
ಕಲಬುರಗಿ:ಡಿ.1: ಕನ್ನಡ ನಮ್ಮ ನಾಡಿನ ಪರಂಪರೆ ಇಂದಿನದಲ್ಲ ಮೊದಲಿನಿಂದಲೂ ಬಂದಿದೆ ನಮ್ಮ ಲೇಖಕರು ಪ್ರಕಾಶಕರು ಒಂದೇ ನಾಣ್ಯದ ಎರಡು ಮುಖಗಳು,ಪುಸ್ತಕ ಸಂಸ್ಕøತಿ ಬೆಳೆಯಬೇಕಾದರೆ ಕನ್ನಡ ಭಾಷೆ ಉಳಿಯಬೇಕು
ಇದಕ್ಕೆ ಕನ್ನಡ ಭಾಷೆ ಅನ್ನದ ಭಾಷೆಯ ಅಗಲಿ ಎಂದು ಪ್ರಖ್ಯಾತ ಪ್ರಕಾಶಕ ಡಾ.ಬಸವರಾಜ ಕೊನೇಕ ಆಶಯ ವ್ಯಕ್ತಪಡಿಸಿದರು. ಕಲಾ ಮಂಡಳದಲ್ಲಿ ಸಿರಿಗನ್ನಡ ವೇದಿಕೆ ಏರ್ಪಡಿಸಿದ ಉಪನ್ಯಾಸ, ಪುಸ್ತಕ ಬಿಡುಗಡೆ ಮತ್ತು ರಾಜ್ಯ ಮಟ್ಟದ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕಕ್ಕೆ ಸರಕಾರ ರಾಜ್ಯೋತ್ಸವ ಸಂದರ್ಭದಲ್ಲಿ ತಾರತಮ್ಯವನ್ನು ಖಂಡಿಸಿದರು.
ಕನ್ನಡ ಭಾಷೆ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕ ಕೊಡುಗೆ ಅಪಾರವಾಗಿದೆ.ನೆಲ, ಜಲ,ಭಾಷೆ,ಸಾಹಿತ್ಯ ಸಂಸ್ಕೃತಿ ಗೆ ಕನ್ನಡ ಕಟ್ಟುವುದು ಇಂದು ಮುಖ್ಯವಾಗಿದೆ ಎಲ್ಲರೂ ಸಂಸ್ಕೃತಿ ಸಾಂಸ್ಕೃತಿಕ ಪರಂಪರೆ ಬಹು ದೊಡ್ಡದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ವಿಶೇಷ ಉಪನ್ಯಾಸದಲ್ಲಿ ಅಭಿಪ್ರಾಯಪಟ್ಟರು.
ಸಾಹಿತ್ಯ ಕೋರಂ ಚೇಂಜ್ ಇರುತ್ತದೆ.ಕನ್ನಡ ಸಾಹಿತ್ಯ ಸಿಹಿಯಾಗಿದೆ ಮಾತು ಬಹು ಮುಖ್ಯವಾಗಿದೆ.ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಪುಸ್ತಕ ಓದುವುದು ಬಿಡಬೇಡಿ ಅನೇಕ ಪ್ರತಿಭಾವಂತರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಅವರನ್ನು ಉತ್ತೇಜನ ನೀಡಿದಂತಾಗುತ್ತದೆ ಇದೊಂದು ಒಳ್ಳೆಯ ಕಾರ್ಯ ಎಂದು ಪ್ರಶಸ್ತಿ ಪ್ರದಾನ ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವೈದ್ಯಾಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ ಮಾತನಾಡಿದರು.
ಡಾ.ಗವಿಸಿದ್ಧಪ್ಪ ಪಾಟೀಲರ ಕಣ್ಣಳತೆ ಮತ್ತು ಡಾ.ಸಂಗಪ್ಪ ಮಾಮನಶೆಟ್ಟಿ ಅವರ ವಿಶಾಲಾತ್ಮಕ ಅರ್ಥಶಾಸ್ತ್ರ ಪುಸ್ತಕ ಬಿಡುಗಡೆ ಮಾಡಿದ ಸಾಮಾಜಿಕ. ಭದ್ರತೆ ಮತ್ತು ಪಿಂಚಣಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಶರಣಪ್ಪ ಧನ್ನಿ ಇಲ್ಲಿಯ ಕೃತಿ ಒಂದು ಸಾಹಿತ್ಯ ಮತ್ತು ಪಠ್ಯಕ್ಕೆ ಸಂಬಂಧಿಸಿದೆ ಉತ್ತಮ ಕೃತಿ ಎಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ, ಕನ್ನಡ ಅಂಕಿ ಸಂಖ್ಯೆ ಬಳಕೆ, ಜೊತೆಗೆ ಜಿಲ್ಲೆಯ ಸಾಹಿತಿಗಳ ಪರಿಚಯ, ಪ್ರಶಸ್ತಿ ಪ್ರದಾನ ಮಾಡುವುದಾಗಿದೆ.
ಸಾನಿಧ್ಯವಹಿಸಿದ ಬೇಲೂರು ಉರಿಲಿಂಗಪೆದ್ದಿ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಶೋಭಾದೇವಿ ಚೆಕ್ಕಿ ಪ್ರಾರ್ಥನಾ ಗೀತೆ ಆಡಿದರು ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಸ್ವಾಗತಿಸಿ ದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಕಾರ್ಯದರ್ಶಿ ಡಾ.ಶೀಲಾದೇವಿ ಬಿರಾದಾರ ವಂದಿಸಿದರು.
ಡಾ.ಹನುಮಂತರಾವ್ ದೊಡ್ಡಮನಿ, ಜಿ.ಎಸ್‍ನಿಂಗರಾಜ, ಬಾಬುರಾವ ಜಮಾದಾರ, ದೇವೇಂದ್ರಪ್ಪ ಕಟ್ಟಿಮನಿ, ಮನೋಹರ ಮರಗುತ್ತಿ, ಡಾ.ಸಂಧ್ಯಾ ಕಾನೇಕರ ಮೊದಲಾದವರಿದ್ದರು.
ರಾಜ್ಯ ಮಟ್ಟದ ಸಿರಿಗನ್ನಡ ಸಿರಿ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜಕುಮಾರ ಅಲ್ಲೂರೆ, ಶ್ರೀಮತಿ ಭಾರತಿ ತುಳಸಿರಾಮ ಚವಾಣ್ಶ್ರೀ, ತುಳಸಿರಾಮ ಬಿ. ಚಹಾಣ್, ಬಸವರಾಜ ಮನಿಗಾರ, ಡಾ. ಮಂಜುಳಾ ಭೋವಿ, ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ, ಪೆÇ್ರ. ಮಲ್ಲಿಕಾರ್ಜುನ ಪಾಲಾಮೂರ, ಶ್ರೀಮತಿ ರುಕ್ಸಾನ್ ಎಫ್, ಶ್ರೀಲಕ್ಷ್ಮಣ .ಎಸ್ ಗೌಳೆಣ್ಣನವರ, ಡಾ. ಗೋವಿಂದೇಗೌಡ ಕೆ. ಇ.,ಶ್ರೀ ಸಾಗರ ಶ್ರೀಕಾಂತ ಪಾಟೀಲ,ಡಾ. ಆನಂದರೆಡ್ಡಿ ಎಮ್. ಪಟಪಲ್ಲಿ ಶ್ರೀಮತಿ ಸುಜಾತಾ ಚಿನ್ನಾಆಶಪ್ಪ,ಕು. ಭಾಗ್ಯಮ್ಮ ತಂಬಾಕೆ, ಶ್ರೀ ಅಮಲಿಂಗ ಕಾಶಿರಾಯ, ಡಾ. ಉಮೇಶ ಬಾಬು, ಶ್ರೀ ಮೋಹನರಾವ ಭೀಮರಾವ, ಶ್ರೀಮತಿ ನೀಲಮ್ಮ ಬಿ. ಮಲ್ಲೆ, ಶ್ರೀಮತಿ ಸುವರ್ಣ ರಾಥೋಡ, ಡಾ. ಎಂ. ಮಂಜುನಾಥ (ಮಾಚಿಹಲ್ಲಿ), ಶ್ರೀ ಅಶೋಕ ಮಡಿವಾಳಪ್ಪ ನಾಯಕವಾಡಿ, ಡಾ. ರೋಹಿಣಿ ವಿ. ಕಲ್ಲಮಠ, ಡಾ. ಸಂಗಪ್ಪ ವಿ ಮಾಮನಶೆಟ್ಟಿ, ಡಾ. ಶೋಭಾ ಹುಣಚಪ್ಪ, ಶ್ರೀಮತಿ ಪದ್ಮಮ್ಮ ಗೋವಿಂದಪ್ಪ, ಶ್ರೀ ಮಮ್ಮದ ಇಕ್ವಾಲ ದಸ್ತಗಿರಸಾಬ, ಡಾ. ಕೈಲಾಸ ಎಸ್. ಡಿ., ಡಾ. ಶೋಭಾದೇವಿ ಚೆಕ್ಕಿ, ಡಾ. ಶಿವಕುಮಾರ ಸೂರ್ಯವಂಶಿ, ಡಾ. ಸಂತೋಷ ಜಾಧವಶ್ರೀ, ರಾಜಶೇಖರ ಬಿ. ಹಡಪದ, ಶ್ರೀ ಕನಕಪ್ಪ ಕೂಚಬಾಳ, ಶ್ರೀಮತಿ ರೇಷ್ಮಾ ದೇಶಮುಖಪ್ಪ, ಶ್ರೀ ಸಿದ್ದು ಮೇಟಿ, ಶ್ರೀ ರವಿ ಚಿಲ್ಲಾ, ಶ್ರೀ ಸಿದ್ದಪ್ಪ ಕರಡಿ, ಶ್ರೀಮತಿ ಸುನಂದ ಬಸವರಾಜ ಮೇಲೇರಿ, ಶ್ರೀ ಚಿದಾನಂದ ಹಿರೇಮಠ, ಶ್ರೀ ಬಸನಗೌಡ, ಶ್ರೀ ರಾವುತರಾಯ ಬಸವಂತರಾಯ ಪೂಜಾರಿ, ಶ್ರೀ ಸುರೇಶ ಕಾನೇಕರ್, ಡಾ. ಚಂದ್ರಶೇಖರ ದಂಡಗೊಳ, ಶ್ರೀ ಸಂಗಮೇಶ ಹುಚ್ಚಪ್ಪ ಹೊಸಮನಿ, ಕುಮಾರಿ ಅಂಜನಾ ಜಡೇಕರ್, ಶ್ರೀಬಸವರಾಜ್ ಹಣಮಂತ ದೊಡ್ಡಮನಿ, ಡಾ. ಹನುಮಂತರಾಯ ಕೆ. ಗೋನಾಳ, ಡಾ. ಮಹೇಶಕುಮಾರ ಶಿವಶರಣಪ್ಪ ಸಂಕನೂರ್, ಶ್ರೀ ರಹಮಾನ ದವಲಸಾ, ಶ್ರೀ ವೀರಭದ್ರಪ್ಪ ಬಸಪ್ಪ ದೊಡ್ಡಮನಿ, ಡಾ. ವಜ್ರಾ ಪಾಟೀಲ, ಡಾ. ಫರ್ಹಾನಾ ಫರ್ವೀನ್, ಶ್ರೀ ಶಾಂತಪ್ಪ ಸಿದ್ದಣ್ಣ ಬೆಣ್ಣೂರ, ಶ್ರೀ ಅಶೋಕ ಬ. ಚಲವಾದಿ, ಡಾ. ಶಿವಾನಂದ ಕರಕಂಚಿ, ಡಾ. ಶೋಭಾ ಕೈಲಾಸ ಡೋಣಿ, ಡಾ. ಸುನಿಲಕುಮಾರ ಬಿ. ಇವರನ್ನು ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಶೇಷ ಸನ್ಮಾನ ಮತ್ತು ಪ್ರಶಸ್ತಿ ಪುರಸ್ಕೃತರಾದ ಡಾ. ರವಿಕಾಂತಿ ಎಸ್. ಕ್ಯಾತನಾಳ, ಶ್ರೀ ಹೆಚ್. ದಾಸಪ್ಪ, ಪೆÇ್ರ. ಪಾರ್ವತಿ ಚೆಕ್ಕಿ, ಶ್ರೀಮತಿ ಸೈರಾಬಾನು ಆರ್. ನದಾಫ್, ಶ್ರೀ ವಿದ್ಯಾಧರ ಕಾಂಬಳೆ, ಶ್ರೀಮತಿ ಸವಿತಾ ಬಾಬುರಾವ ಜಮಾದಾರ, ಡಾ. ಸುನಿಲಕುಮಾರ ಕಾಂಬಳೆ, ಶ್ರೀಮತಿ ಸವಿತಾ ಎಸ್. ಕಾಂಬಳೆ, ಶ್ರೀ ಮನೋಹರ, ಶ್ರೀ ಪ. ಮಾನುಸಗರ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

























