ಉಪನ್ಯಾಸ ಕಾರ್ಯಕ್ರಮ

ಸುತ್ತೂರು,ಅ14 : ಮನುಷ್ಯ ತನ್ನ ಜೀವನದಲ್ಲಿ ಏನನ್ನಾದರೂ ನಿರಂತರವಾಗಿ ಸಾಧನೆ ಮಾಡಾಬೇಕಾದಲ್ಲಿ ರಾಮಾಯಣ ಯುದ್ಧ ಕಾಂಡ ಪಾರಾಯಣ ಮತ್ತು ಶ್ರವಣ ಅವಶ್ಯ ಎಂದು ಪಂ. ವಾದಿರಾಜಆಚಾರ್ಯ ಮಠದ ತಿಳಿಸಿದರು.

ನಾರಾಯಣ ಪಾರಾಯಣ ಬಳಗ ಆಶ್ರಯದಲ್ಲಿ ಹನುಮಂತ ಪುರಾಣಿಕ ನಿವಾಸದಲ್ಲಿ ಜರುಗಿದ ಯುದ್ಧ ಕಾಂಡ ಉಪನ್ಯಾಸ ಮಾತನಾಡುತ್ತಾ ಹನುಮಂತ ದೇವರ ಮಹಿಮೆ, ಶ್ರೀ ರಾಮಚಂದ್ರನಲ್ಲಿ ತೋರಿದ ಸೇವಾ ಮನೋಭಾವ ಲಂಕಾ ದಹನ ರಾವಣನ ತಮ್ಮನಾದ ವಿಭೀಷಣನ ಪಟ್ಟಾಭಿಷೇಕ ಯುದ್ಧದ ತಂತ್ರ ಪ್ರತಿ ತಂತ್ರ ಗಳ ಸಾಮಥ್ರ್ಯ ಪಾಪ ಪುಣ್ಯ ಕದನ ಹಾಗೂ ಹೃದಯ ಸಿಂಹಾಸನ ಚಕ್ರವರ್ತಿ ಪರಮಾತ್ಮ ಶ್ರೀ ರಾಮಚಂದ್ರನಿಂದ ಹತ್ತು ತಲೆಯ ರಾವಣ ಕುಂಭ ಕರ್ಣ ಸಂಹಾರ ಕುರಿತು ಸುಂದರವಾಗಿ ವರ್ಣಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಪಾರಾಯಣ ಹಾಗೂ ನಾರಾಯಣಿ ಭಜನಾ ಮಂಡಳಿಯಿಂದ ಹಾಡುಗಳು ಜರುಗಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಕಾಂಗೊ ಕುಲಕರ್ಣಿ, ನಾಗೇಶ ನರಸಾಪುರ, ಭೀಮಸೇನ ದಿಗ್ಗಾವಿ, ಹನುಮಂತ ಬಿಜಾಪುರ, ಬಹದ್ದೂರ್ ದೇಸಾಯಿ, ಉದಯ ದೇಶಪಾಂಡೆ, ಡಾ ಶ್ರೀನಾಥ, ರವಿ ದುಮ್ಮವಾಡ, ಪಟ್ಟಣಕುಡಿ , ಮುಂಡಗೋಡ ಮುಂತಾದ ಕುಟುಂಬದವರು ಹಾಜರಿದ್ದರು.