
ಸತ್ತೂರು,ಡಿ8: ಶ್ರೀ ಹನುಮಂತ ದೇವರ ಅವತಾರದ ಮೂಲ ಉದ್ದೇಶವೇ, ಶ್ರೀರಾಮಚಂದ್ರ ದೇವರ ಸರ್ವೋತ್ತಮತ್ವವನ್ನು ಆರಾಧಿಸಲು ,ಭಕ್ತಿ , ಸೇವಾ ಮನೋಭಾವ ತೋರಿಸಲು ಚಿರಂಜೀವಿಯಾದ ವಾಯುದೇವರ ಅನೇಕ ಮಹಿಮೆಗಳನ್ನು ಬೆಂಗಳೂರಿನ ಪಂ. ವೇಣುಗೋಪಾಲಾಚಾರ ಮುಂಡಗೋಡವರು ವಿವರಿಸಿದರು.
ಸುತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಮುಂಡಗೋಡ ಇವರ ನಿವಾಸದಲ್ಲಿ ಜರುಗಿದ “ಶ್ರೀ ವಾಯುದೇವರ ಮಹಿಮೆ” ಕುರಿತು ಉಪನ್ಯಾಸ ಮಾತನಾಡುತ್ತಾ , 32 ಲಕ್ಷಣಗಳನ್ನು ಹೊಂದಿರುವ ಸುಂದರನಾದ ಹನುಮಂತ ದೇವರು, ಸೀತಾನ್ವೇಷಣಕ್ಕಾಗಿ ಸಮುದ್ರವನ್ನು ದಾಟಿ ಅನೇಕ ಅಡಚಣೆಗಳನ್ನು ಎದುರಿಸಿ, ಸೀತಾಮಾತೆಗೆ ಉಂಗುರ ಕೊಟ್ಟು , ಚುಡಾಮಣೆಯನ್ನು ತಲುಪಿಸಿದ್ದನ್ನು ಸ್ಮರಿಸಿ, ವಿಶೇಷವಾಗಿ ಹನುಮಂತ ದೇವರ ಚಿಂತನೆ, ಉಪಾಸನೆ, ಸ್ಮರಣೆ ಮಾಡಿದರೆ , ಬುದ್ಧಿ , ಬಲ, ಯಶಸ್ಸು ,ಧೈರ್ಯ, ನಿರ್ಭಯ ಮುಂತಾದವುಗಳೊಂದಿಗೆ ನಮ್ಮ ಜೀವನ ಸುಂದರವಾಗುತ್ತದೆ ಹಾಗೂ ಎಲ್ಲಾ ಸಂದೇಹಗಳಿಗೆ ಪರಿಹಾರ ನೀಡಿ , ಶ್ರೀರಾಮಚಂದ್ರನ ಗುಣಗಳ ಜ್ಞಾನ ಮತ್ತು ಅವರಲ್ಲಿ ಭಕ್ತಿಯಿಂದ ಮಾಡುವ ಕರ್ಮಗಳನ್ನು ಸಮರ್ಪಿಸುವ ಮಾರ್ಗ ಹಾಗೂ ಮೋಕ್ಷಕ್ಕೆ ದಾರಿ ತೋರಿಸುವ ಮಾರ್ಗಕ್ಕೆ ಜೀವೋತ್ತಮರಾದ ವಾಯುದೇವರ ಅನುಗ್ರಹ ಬಹಳ ಮುಖ್ಯ ಎಂದು ಸುಂದರವಾಗಿ ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಹನುಮಂತ ಪುರಾಣಿಕ, ಭೀಮಸೇನ ದಿಗ್ಗಾವಿ, ಗೋಪಾಲಕೃಷ್ಣ ಹುನಗುಂದ, ಡಾ.ಶ್ರೀನಾಥ , ಡಾ. ರವಿ ದುಮ್ಮವಾಡ, ಪ್ರಕಾಶ ದೇಸಾಯಿ, ಸಂಜೀವ ಜೋಶಿ, ವಿಶ್ವನಾಥ ಕಾಂಗೋ, ಡಿ.ಕೆ. ಜೋಶಿ , ಪೆÇ್ರ. ಸಿ.ಕೆ. ಕುಲಕರ್ಣಿ, ಎಸ್.ಎಂ. ಜೋಶಿ, ಹನುಮಂತ ಬಿಜಾಪುರ, ವಿಲಾಸ ಸಬ್ನೀಸ, ಉಪಸ್ಥಿತರಿದ್ದರು.

























