡಿಮೆ ಮಾಡುವವರು ಕೃಷಿ ಚಟುವಟಿಕೆಯಲ್ಲಿ ಬೆಲೆ ಇರಲಿ, ಇಲ್ಲದಿರಲಿ ದೇಶದ ಹೊಟ್ಟೆ ತುಂಬಿಸುವ ಈ ರೈತರಿಗೆ ನಿಜವಾದ ಗೌರವ ದೊರಕಬೇಕು. ದೇಶದ ಆರ್ಥಿಕತೆ ರೈತನ ಭುಜದ ಮೇಲೆಯೇ ನಿಂತಿದೆ ಎಂದರು.


ಎಲ್ಲಾ ಜಾತಿ ಧರ್ಮದ ಜನರು ಒಟ್ಟಾಗಿ ದೇಶವನ್ನು ಕಟ್ಟಿದ್ದಾರೆ. ಆದರೆ ಪ್ರಕೃತಿ ನೀಡಿದ ಅಮೂಲ್ಯ ಜೀವನದಲ್ಲಿ ಅತ್ಯಂತ ಕ್ರೂರ ಪ್ರಾಣಿ ಮನುಷ್ಯನೇ ಆಗಿದ್ದಾನೆಂಬುದನ್ನು ಮರೆತು ಬಿಡುತ್ತೇವೆ. ಈ ನಾಡಿನ ಪ್ರತಿಯೊಂದು ಗುಡಿ?ಗೋಪುರವೂ ಮಾನವೀಯತೆ, ಶಾಂತಿ, ಐಕ್ಯತೆ ಕಲಿಸುವ ದೇವಾಲಯಗಳಾಗಿದ್ದರೂ ಕೆಲವು ವೇಳೆ ಆ ಮೌಲ್ಯಗಳನ್ನು ಮರೆಯುತ್ತೇವೆ ಎಂದು ಅವರು ವಿಷಾದಿಸಿದರು.


ಕನ್ನಡ ರಾಜ್ಯೋತ್ಸವ ಒಂದು ದಿನದ ಆಚರಣೆ ಮಾತ್ರವಾಗದೆ, ವರ್ಷದ ಪೂರ್ತಿ ಕನ್ನಡದ ಪ್ರಗತಿ, ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಭಾಷೆ, ಸಂಸ್ಕೃತಿ, ರೈತನ ದಾರಿ ಬೆಳಗಲಿ ಎಂಬ ಹಾರೈಕೆಯೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಉದಾತ್ತವಾಗಿ ನಡೆಸಿಕೊಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡದ ಜನಪ್ರಿಯ ಹಾಡುಗಳು, ಶಾಲಾ ಮಕ್ಕಳಿಂದ ನೃತ್ಯಗಳು, ಕನ್ನಡ ತಾಯಿಗೆ ಹಾರೈಕೆ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜನ ಮನ ಸೆಳೆಯುವಂತಾಗಿತ್ತು,


ಕಾರ್ಯಕ್ರಮದಲ್ಲಿ ಪ್ರಗತಿಪರ ಹೋರಾಟಗಾರರ ಸಂಘದ ಅಧ್ಯಕ್ಷ ವಿಜ್ಡಂ ನಾಗರಾಜು, ಉಪಾಧ್ಯಕ್ಷ ಸಿ.ಎಂ.ಬೈರೇಗೌಡ, ನಗರ ಪೊಲೀಸ್ ಠಾಣೆ ಪಿ ಎಸ್ ಐ ವೇಣುಗೋಪಾಲ್, ಕೃಷಿ ಪಂಡಿತ ಗೋಪಾಲಗೌಡ, ಕಸಾಪ ಅಧ್ಯಕ್ಷ ಪಟೀಲ್ ನಾರಾಯಣಸ್ವಾಮಿ, ಕೋಟೆ ಚನ್ನೇಗೌಡ, ಬೋದಗೂರು ವೆಂಕಟಸ್ವಾಮಿ, ನಾರಾಯಣಸ್ವಾಮಿ, ಬೆಸ್ಮಾಂ ಇಲಾಖೆ ಶಿವಕುಮಾರ್, ಮಹಿಳಾ ಅಧ್ಯಕ್ಷೆ ಮಧುಲತಾ, ಕಲಾವಿದ ಸಿ.ಎನ್.ಮುನಿರಾಜು, ದ್ಯಾವಪ್ಪ, ದೀಪು, ದೇವರ ಮಳ್ಳೂರು ಗಾಯಕ ಮಹೇಶ್ ಅನೇಕ ಕಲಾವಿದರು, ಸಾರ್ವಜನಿಕರು ಹಾಜರಿದ್ದರು..