ಕಾನೂನು ಅರಿವು ಕಾರ್ಯಕ್ರಮ

ಲಕ್ಷ್ಮೇಶ್ವರ,ಜ18: ಬೀೀದಿ ಬದಿ ವ್ಯಾಪಾರಸ್ಥರು ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದು ಲಕ್ಷ್ಮೇಶ್ವರದ ದಿವಾಣಿ ನ್ಯಾಯಾದೀಶ ಸತೀಶ ಎಂ. ಹೇಳಿದರು.

ಅವರು ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಡಿ ನಲ್ಮ ಕಾರ್ಯಕ್ರಮ ದಡಿಯಲ್ಲಿ ಕೌಶಲ್ಯಾಬಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಬೆಂಗಳೂರು, ಜಿಲ್ಲಾ ಆಡಳಿತ ಗದಗ,ಪುರಸಭೆ ಲಕ್ಷ್ಮೇಶ್ವರ ಇವರುಗಳ ಸಹಯೋಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಬೀದಿ ಬದಿ ವ್ಯಾಪಾರಸ್ಥರು ಪುರಸಭೆಯವರು ಹಾಕಿಕೊಟ್ಟ ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯಾಪಾರ ಮಾಡಬೇಕು, ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಮಿಟಿ ಇರುತ್ತದೆ ಅದರಲ್ಲಿ ಅರೋಗ್ಯ ಇಲಾಖೆ, ಸರಕಾರದಿಂದ ನಾಮ ನಿರ್ದೇಶನ ಸದಸ್ಯರು ಇರುತ್ತಾರೆ,ಅದಲ್ಲದೆ ಸ್ಥಳೀಯ ನ್ಯಾಯಾದೀಶರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ಇರುತ್ತದೆ, ಅಲ್ಲಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು, ಉಚಿತ ಕಾನೂನ ಸೇವಾ ಪ್ರಾಧಿಕಾರದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು, 5 ವರ್ಷಕೊಮ್ಮೆ ಬೀದಿ ಬದಿ ವ್ಯಾಪಾರಸ್ಥರಿಗೆ ಅಂತಾ ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿದರೆ ಅಲ್ಲಿಂದ ಅನುದಾನ ಪಡೆದುಕೊಳ್ಳಬಹುದು, ಐ ಡಿ ಕಾರ್ಡ ಲೈಸೆನ್ಸ್ ಹೊಂದಿದ್ದರೆ ಬ್ಯಾಂಕಗಳಲ್ಲಿ ಸಾಲಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ವಕೀಲ ಪ್ರಕಾಶ ವಾಲಿ ಮಾತನಾಡಿ, ಪ್ರತಿಯೊಬ್ಬರು ಬೀದಿ ಬದಿ ವ್ಯಾಪಾರಸ್ಥರ ಕಾನೂನುಗಳನ್ನು ತಿಳಿದುಕೊಳ್ಳಬೇಕು, ಪುರಸಭೆ ಗುರುತಿಸಿದ ಜಾಗೆಯಲ್ಲಿ ಬಿಟ್ಟು, ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ, ಐ ಡಿ ಕಾರ್ಡ ಹಾಕಿಕೊಂಡು ವ್ಯಾಪಾರ, ಮಾಡಬೇಕು, ಚಿಕ್ಕಮಕ್ಕಳ ಕರೆದುಕೊಂಡು ವ್ಯಾಪಾರ ಮಾಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಿ ವ್ಹಿಸಿ ಕಾರ್ಯದರ್ಶಿ ಹಾಗೂ ಸಮುದಾಯ ಸಂಘಟನಾ ಅಧಿಕಾರಿ ಶೋಭಾ ಬೆಳ್ಳಿಕೊಪ್ಪ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ, ನ್ಯಾಯಾಂಗ ಇಲಾಖೆಯ ದಿನೇಶ ಎಸ್ ಕೆ,ಪೆÇಲೀಸ ಇಲಾಖೆಯ ಸಂತೋಷ ಸಾತಪುತೆ, ಪುರಸಭೆ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ, ಸಿ.ಆರ್.ಪಿ. ಗಳಾದ ಲಕ್ಷ್ಮಿ ಓದು, ಇಂದಿರಾ ಸವಣೂರ ಇದ್ದರು.