ಕಾನೂನು ಅರಿವು ನೆರವು ಕಾರ್ಯಕ್ರಮ

ಬಾದಾಮಿ,ಆ18: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಖಾಯಂ ಜನತಾ ನ್ಯಾಯಾಲಯ ಹಾಗೂ ಒeಜiಚಿಣioಟಿ ಜಿoಡಿ ಣhe ಟಿಚಿಣioಟಿ 90 ಜಚಿಥಿs ಆಡಿive ಪ್ರಚಾರದ ಅಂಗವಾಗಿ ಹಮ್ಮಿಕೊಂಡಿರುವ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ವಕೀಲರ ಸಂಘದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಖಾಯಂ ಜನತಾ ನ್ಯಾಯಾಲಯ ಮತ್ತು ಮಧ್ಯಸ್ಥಿಕೆ ಕೇಂದ್ರದಿಂದ ಕಕ್ಷಿದಾರರಿಗೆ ಆಗುವ ಪ್ರಯೋಜನಗಳ ಕುರಿತು ಹೇಳಿದರು.


ಹಿರಿಯ ನ್ಯಾಯವಾದಿ ಎನ್.ಬಿ.ಹೊಸಮನೆ ಮಾತನಾಡಿ ಖಾಯಂ ಜನತಾ ನ್ಯಾಯಾಲಯಗಳ ಕುರಿತು ಮಾತನಾಡಿದರು ಹಾಗೂ ಮತ್ತೊರ್ವ ಹಿರಿಯ ವಕೀಲ ಕೆ.ಟಿ.ಪವಾರ ಮಾತನಾಡಿ ಮಧ್ಯಸ್ಥಿಕೆದಿಂದಾಗುವ ಪ್ರಯೋಜನಗಳ ಕುರಿತು ಮಾತನಾಡಿದರು


ವಕೀಲರ ಸಂಘದ ಅಧಕ್ಷ ಪಿ.ಬಿ.ಕಲಾಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಹರೀಶ ಜಾಧವ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ, ವಕೀಲರ ಸಂಘದ ಉಪಾಧ್ಯಕ್ಷ ವಿ.ಎಸ್.ಹೋಳಿ, ಕಾರ್ಯದರ್ಶಿ ವೈ.ಎಸ್.ತೊಗರಿ, ಹಾಗೂ ವಕೀಲರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಐ.ಕೆ.ಮುಲ್ಲಾ ನಿರೂಪಿಸಿ ವಂದಿಸಿದರು.