ಕೊಲ್ಹಾರ; ಅ.14:ಸಂಕುಚಿತ ಪ್ರಾದೇಶಿಕತೆಗೆ ಒಳಗಾಗದೆ ಜೈ ಜಗತ್ ಎಂದು ಜಗತ್ತಿಗೆ ಸಾರಿದ್ದು ಇದೇ ನನ್ನ ಭಾರತ ದೇಶದ ಆದರ್ಶಪ್ರಾಯ ಅವಿಭಜಿತ ಜಿಲ್ಲೆ ವಿಜಯಪುರ ಎಂದು ಕೂಡಗಿ ಸರಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಬಸವರಾಜ ಜಾಲವಾದಿ ಹೇಳಿದರು.
ಅವರು ನಶಾಮುಕ್ತ ಭಾರತ ಅಭಿಯಾನದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡುತ್ತಿದ್ದರು. ಯಾವ ಯುವಕರೂ ಸಹ ಕೆಟ್ಟ ಅಭ್ಯಾಸಗಳಿಗೆ ದಾಸರಾಗದೆ ನಶಾ ಮುಕ್ತ ಭಾರತಕ್ಕೆ ಪಣತೊಟ್ಟು ಯಾವ ತೆರನಾದ ಬೇದ,ಭಾವ ಮಾಡದೇ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬಂತೆ ಬದುಕಿದರೆ ಅದೇ ರಾಷ್ಟ್ರಕ್ಕೆ ಸಲ್ಲಿಸುವ ಗೌರವ. ದೇಶದ ಹಿರಿಮೆ ಗರಿಮೆಗಳನ್ನು ಎತ್ತಿ ತೋರಿಸುವ, ಎಲ್ಲರನ್ನೂ ಒಂದುಗೂಡಿಸುವ ಎಲ್ಲರನ್ನೂ ಪ್ರೇರೇಪಿಸಿ ಮುನ್ನಡೆಸುವ ದೇಶ ನಮ್ಮದು ಎಂದು ಎಲ್ಲರೂ ಎದೆತಟ್ಟಿ ಹೇಳಿ ಕೊಳ್ಳಬೇಕು ಅದು ನಿಜವಾದ ರಾಷ್ಟ್ರಭಕ್ತಿ ಮತ್ತು ಪ್ರೇಮ ಅಂತಹ ಉಜ್ವಲ ರಾಷ್ಟ್ರಪ್ರೇಮವನ್ನು ಮರೆತಂದು ನಮ್ಮಗಳ ಅವನತಿ ಕಡಾಖಂಡಿತ ಎಂದು ಮಾರ್ಮಿಕವಾಗಿ ನುಡಿದರು.
ರಾಷ್ಟ್ರೀಯ ಭಾವೈಕ್ಯತೆ,ರಾಷ್ಟ್ರಧ್ವಜದ ಕುರಿತು ತರಬೇತಿ ನೀಡಿ ಮಾತನಾಡಿದ ನಾಗೇಶ್ ಡೋಣೂರ “ನನ್ನ ದೇಹದ ಬೂದಿ ಗಾಳಿಯಲ್ಲಿ ತೂರಿ ಬಿಡಿ ಹೋಗಿ ಬೀಳಲದು
ಭತ್ತ ಬೆಳೆಯುವಲ್ಲಿ. ಭತ್ತ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯವಾಯಿತು ಹುಟ್ಟು ಸಾವಿನಲ್ಲಿ… ಅನ್ನೋ ಕವಿಗಳು ಜನಿಸಿದ ನಾಡು, ದೇಶ ನನದು.ಎಂದು ನಾಗೇಶ ಡೋಣೂರ್ ಹೇಳಿದರು. ಯಾವುದು ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ದೇಶ,ನಾಡು ಆಗಿದೆಯೋ ಆ ದೇಶದ, ನಾಡಿನ ಬಗ್ಗೆ ಹೆಮ್ಮೆ ಪಡುವಂತಹ ಸಾಲುಗಳು ಪಠ್ಯಪುಸ್ತಕದ ರಕ್ಷಾಕವಚದ ಮೊದಲು ಹಾಗೂ ಕೊನೆಗಿವೆ ಒಮ್ಮೆ ಇಣುಕಿ ನೋಡಿ. ರಾಷ್ಟ್ರಗೀತೆ ಹಾಗೂ ನಾಡಗೀತೆಗೆ ಕೊಡುವ ಗೌರವದಲ್ಲಿ ವ್ಯತ್ಯಾಸವಾದರೂ ಕೂಡ ಸಹಿಸದ ಗುಣ ಯುವಕರಲ್ಲಿ ಬರಬೇಕು. ಅದು ನಿಜವಾದ ಅಭಿಮಾನ ಎಂದು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಕೆ. ಜಿ ಲಮಾಣಿ ಮಾತನಾಡಿ ನಾವೆಲ್ಲರೂ ಮೊದಲು ಭಾರತೀಯರು ಕಟ್ಟ ಕಡೆಗೂ ಭಾರತೀಯರು ಎಂಬುದನ್ನು ಎದೆ ತಟ್ಟಿ ಹೇಳಬೇಕು ಎಂದುಚ್ಛರಿಸಿದರು. ಒಂದು ಗುಟುಕು ನೀರು ಕೊಟ್ಟವರಿಗೂ ಸಹ ಜೀವನಪಯರ್ಂತ ಕಾಪಾಡುವಂಥ ದೇಶ ನಮ್ಮದು ಆದರೆ ಎಂದ ಭಾರತದ ಯುವಕರು ಹಾದಿ ತಪ್ಪುತ್ತಿದ್ದಾರಲ್ಲ ಎಂದು ಮನಸ್ಸಿಗೆ ತುಂಬಾ ವ್ಯಥೆಯಾಗುತ್ತಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಗೂ ಒಂದೇ ಮಾತರಂ, ವಿದಾಯದ ಗೀತೆಗಳನ್ನು ತಾಳಬದ್ದವಾಗಿ ಹಾಡುವುದರ ಕುರಿತು ವಿದ್ಯಾರ್ಥಿಗಳಿಗೆ ಎಸ್. ಎಲ್. ರಾಠೋಡ, ನಾಗೇಶ ಡೋಣೂರ್ ಈರ್ವರಿಂದಲೂ ತರಬೇತಿ ನೀಡಲಾಯಿತು.
ಪೆÇ್ರ; ವ್ಹಿ. ಜಿ ಕಿವುಡಜಾಡರ್ ಕಾರ್ಯಕ್ರಮ ನಿರ್ವಹಿಸಿದರು ಪೆÇ್ರ; ಎಸ್ ಬಿ. ದೇಸಾಯಿ ಸ್ವಾಗತಿಸಿದರು.
ವೇದಿಕೆಯ ಮೇಲೆ ಎಸ್ ಎಲ್ ರಾಠೋಡ ಎಸ್ ಬಿ ದೇಸಾಯಿ ವ್ಹಿ.ಜಿ ಕಿವುಡಜಾಡರ್ ಮಹಾಂತೇಶ್ ಪಾಟೀಲ್ ಮುಂತಾದವರು ಹಾಜರಿದ್ದರು.
























