ವಾಷಿಂಗ್ಟನ್, ಅ.೨- ಸುಮಾರು ಏಳು ವರ್ಷಗಳ ಬಳಿಕ ಆಡಳಿತದಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಶ್ವೇತಭವನ ಹೇಳಿದೆ.
ಅಮೇರಿಕಾದಲ್ಲಿ ಹೊಸ ಖರ್ಚು ಯೋಜನೆಗೆ ಒಪ್ಪಿಗೆ ನೀಡಲು ಸೆನೆಟ್ ನಲ್ಲಿ ರಿಪಬ್ಲಿಕನ್ನರು ಮತ್ತು ಡೆಮೋಕ್ರಾಟ್‌ಗಳು ನಿರಾಕರಿಸಿದ ನಂತರ ಸಿಬ್ಬಂದಿಯನ್ನು ಸಾಮೂಹಿಕವಾಗಿ ಸ್ಥಗಿತಗೊಳಿಸುವಿಕೆ ಪ್ರಾರಂಭವಾಗಿದೆ ಎಂದು ಶ್ವೇತಭವನ ಮೂಲಗಳು ಖಚಿತಪಡಿಸಿವೆ
ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಚುನಾಯಿತ ಪ್ರತಿನಿಧಿಗಳು ಖರ್ಚು ವೆಚ್ಚದ ಬಗ್ಗೆ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲದ ಹಿನ್ನೆಲೆಯಲ್ಲಿ ಫೆಡರಲ್ ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸುವಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.
ಅಮೇರಿಕಾದಲ್ಲಿ ಲಕ್ಷಾಂತರ ಉದ್ಯೋಗಗಳು ಕೆಲಸ ಕಳೆದುಕೊಳ್ಳುವ ಆತಂಕ ಹೆಚ್ಚಾಗಿದೆ. ಅಮೆರಿಕದ ಆರ್ಥಿಕತೆಗೆ ಶತಕೋಟಿಗಳಷ್ಟು ಉ ನಷ್ಟವನ್ನುಂಟುಮಾಡುವ ಅಪಾಯ ಕಡಿಮೆ ಮಾಡಲಿದೆ ಎನ್ನಲಾಗಿದೆ
ಶ್ವೇತಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಡೆಮೋಕ್ರಾಟ್‌ಗಳು ರಾಜಕೀಯ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಅಮೆರಿಕಾದ ಜನರ ಮೇಲೆ ಬೀರುವ ಪರಿಣಾಮದ ಬಗ್ಗೆ ಚಿಂತಿತರಾಗಿದ್ದಾರೆ.ಡೆಮಾಕ್ರಟಿಕ್ ಆರೋಪಗಳಿಗೆ ಸೂಕ್ತ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ
ಈ ನಡುವೆ ಎರಡು ದಿನಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತ ನಡೆಯಲಿದೆ “ಕೆಲವೊಮ್ಮೆ ನೀವು ಮಾಡಲು ಬಯಸದ ಕೆಲಸಗಳನ್ನು ನಾವು ಮಾಡಬೇಕಾಗುತ್ತದೆ ಎಂದು ಹಿಂದಿನ ಜೋ ಬೈಡೆನ್ ಸರ್ಕಾರದ ಆಡಳಿತ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ..
ಎರಡೂ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ಹೆಚ್ಚಾಗಿದ್ದು ಆಟದಲ್ಲಿ , ಸೆನೆಟ್‌ನ ಉನ್ನತ ಡೆಮೋಕ್ರಾಟ್ ಗಳಲ್ಲಿ ಒಬ್ಬರಾದ ಚಕ್ ಶುಮರ್ ಈ ಹಿಂದೆ ರಿಪಬ್ಲಿಕನ್ನರು ಡೆಮೋಕ್ರಾಟ್‌ಗಳು ತಮ್ಮ ನಿಧಿಯ ಯೋಜನೆ ಸ್ವೀಕರಿಸುವಂತೆ “ಬೆದರಿಸಲು” ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಡೆಮೋಕ್ರಾಟ್‌ಗಳು ಖರ್ಚು ಒಪ್ಪಂದಕ್ಕೆ ಒಪ್ಪುವ ಮೊದಲು ಆರೋಗ್ಯ ರಕ್ಷಣಾ ನಿಧಿ ಮೇಲೆ ಖಾತರಿ ಪಡೆಯಲು ಬಯಸಿದ್ದಾರೆ ಆದರೆ ರಿಪಬ್ಲಿಕನ್ನರು ನವೆಂಬರ್ ಮಧ್ಯದವರೆಗೆ ಸರ್ಕಾರದ ಕಾರ್ಯವೈಖರಿಗೆ ತಾತ್ಕಾಲಿಕ ಖರ್ಚು ವೆಚ್ಚಗಳಿಗೆ ಅನುಮತಿ ನೀಡಿದ್ದಾರೆ
ಕಡಿಮೆ ಆದಾಯದ ಅಮೆರಿಕನ್ನರಿಗೆ ಆರೋಗ್ಯ ಸೌಲಭ್ಯಗಳನ್ನು ಉಳಿಸಲು ಮಾತುಕತೆ ನಡೆಸುವ ಪ್ರಯತ್ನದಲ್ಲಿ ಸರ್ಕಾರ ಸ್ಥಗಿತಗೊಳಿಸಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಡೆಮೋಕ್ರಾಟ್‌ಗಳು ಹೇಳಿದ್ದಾರೆ.
ಈ ಪ್ರಯೋಜನಗಳ ಕುರಿತು ರಿಪಬ್ಲಿಕನ್ನರೊಂದಿಗೆ ಮಾತುಕತೆ ನಡೆಸುವ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ.
























