ಮಧುಗಿರಿ, ನ. ೮- ಸ್ಕೌಟ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ನಾಯಕತ್ವ ಗುಣ, ಸೇವಾ ಮನೋಭಾವ ಕಲಿಸುತ್ತದೆ ಎಂದು ಪ್ರಾಂಶುಪಾಲರಾದ ಎಂ.ವೈ.ಹೊಸಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಟಿ.ವಿ.ವಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕೌಟ್ಸ್ ವಜ್ರಮಹೋತ್ಸವದ ಧ್ವಜ ಚೀಟಿ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ದೇಶದ ಭಾವೈಕೈತೆ, ಭ್ರಾತೃತ್ವ ಕಾಪಾಡಲು ಸ್ಕೌಟ್ಸ್ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಕರಿಸಿದ್ಧಪ್ಪ, ಜಿಲ್ಲಾ ತರಬೇತಿ ಆಯುಕ್ತ ಮೋನ, ಕೃಷ್ಣಮೂರ್ತಿ, ಕನ್ನಡ ಪ್ರಾಧ್ಯಾಪಕರಾದ ಡಾ.ಆನಂದ. ಸಾಹಿತಿ ಮ.ಲ.ನ.ಮೂರ್ತಿ ಮತ್ತಿತರರು ಭಾಗವಹಿಸಿದ್ದರು.


























