ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹೊಸಕೋಟೆ.ಮೇ೧೯:ಹೊಸಕೋಟೆ-ನಡವತ್ತಿ ಗ್ರಾಮದಲ್ಲಿ ಹಿಂದುಳಿದ ವರ್ಗ ಹಾಗೂ ನಿವೇಶನ ರಹಿತ ಕುಟುಂಬಗಳು ಹೆಚ್ಚಾಗಿದ್ದು ಗ್ರಾಮದ ೩೧ ಗುಂಟೆ ಜಾಗವನ್ನು ಸ್ಲಂ ಬೋರ್ಡ್‌ಗೆ ಹಸ್ತಾಂತರ ಮಾಡಿ ಸರಕಾರದಿಂದ ೧೫೦ ಮನೆಗಳನ್ನು ನಿರ್ಮಾಣ ಮಾಡಲು ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.


ಹೊಸಕೋಟೆ ತಾಲೂಕಿನ ಕೊರಳೂರು, ಕೆ.ಮಲ್ಲಸಂದ್ರ ಹಾಗೂ ನಡವತ್ತಿ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ೫೦೫೪, ಸಮಾಜ ಕಲ್ಯಾಣ ಇಲಾಖೆ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಫಲಾನುಭವಿಗಳಿಗೆ ವಸತಿ ಯೋಜನೆಗಳನ್ನು ಒದಗಿಸುವ ಮೂಲಕ ಸರ್ವರಿಗೂ ಸೂರು ಒದಗಿಸುವುದು ನಮ್ಮ ಸರಕಾರದ ಉದ್ದೇಶವಗಿದೆ. ನಿವೇಶನ ರಹಿತರು ಸರ್ಕಾರಕ್ಕೆ ಅರ್ಜಿ ಹಾಕಿದರೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಲಾಗವುದು. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಸೂರು ನಿರ್ಮಿಸಿಕೊಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುತ್ತದೆ ಎಂದರು


ಸಮೇತನಹಳ್ಳಿ ಗ್ರಾ.ಪಂ.ಅಧ್ಯಕ್ಷ ಕಾಂತರಾಜು ಮಾತನಾಡಿ, ಸ್ವಂತ ಮನೆಯೊಂದನ್ನು ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸು.


ಆದರೆ ಇಂದಿನ ದುಬಾರಿ ಯುಗದಲ್ಲಿ ಈ ಕನಸನ್ನು ನನಸಾಗಿಸಿಕೊಳ್ಳುವುದು ಬq ಕುಟುಂಬಗಳಿಗೆ ಸವಾಲಾಗಿರುತ್ತದೆ. ಆದರೆ ಇಂದು ರಾಜ್ಯ ಸರಕಾರಗಳು ನಿವೇಶನರಹಿತರಿಗೆ ಹಾಗೂ ವಸತಿರಹಿತರಿಗೆ ಮನೆಗಳನ್ನು ಸುಲಭವಾಗಿ ವಿವಿಧ ಅನುದಾನಗಳ ಮೂಲಕ ನೀಡುವ ಯೋಜನೆಗಳನ್ನು ತಂದಿದ್ದು ಅರ್ಹ ಫಲಾನುಭವಿಗಳನ್ನು ಗುರುತಿಸಿ ನ್ಯಾಯಯುತವಾಗಿ ಹಂಚಿಕೆ ಮಾಡಲಾಗುವುದು.


ಕಾರ್ಯಕ್ರಮದಲ್ಲಿ ಇಓ ಡಾ.ಸಿ.ಎನ್.ನಾರಾಯಣಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃ?ಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಬಿ.ಎಂ.ಆರ್.ಡಿ.ಎ. ಮಾಜಿ ಅಧ್ಯಕ್ಷ ನಾರಾಯಣಗೌಡ, ಸದಸ್ಯರಾದ ಕೊರಳೂರು ಸುರೇಶ್, ಎಸ್.ಎಫ್.ಸಿ.ಎಸ್. ನಿರ್ದೇಶಕ ರಾಜಪ್ಪ ಖರ್ಗೆ, ವೆಂಕಟೇಶಪ್ಪ, ಪಿಡಿಓ ಪ್ರಸಾದ್, ಗ್ರಾ.ಪಂ. ಸದಸ್ಯರುಗಳಾದ ಮಲ್ಲಸಂದ್ರ ಮಂಜುನಾಥ್, ಅನುಸೂಯ ಅರವಿಂದ್, ಮುಖಂಡರುಗಳಾದ ಮಲ್ಲಸಂದ್ರ ಶೇಷಪ್ಪ, ನಡವತ್ತಿ ಮುನೇಶ್ ಹಾಗೂ ಇತರರು ಹಾಜರಿದ್ದರು.