ಯುದ್ಧ ಕಾಂಡ ರಾಮಾಯಣ ಉಪನ್ಯಾಸ

ಸತ್ತೂರು,ಅ9: ಅಯೋಧ್ಯಾಪತಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸಂವತ್ಸರ ಪರ್ಯಂತ ಶ್ರೀಮದ ರಾಮಾಯಣ ಉಪನ್ಯಾಸ ಸರಣಿ ಕಾರ್ಯಕ್ರಮವನ್ನು ಸ್ಥಳೀಯ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯಲ್ಲಿರುವ ಶ್ರೀ ಹನುಮಂತ ಪುರಾಣಿಕ ಇವರ ನಿವಾಸದಲ್ಲಿ ಬರುವ ಶನಿವಾರ ಮತ್ತು ಭಾನುವಾರ ಅಂದರೆ ದಿನಾಂಕ 11 ಮತ್ತು 12 ನೇ ಅಕ್ಟೋಬರ 2025 ರಂದು ಸಾಯಂಕಾಲ 6-00 ರಿಂದ 7-00 ರ ವರೆಗೆ ಅಯೋಧ್ಯಾ ಕಾಂಡ ಕಥಾ ಪ್ರವಚನ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಉಪನ್ಯಾಸಕರಾಗಿ ಪಂ. ವಾದಿರಾಜಾಚಾರ್ಯ ಮಠದ ಆಗಮಿಸಲಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿಯಾದ ರಘೋತ್ತಮ ಅವಧಾನಿಯವರನ್ನು (ಮೊಬೈಲ 63 61 83 57 10) ಸಂಪರ್ಕಿಸಲು ಕೋರಲಾಗಿದೆ.