
ವಾಡಿ:ಜ.28: ಜೀವನದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಕೋರ್ಟು, ಪೆÇಲೀಸ್ ಕಚೇರಿಗಳಿಗೆ ಅಲೆಯದೆ ಪಂಚಾಯಿತಿ ಕಟ್ಟೆಗಳಲ್ಲೇ ನ್ಯಾಯ ಬಗೆಹರಿಸಿಕೊಳ್ಳಬೇಕು ಎಂದು ಚಿತ್ತಾಪುರ ಸಿವಿಲ್ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ, ಜೆಡಿಎಸ್ ಮುಖಂಡ ಸುಭಾಷ್ ರಾಠೋಡ ಹೇಳಿದರು.
ಸೋಮವಾರ ಪಟ್ಟಣದ ಸೇವಾಲಾಲ ಭವನದಲ್ಲಿ ಬಂಜಾರಾ (ಲಂಬಾಣಿ) ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ 84 ತಾಂಡಾಗಳ ನಾಯಕ, ಕಾರಬಾರಿ, ಢಾವ್ ಮುಖಂಡರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೌಟುಂಬಿಕ ಕಲಹಗಳು, ಜಾಮೀನು ತಕರಾರುಗಳು, ಆಸ್ತಿ ಕಿರಿಕಿರಿಗಳು, ಕ್ಷುಲ್ಲಕ ಕಾರಣಕ್ಕೆ ನಡೆಯುವ ಜಗಳ ಪ್ರಕರಣಗಳನ್ನು ನ್ಯಾಯಾಲಯದವರೆಗೆ ತೆಗೆದುಕೊಂಡು ಹೋದ ಅಸಂಖ್ಯ ವ್ಯಾಜ್ಯಗಳು ಅಂತಿಮ ತೀರ್ಪು ಕಾಣದೆ ಉಳಿದಿವೆ. ಕೆಲವು ಪ್ರಕರಣಗಳು ಮೂವತ್ತು ನಲವತ್ತು ವರ್ಷಗಳಾದರೂ ಇತ್ಯರ್ಥವಾಗಿಲ್ಲ. ಸಂತ್ರಸ್ತರು ವಕೀಲರಿಗೆ ಮತ್ತು ಪೆÇಲೀಸರಿಗೆ ಹಣ ಸುರಿದು ಹಾಳಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿ ಒಂದೇ ತಾಸಿನಲ್ಲಿ ಸಮಸ್ಯೆ ಬಗೆಹರಿಸಬಹುದಾದ ಗ್ರಾಮ ನ್ಯಾಯಾಲಯಗಳನ್ನೇ ಜನರು ಆಶ್ರಯಿಸಬೇಕು. ಈ ಹಿಂದೆ ಊರಿನ ಹಿರಿಯರು ನಡೆಸುತ್ತಿದ್ದ ಪಂಚಾಯಿತಿ ಕಟ್ಟೆ ನ್ಯಾಯದಂತೆ ಗ್ರಾಮಕ್ಕೊಂದು ಗ್ರಾಮ ನ್ಯಾಯಾಲಯ ಜಾರಿಗೆ ತರುವ ಮೂಲಕ ಸರ್ಕಾರ ಪಂಚಾಯಿತಿ ಪಂಚರಿಗೆ ಗೌರವ ಸಂಭಾವನೆ ನೀಡಬೇಕು ಎಂಬ ವಾದ ಮುಂದಿಟ್ಟು ನಾನು ಕಾನೂನು ಹೋರಾಟ ಆರಂಭಿಸಿದ್ದೇನೆ. ಜನರು ಇದನ್ನು ಬೆಂಬಲಿಸಬೇಕು ಎಂದರು. ನಮ್ಮ ಸಮಾಜ ಇತಿಹಾಸ ಉಳ್ಳ ಸಮಾಜ ನಮ್ಮ ನ್ಯಾಯಲಯದಲ್ಲಿ ಬಗೆಹರಿಯದೆ ನ್ಯಾಯ ಬಗೆಹರಿಸುತ್ತದೆ ಇಂತಹ ಪವಿತ್ರ ವಾದ ಸಮಾಜ ನಮ್ಮ ಸಮಾಜ ನಮ್ಮ ಹಕ್ಕು ಕೇಳ್ಳುತ್ತಿದೆ ವಿನಃ ಸರಕಾರಕ್ಕೆ ಭಿಕ್ಷೆ ಅಲ್ಲ ಡಾ ಬಾಬಾ ಸಾಹೇಬ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಅದರ ಹಕ್ಕು ನಮ್ಗೆ ಕೊಡಿ ಅಂಬೇಡ್ಕರ್ ಸಾಹೇಬ್ರು ಬರೆದಿರುವ ಸಂವಿಧಾನ ಎಲರನು ಹಕ್ಕು ಸಿಗಲಿ ಬಡವರಿಗೆ ಹಾಗು ದಿನ ದಲಿತರಿಗೆ ಸಮಾನತೆ ಸಿಗಲಿ ಎಂದು ಅವರು ಬರೆದಿದ್ದಾರೆ ಆದರೆ ಈಗಿನ ಸರಕಾರ ತಮ್ಮ ಸ್ವಾರ್ಥಕಾಗಿ ಒಬ್ಬರಿಗೆ ನ್ಯಾಯ ಇನೊಬರಿಗೆ ಅನ್ಯಾಯ ಮಾಡುತ್ತಿದೆ ತಾರತಮ್ಯ ಮಾಡುತ್ತಿದೆ ಜಾತಿ ಜಗಳ ಹಚ್ಚು ತಿವೆ ನಮ್ಮ ಸಮಾಜ ದುಡಿದು ತಿನ್ನುವ ಸಮಾಜ ಯಾರಿಗೆ ದೋಸಿಸುವ ಸಮಾಜ ಅಲ್ಲ ತಮ್ಮ ಹಕ್ಕು ತಮಗೆ ಬೇಕು ಎನ್ನುವ ರೀತಿಯಲ್ಲಿ ಕೇಳ್ಳುತ್ತಿವೆ ಇಲ್ಲ ಅಂದರೆ ಕಾನೂನು ಹೋರಾಟಕ್ಕೆ ಸಿದ್ದ ಎಂದು ಸರಕಾರ ಎಚ್ಚರಿಕೆ ನೀಡಿದರು
ನಿವೃತ್ತ ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಒಳಮೀಸಲಾತಿ ಕಾಯ್ದೆಯಿಂದ ಬಂಜಾರಾ ಸಮುದಾಯಕ್ಕೆ ತೊಂದರೆಯಾಗಲಿದೆ. ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯಗಳಿಂದ ಬಂಜಾರಾ ಸಮುದಾಯಕ್ಕೆ ಮೋಸವಾಗಲಿದೆ. ಒಳಮೀಸಲಾತಿ ವಿರುದ್ಧ ಬೀದಿ ಹೋರಾಟ ನಡೆಸಿದರೆ ನ್ಯಾಯ ಸಿಗುವುದಿಲ್ಲ. ಬದಲಿಗೆ ಕೇಸ್ ದಾಖಲಿಸಿ ಹಿಂಸೆ ನೀಡುತ್ತಾರೆ. ಆದ್ದರಿಂದ ನಾವೆಲ್ಲರೂ ಪಕ್ಷಬೇಧ ಮರೆತು ಒಗ್ಗಟ್ಟಾಗಬೇಕು. ಸರ್ಕಾರ ಯಾವುದೇ ಪಕ್ಷದ್ದಿರಲಿ ಅನ್ಯಾಯ ಪ್ರಶ್ನೆ ಮಾಡಲು ಹಿಂಜರಿಯಬಾರದು. ಕಾನೂನು ಹೋರಾಟದಿಂದ ಮಾತ್ರ ಒಳಮೀಸಲಾತಿ ಜಾರಿಯನ್ನು ತಡೆಯಬಹುದು ಎಂದು ಎಚ್ಚರಿಸಿದರು.
ಸಾನಿಧ್ಯ ವಹಿಸಿದ್ದ ಹಲಕರಟಿ ಸಿದ್ದೇಶ್ವರ ಹಿರೇಮಠದ ಶ್ರೀ ರಾಜಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಠಾಕೂರ ಮಹಾರಾಜ, ಬಂಜಾರಾ ಸಮಾಜದ ಅಧ್ಯಕ್ಷ ರಮೇಶ ಕಾರಬಾರಿ, ಪ್ರಧಾನ ಕಾರ್ಯದರ್ಶಿ ಸೋಮನಾಥ ಚವ್ಹಾಣ, ಗೋರ್ ಬಂಜಾರಾ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಬಾಳಾಸಾಹೇಬ ರಾಠೋಡ, ಸೇವಾಲಾಲ್ ಜಯಂತ್ಯುತ್ಸವ ಅಧ್ಯಕ್ಷ ಪೆÇೀಮು ರಾಠೋಡ, ಮುಖಂಡರಾದ ಬಿ.ಬಿ.ನಾಯಕ, ವಿಠ್ಠಲ್ ವಾಲ್ಮೀಕಿ ನಾಯಕ, ರಾಮಚಂದ್ರ ರಾಠೋಡ, ಸುರೇಶ ರಾಠೋಡ, ಸೋಮಸಿಂಗ್ ರಾಠೋಡ, ಹಣಮಂತ ಚೌವ್ಹಾಣ, ಅಂಬಾದಾಸ ಜಾಧವ, ತುಕಾರಾಮ ರಾಠೋಡ, ಕಿಶನ ಜಾಧವ ಸೇರಿದಂತೆ ವಿವಿಧ ತಾಂಡಾಗಳ ಮುಖಂಡರು ಪಾಲ್ಗೊಂಡಿದ್ದರು. ಸಂಜೀವ್ ರಾಠೋಡ ನಿರೂಪಿಸಿ, ವಂದಿಸಿದರು.

























