
ಬೀದರ, ಫೆ. ೨೫: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿಕೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸರಕಾರಿ ಪದವಿ ಕಾಲೇಜು, ಹುಮನಾಬಾದ್‌ನ ಸಹ ಪ್ರಾಧ್ಯಾಪಕರಾದ ಡಾ. ವೀರಶೆಟ್ಟಿ ಮೈಲೂರಕರ ಹೇಳಿದರು.
ಸಿದ್ದಾರ್ಥ ಪದವಿ ಕಾಲೇಜು ಮತ್ತು ಕರ್ನಾಟಕ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಇಂಗ್ಲೀಷ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೊರ ರಾಜ್ಯಗಳಲ್ಲಿ, ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾದ ಈ ಕಾಲಘಟ್ಟದಲ್ಲಿ ಇಂಗ್ಲೀಷ್ ತಿಳಿದಿದ್ದರೆ ಸುಲಭವಾಗಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು. ಇಂಗ್ಲೀಷ್ ಭಾಷೆ ವಿಶ್ವವ್ಯಾಪಿಯಾಗಿ ತನ್ನ ಪ್ರಾಬಲ್ಯವನ್ನು ಪಡೆದಿರುವುದರಿಂದ ಮಾತೃಭಾಷೆಯ ಜೊತೆಗೆ ಇಂಗ್ಲೀಷ್ ಕಲಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮೂರು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷ ನಾಯಕ ಅವರು “Iಟಿಣeಡಿvieತಿ Sಞiಟಟs ಜಿoಡಿ Iಟಿಣeಡಿvieತಿ”, ಅಮರೇಶ್ವರ ಪದವಿ ಕಾಲೇಜಿನ ಡಾ. ಶ್ವೇತಾ ಆಲೂರ ಅವರು “ಎob ಂಠಿಠಿಟiಛಿಚಿಣioಟಿ Wಡಿiಣiಟಿg ಚಿಟಿಜ ಖesume Wಡಿiಣiಟಿg”, ಗೀರಿಶ ಮೀಸಿ ಅವರು “ಖಿಥಿಠಿes oಜಿ Seಟಿಣeಟಿಛಿes ಚಿಟಿಜ ಖಿಡಿಚಿಟಿsಜಿoಡಿmಚಿಣioಟಿs oಜಿ Seಟಿಣeಟಿಛಿes” ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗೋಪಾಲ ಬಡಿಗೇರ ವಹಿಸಿದರು. ಆರಂಭದಲ್ಲಿ ವಿದ್ಯಾರ್ಥಿನಿಯರಾದ ಪಲ್ಲವಿ, ಮೇಘಾ ಹಾಗೂ ಚಂದ್ರಕಲಾ ಬುದ್ಧವಂದನೆ ನೆರವೇರಿಸಿದರು. ಗೀರಿಶ ಮೀಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಣಿಕರಾವ ಭಾಲ್ಕೆ ವಂದಿಸಿದರು.
ವೇದಿಕೆಯಲ್ಲಿ ಉಪ ಪ್ರಾಚಾರ್ಯರಾದ ಜಗದೇವಪ್ಪ ಚೆಕ್ಕಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ರಾಜಕುಮಾರ ಸಿಂಧೆ ನಿರ್ವಹಿಸಿದರು.
























