
ಕೋಲಾರ,ಜು,೨-ಇತ್ತೀಚಿಗೆ ಅಭಿವೃದ್ಧಿ ಹೊಂದುತ್ತಿರುವ ಪ್ರಪಂಚದಲ್ಲಿ ಮಹಿಳೆಯರನ್ನು ಸಮುದಾಯ ಯೋಜನೆ ರೂಪಿಸುವಿಕೆ ಹಾಗೂ ಅಭಿವೃದ್ಧಿ ಪ್ರಕ್ರಿಯೆಗಳಿದದಿ ಹೊರಗಿಡುವ ಮೂಲಕ ಅವರನ್ನು ಕಡೆಗಣಿಸಲಾಗುತ್ತಿದೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಟೇಶ್ ಆರ್ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ, ಗ್ರಾಮೀಣ ಮಹಿಳಾ ಒಕ್ಕೂಟ ಹೊನ್ನಶೆಟ್ಟಿಹಳ್ಳಿ, ಕೋಲಾರ ತಾಲ್ಲೂಕು ಇವರ ಸಂಯುಕ್ತ ಆಶ್ರಯದಲ್ಲಿ “ಪರ್ಯಾಯ ಜೀವನೋಪಾಯಗಳು ಮತ್ತು ಮಹಿಳೆಯರಿಗೆ ಕಾನೂನು ಹಾಗೂ ಹಕ್ಕುಗಳ ಬಗ್ಗೆ ವಿಷಯಾಧಾರಿತ ಸಮಾವೇಶ” ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹೊನ್ನ ಶೆಟ್ಟಿಹಳ್ಳಿ, ಕೋಲಾರ ತಾಲ್ಲೂಕಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಬಲೀಕರಣದೆಡೆಗೆ ಸಮುದಾಯಗಳು ಹಾಗೂ ವ್ಯಕ್ತಿಗಳ ಆಲೋಚನೆಯಲ್ಲಿ ಬದಲಾವಣೆತರುವುದು, ಮಹಿಳೆಯರ ಹಕ್ಕುಗಳ ಕಡೆಗೆ ಸಮುದಾಯಗಳು ಹಾಗೂ ಕುಟುಂಬಗಳಲ್ಲಿನ ಪುರುಷರ ಧೋರಣೆಯಲ್ಲಿ ಬದಲಾವಣೆಯನ್ನು ತರುವುದು, ವ್ಯಕ್ತಿಗಳು ಹಾಗೂ ಸಮುದಾಯಗಳಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ತಾಂತ್ರಿಕ ಬದಲಾವಣೆಯ ಸಕಾರಾತ್ಮಕ ಅಂಶಗಳ ಕುರಿತು ಅರಿವನ್ನು ಮೂಡಿಸುವುದು, ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಮಹಿಳೆಯಯರನ್ನು ಸಮಾನ ಭಾಗೀದಾರರಾಗಿ ಭಾಗವಹಿಸಲು ಸಶಕ್ತರನ್ನಾಗಿಸುವುದವುದು, ಸಮುದಾಯಗಳಲ್ಲಿ ವಿಶೇಷವಾಗಿ ಕಾರ್ಯನಿರ್ವಹಣಾಕ್ಷೇತ್ರದ ಮಹಿಳೆಯರಿಗಾಗಿ ಹಾಗೂ ಅವರೊಂದಿಗೆ ಕೆಲಸ ನಿರ್ವಹಿಸುವಲ್ಲಿ ಒಕ್ಕೂಟದ ಅನುಭವ ಹಾಗೂ ಉತ್ತಮ ಕಾರ್ಯನಿರ್ವಹಣೆ ಗ್ರಾಮಗಳಲ್ಲಿನ ಸಮುದಾಯಗಳಿಂದ ಸಶಕ್ತ ಮಹಿಳಾ ಕಾರ್ಯಕರ್ತರ ದೊಡ್ಡತಂಡಗಳನ್ನು ಮಾಡಿ ಅವರ ಕಾರ್ಯ ವೈಖರಿಗಳನ್ನು ಸಂಸ್ಥೆಗಳಲ್ಲಿ ಹಾಗೂ ಯೋಜನೆಗಳಲ್ಲಿ ಕೆಲಸ ಮಾಡಿರುವ ಅಪಾರ ಅನುಭವ ಹೊಂದಿರಬೇಕು ಎಂದು ಸದಸ್ಯ ಕಾರ್ಯದರ್ಶಿಗಳು ತಿಳಿಸಿದರು.
ಕೋಲಾರ ಜಿಲ್ಲಾ ಗ್ರಾಮೀಣ ಮಹಿಳಾ ಒಕ್ಕೂಟ ಮಹಿಳೆಯರಲ್ಲಿ ಭಾರತದ ಸಂವಿಧಾನವು ಅವರಿಗೆ ಒದಗಿಸಿರುವ ಹಕ್ಕುಗಳ ಕುರಿತಂತೆ ಅರಿವು ಮೂಡಿಸುವುದು ಹಾಗೂ ಅವರಿಗೇ ತಮ್ಮ ಸ್ವಂತ ಬಲದ ಮೇಲೆ ಪ್ರಬಲವಾದ ಮುಂದಾಳುಗಳಾಗಿ ಬೆಳೆಯಲು ಅಗತ್ಯ ನೆರವನ್ನು ಒದಗಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ವ್ಯಕ್ತಿಗಳಾಗಿ ಮಹಿಳೆಯರಾಗಿ ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ಆರಿವನ್ನು ಹೊಂದುವುದು ಹಾಗೂ ಜೀವನೋಪಾಯ ವೃದ್ಧಿಸುವ ಯೋಜನೆಗಳು, ಸುಧಾರಿತ ಆರೋಗ್ಯ ರಕ್ಷಣೆ, ಶಿಕ್ಷಣ ನೀರು ಹಾಗೂ ನೈರ್ಮಲ್ಯ ಸ್ಥಳೀಯ ಆಡಳಿತದಲ್ಲಿ ಭಾಗವಹಿಸುವಂತಹ, ಇಡೀ ಸಮುದಾಯಗಳಿಗೆ ಲಾಭವನ್ನು ಒದಗಿಸುವಂತಹ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗೀದಾರರಾಗುವ ನಿಟ್ಟಿನಲ್ಲಿ ಅವರನ್ನು ಸಬಲರನ್ನಾಗಿಸುವ ಉದ್ದೇಶದೊಂದಿಗೆ ಒಕ್ಕೂಟ ಹಳ್ಳಿಗಳಲ್ಲಿ ಗ್ರಾಮೀಣ ಮಹಿಳಾ ಗುಂಪುಗಳನ್ನು ಸಂಘಟಿಸುವ ಕೆಲಸದಲ್ಲಿ ತೊಡಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟ ಅಧ್ಯಕ್ಷ ಸುನಂದಮ್ಮ, ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕರು ಎಸ್. ಸತೀಶ್, ಆರ್. ರವಿಚಂದ್ರನ್, ಮುಳಬಾಗಿಲು ಗ್ರಾಮೀಣ ಖಾತ್ರಿ ಯೋಜನೆ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಸಹಾಯಕ ನಿರ್ದೇಶಕರು ರವಿಕುಮಾರ್ ಹಾಗೂ ಕೃಷಿ ಇಲಾಖೆಯ ಕೃಷಿ ಸಹಾಯಕ ನಿರ್ದೇಶಕರು, ಗ್ರಾಮೀಣ ಮಹಿಳಾ ಒಕ್ಕೂಟ ಆಯೋಜಕರಾದ ಪಾಪಮ್ಮ, ಗ್ರಾಮೀಣ ಮಹಿಳಾ ಒಕ್ಕೂಟ ಸದಸ್ಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.