ಆಳಂದ: ಅಪ್ರಾಪ್ತ ಬಾಲಕಿಯರು ದೌರ್ಜನ್ಯ ಸಹಿಸಿಕೊಳ್ಳದೆ ಕಾನೂನಿನ ಮೂಲಕ ನ್ಯಾಯ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಗುರಿ ತಲುಪಬೇಕು ಎಂದು ಸಿಎಂಎಫ್ಸಿ ನ್ಯಾಯಾಲಯ ನಾಯಾಧೀಶೆ ಹಾಗೂಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಕುಮಾರಿ ಸುಮನ ಚಿತ್ತÀರಗಿ ಅವರು ಕರೆ ನೀಡಿದರು.
ಪಟ್ಟಣದ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಮತ್ತು ಪತ್ರಕರ್ತರ ಸಂಘದ ಆಶ್ರÀಯದಲ್ಲಿ ಹಮ್ಮಿಕೊಂಡ ಮಾನಿಸಿಕ ಆರೋಗ್ಯ ದಿನ, ಅಂತರಾಷ್ಟಿçÃಯ ಬಾಲಕಿಯರ ದಿನ ಹಾಗೂಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ದೌರ್ಜನ್ಯ ತಡೆಗೆ ಪೋಸ್ಕೋ ಕಾಯ್ದೆ ನೆರವಿಗೆ ಬರಲಿದೆ ಎಂಬವು ಕಾನೂನಿನ ಕರಿತಾಗಿ ಇನ್ನಿತರ ವಿಷಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಮಾತನಾಡಿ, ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮಂಗಳವಾರ ರಜೆ ಹೊರತು ಪಡಿಸಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಔಷಧಿ, ಸಲಹೆ ಮಾರ್ಗದರ್ಶನಗಳು ನೀಡಲಾಗುತ್ತಿದೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಮಾನಸಿಕ ರೋಗಿಗಳ ಸಂಖ್ಯೆ ಉಲ್ಬಣಕ್ಕೆ ಆತಂಕ ಹೊರಹಾಕಿದ ಅವರು ಇದರಿಂದ ಹೊರಬರಲು ಮುಂಜಾಗೃತ ಕ್ರಮವನ್ನು ಅನುಸರಿಸಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯಗುರು ಶ್ರೀಮಂತ ಹತ್ತರಕಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರವೀಣ ಕಮ್ಮಾರ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ್ ವಿ. ರಾಠೋಡ, ಕಾರ್ಯದರ್ಶಿ ಬಲಭೀಮ ಟಿ. ಸಿಂಧೆ, ಸರ್ಕಾರಿ ವಕೀಲ ಇಸ್ಮಾಯಿಲ್ ಪಟೇಲ್, ಜೋತಿ ವಿ. ಬಂದಿ ವೇದಿಕೆಯಲ್ಲಿದ್ದರು. ನ್ಯಾಯವಾದಿ ಎಂ.ವಿ. ಏಕಬೋಟೆ ಮಾನಸಿಕ ಆರೋಗ್ಯ ದಿನ ಮತ್ತು ಅಂತರಾಷ್ಟಿçÃಯ ಬಾಲಕಿಯರ ದಿನ ಕುರಿತು ಉಪನ್ಯಾಸ ನೀಡಿದರು.
ಶಾಲೆಯ ಬಸವರಾಜ ಪಾಟೀಲ, ಮಲ್ಲಿನಾಥ ಖಜೂರಿ, ªಶರಣಮ್ಮ ಪಟ್ಟಣಕರ್, ಶರಣಪ್ಪ ಪೂಜಾರಿ ಸೇರಿದಂತೆ ವಕೀಲರು, ಶಾಲಾ ಸಿಬ್ಬಂದಿಗಳು ಹಾಗೂವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಶಾಲೆಯ ಸಹ ಶಿಕ್ಷಕ ದಶರಥ ಕಠಾರೆ ನಿರೂಪಿಸಿದರು ಚಿತ್ರಕಲಾ ಶಿಕ್ಷಕ ಮಹಾಂತಪ್ಪ ಭೂಪರೆಡ್ಡಿ ವಂದಿಸಿದರು.




















