Home ಜಿಲ್ಲೆ ಬೆಂಗಳೂರು ಸ್ಕಾಟ್ ಪ್ರೇಶ್ ಕಂಪನಿ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಸ್ಕಾಟ್ ಪ್ರೇಶ್ ಕಂಪನಿ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಮಾಲೂರು.ಫೆ೧೬:ಕೋಳಿ ಮರಿಗಳನ್ನು ಮೇಯಿಸಿಕೊಟ್ಟ ಕೂಲಿ ಹಣವನ್ನು ನೀಡದೇ ಪದೇ ಪದೇ ಸತಾಯಿಸುತ್ತಾ ಕೂಲಿಯ ಹಣವನ್ನು ಪಡೆಯಬೇಕಾಗಿರುವ ರೈತನ ಮೇಲೆ ಚೆಕ್‌ಬೌನ್ಸ್ ನ್ನು ಹಾಕಿ ಬ್ಲಾಕ್ ಮೆಲ್ ಮಾಡುತ್ತಿರುವ ಮಂಜುನಾಥ ಸ್ಕಾಟ್ ಪ್ರೇಶ್ ಕಂಪನಿಯ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಕೋಳಿ ಸಾಕಾಣಿಕೆದಾರರ ಸಹಕಾರ ರೈತ ಸಂಘದ ಪದಾಧಿಕಾರಿಗಳು ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಕೋಳಿ ಸಾಕಾಣಿಕೆದಾರರ ಸಹಕಾರ ರೈತ ಸಂಘದ ಅಧ್ಯಕ್ಷ ರಾಜಕುಮಾರ್ ಕೋಳಿಸಾಕಾಣಿಕೆದಾರ ರೈತ ತನ್ನ ಜಮೀನನ್ನು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದು ಕೋಳಿ ಮರಿಗಳನ್ನು ಸಾಕಾಣಿಕೆ ಮಾಡಲು ಸುಮಾರು ೫೦ ದಿನಗಳು ಹಗಲು ರಾತ್ರಿ ಮಳೆ ಬಿಸಿಲು ಚಳಿ ಎನ್ನದೇ ಕಾಡಿನಿಂದ ಶೇಡ್ ನ್ನು ನಿರ್ಮಿಸಿಕೊಂಡಿರುತ್ತಾನೆ. ನಂತರ ಕೋಳಿ ಕೂಡಿರುವ ತೋಟಗಳ ಬಳಿ ಹಾವು, ಚಿರತೆ, ಮುಂತಾದ ಜೀವ ಜಂತುಗಳಿಂದ ತನ್ನ ಪ್ರಾಣವನ್ನು ಲೆಕ್ಕಿಸದೇ ಕಾರ್ಮೋರೇಟ್ ಕಂಪನಿ ಕೊಡುವಂತಹ ಕೋಳಿ ಮರಿಗಳನ್ನು ಮೇಯಿಸಲು ಸುಮಾರು ಹಣವನ್ನು ಖರ್ಚು ಮಾಡಿಕೊಂಡಿರುತ್ತಾರೆ. ನಂತರ ಅನೇಕ ಕಷ್ಟಗಳು ಮತ್ತು ಸಮಸ್ಯೆಗಳನ್ನು ಎದುರಿಸಿ ಕಾರ್ಪೋರೇಟ್
ಕಂಪನಿಯವನು ನೀಡಿದ ಕೋಳಿ ಮರಿಗಳನ್ನು ಜೋಪಾನವಾಗಿ ಸಾಕಿ ದೊಡ್ಡದು ಮಾಡಿಕೊಡುತ್ತಾನೆ.


ಕೋಳಿಗಳನ್ನು ಮೇಯಿಸಿಕೊಟ್ಟ ನಂತರ ಕಂಪನಿಯವರು ನೀಡುವ ಹಣವನ್ನು ಪಡೆಯಲು ಸುಮಾರು ೩-೪ ತಿಂಗಳು ಕಾಯುತ್ತಿರುತ್ತಾನೆ. ರೈತನ ಕುಟುಂಬ ನಿರ್ವಹಣೆ ಅವನು ಹೊಂದಿರುವ ಕೋಳಿಫಾರಂಗಳ ಮೇಲೆ ಆವಲಂಭಿತರಾಗಿರುತ್ತಾರೆ. ನಂತರ ಇಷ್ಟೇಲಾ ಕಟ್ಟಪಟ್ಟು ಕೋಳಿ ಮರಿಗಳನ್ನು ಪಾಲನೆ ಮಾಡಿಕೊಟ್ಟರು ರೈತನದುಡಿಮೆಯ ಹಣವನ್ನು ನೀಡದೇ ಪದೇ ಪದೇ ಸತಾಯಿಸಿದ್ದಾರೆ.


ಚಿಕ್ಕಇಗ್ಗಲೂರು ಗ್ರಾಮದ ರೈತ ವೆಂಕಟೇಶಪ್ಪ, ಕುಡಿಯನೂರು ಗ್ರಾಮದ ರೈತ ಅಶ್ವರಪ್ಪ ಆವರು ಮೋಸ ಹೋಗಿರುವ ರೈತರಾಗಿರುತ್ತಾರೆ. ಈ ರೈತರಿಗೆ ನ್ಯಾಯವನ್ನು ಒದಗಿಸಿಕೊಟ್ಟು ಈ ರೀತಿ ಬ್ಲಾಕ್ ಮೇಲ್ ಮಾಡಿ ವಂಚಿಸುತ್ತಿರುವ ಮಂಜುನಾಥ ಸ್ಕಾಟ್ ಪ್ಲೇಸ್ ಕಂಪನಿಯ ಮಾಲೀಕನ ಮೇಲೆ ಕಾನೂನಿನ ಕ್ರಮ ಕೈಗೊಂಡು ರೈತರಿಗೆ ಮಾಡುತ್ತಿರುವ ವಂಚನೆಯನ್ನು ತಡೆಗಟ್ಟಬೇಕೆಂದು ಈ ಮೂಲಕ ಒತ್ತಾಯಿಸಿ ದೂರು ನೀಡಿದ್ದಾರೆ.


ಕೋಳಿ ಸಾಕಾಣಿಕೆದಾರ ಸಹಕಾರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಬಿ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್, ಸದಸ್ಯರಾದ ರಾಜಪ್ಪ ಎಸ್.ಎಂ ರಮೇಶ್, ರಾಮ್ ಶ್ರೀನಿವಾಸ್, ಮರಿಸ್ವಾಮಿ ಗೌಡ ಅಬ್ಬಯ್ಯಪ್ಪ ಮಂಜುನಾಥ್ ರೈತ ಮುಖಂಡರಾದ ರಾಮಚಂದ್ರಪ್ಪ, ಮಧು, ಮುರಳಿ ,ತಾನಪ್ಪ, ಸ್ವಾಮಿ ನಾರಾಯಣಗೌಡ ,ಶ್ರೀನಾಥ್ ಇನ್ನಿತರರು ಹಾಜರಿದ್ದರು.