ಸಂಜೆ ವಾಣಿ ವಾರ್ತೆ
ಜಮಖಂಡಿ:ಅ.೧೧: ಭಾರತದ ಶ್ರೇಷ್ಠ ನ್ಯಾಯಾಂಗ ವೇದಿಕೆಯಾದ ಸುಪ್ರೀಂ ಕೋರ್ಟ್ನಲ್ಲಿ ನಡೆದ ಘಟನೆ ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿದೆ ಎಂದು ಕಾನೂನು ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯ ಹಣಮಂತ ಯಮಗಾರ ಹೇಳಿದರು
ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಕಾನೂನು ವಿದ್ಯಾರ್ಥಿಗಳ ಒಕ್ಕೂಟದಿಂದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿಯನ್ನು ಬಂಧಿಸಲು ಆಗ್ರಹಿಸಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನ್ಯಾಯಮೂರ್ತಿ ಮೇಲೆ ಶೂ ದಾಳಿ ಕೇವಲ ವ್ಯಕ್ತಿಯ ಮೇಲಿನ ಕೃತ್ಯವಲ್ಲ ಅದು ನ್ಯಾಯದ ಮೇಲಿನ ದಾಳಿ, ಸಂವಿಧಾನದ ಅವಮಾನ, ಮತ್ತು ಪ್ರಜಾಪ್ರಭುತ್ವ ಆತ್ಮದ ಮೇಲಿ ನೇರ ಹಲ್ಲೆ ಎಂದು ತನ್ಮ ಆಕ್ರೋಶ ಹೊರಹಾಕಿದರು ವಕೀಲ ವೃತ್ತಿಯವರಾಗಿರುವ ಕಿಶೋರ್ ಎಂಬಾತನಿAದ ಈ ಕೃತ್ಯ ನಡೆದಿದ್ದು ಅತ್ಯಂತ ವಿಷಾದನೀಯ.ನ್ಯಾಯಾಲಯದ ಗೌರವ ಕಾಪಾಡಬೇಕಾದ ವೃತ್ತಿಯವರಿಂದಲೇ ನ್ಯಾಯದ ಪೀಠದ ಮೇಲೆ ದಾಳಿ ನಡೆಯುವುದು ವೃತ್ತಿ ನೀತಿಯ ಕುಸಿತದ ಸಂಕೇತವಾಗಿದೆ ಎಂದರು
ಪ್ರವೀಣ ಸರೇನ್ನವರ,ವಾಚನಾ ಶೃಂಗೇರಿ ಮಾತನಾಡಿ ಇಷ್ಟೊಂದು ಗಂಭೀರ ಘಟನೆಯ ಬಳಿಕವೂ ಸಂಬAಧಪಟ್ಟ ವ್ಯಕ್ತಿಯ ಬಂಧನವಾಗದಿರುವುದು ನಮ್ಮೆಲ್ಲರ ಮನಸ್ಸಿಗೆ ನೋವುಂಟುಮಾಡಿವೆ ವಕೀಲನನ್ನು ಬಂದಿಸದೆ ಇರುವದು ನ್ಯಾಯಾಂಗದ ಸ್ವಾಯತ್ತತೆಯ ಮೇಲಿನ ನಂಬಿಕೆಗೆ ಧಕ್ಕೆಯುಂಟುಮಾಡುತ್ತದೆ ಎಂದರು.
ನ್ಯಾಯಮೂರ್ತಿಯ ಮೇಲಿನ ದಾಳಿ ಎಂದರೆ ಅದು ನ್ಯಾಯದ ದೇವಾಲಯದ ಮೇಲಿನ ದಾಳಿ ನ್ಯಾಯದ ಪವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯವಾಗಿದೆ. ಅದಕ್ಕಾಗಿ ನಾವು ಕಾನೂನು ವಿದ್ಯಾರ್ಥಿಗಳ ಒಕ್ಕೂಟ ಪರವಾಗಿ ವಕೀಲ ಕಿಶೋರ್ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಇಂತಹ ಕೃತ್ಯಗಳು ಪುನರಾವರ್ತನೆಯಾಗದಂತೆ ಕಠಿಣ ನಿಯಮಾತ್ಮಕ ಕ್ರಮಗಳು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

























