ಪ್ರತಿಯೊಬ್ಬರಿಗೆ ಕಾನೂನು ಅರಿವು ಮುಖ್ಯ


ಗದಗ,ಜ.೩೦: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಎ.ಡಿ.ಆರ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ, ಜಿಲ್ಲಾ ವಕೀಲರ ಸಂಘ ಹಾಗೂ ಡೀಡ್ಸ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರೇ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ಸಮಾರಂಭ ನಡೆಯಿತು.


ಜಿಲ್ಲೆಯಾಧ್ಯಂತ ೨೪೦ಕ್ಕೂ ಹೆಚ್ಚು ಅರೇ ಕಾನೂನು ಸ್ವಯಂ ಸೇವಕರಾಗಿ ನೇಮಕಗೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ಮುಖ್ಯವಾಗಿದೆ. ಸಮಾಜಕ್ಕಾಗಿ ದುಡಿಯಲು ವಾಲೆಂಟೆರ್ಸ್ ಗಳು ಸಿದ್ದರಿದ್ದಾರೆ. ಅವರು ಮನೆ-ಮನೆಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಲು ಸಿದ್ದರಿದ್ದಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಆಲಿಸಬೇಕು. ಇದರಿಂದ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಸಹ ಈ ಮೂಲಕ ಮರಳಿ ಶಾಲೆಗೆ ಸೇರಿಸಬಹುದು. ಗದಗ ಜಿಲ್ಲೆಯನ್ನು ಸಮಸ್ಯೆ ಮುಕ್ತ ಮಾಡಲು ಶ್ರಮಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಹೇಳಿದರು.


ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಮ್.ಎ ಸಂಕನಾಳ ಮಾತನಾಡಿ, ಕಾನೂನು ತಿಳುವಳಿಕೆ ಪ್ರತಿಯೊಬ್ಬ ನಾಗರಿಕನ ಮುಖ್ಯ ಉದ್ದೇಶವಾಗಿದೆ. ಆತ್ಮರಕ್ಷಣೆಗಾಗಿ ಕಾನೂನು ಅವಶ್ಯಕತೆ ಇದೆ. ಕಾನೂನು ಕಾರ್ಯಗಾರಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಹಾಯವಾಗುತ್ತದೆ ಎಂದರು.


ಮಹಿಳಾ ವಾಲೆಂಟರ್ಸ್ ಗಳಾದ ರೂಪಾ ಹಾಗೂ ನಿರ್ಮಲಾ ಪ್ರಾರ್ಥನಾ ಗೀತೆ ಹಾಡಿದರು. ಎ. ಎಸ್ ಮಕಾನಾದಾರ ಸ್ವಾಗತಿಸಿದರು. ಫಕ್ಕಿರಮ್ಮ ಲಕ್ಕುಂಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಜಿ. ಸಿ ರೇಷ್ಮಿ, ಡೀಡ್ಸ್ ಯೋಜನಾ ಸಂಯೋಜಕರಾದ ತುಕಾರಾಮ್ ಎಕ್ಕಾರು, ಮುಖ್ಯ ಕಾನೂನು ನೆರವು ಅಭಿಕ್ಷಕರಾದ ಎಸ್. ವ್ಹಿ ಗ್ರಾಮಪುರೋಹಿತ ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಗುರುರಾಜ ಬಿ. ಗೌರಿ ಉಪಸ್ಥಿತರಿದ್ದರು.