
ಬೆಂಗಳೂರು.ಮೇ೨೪: ಹಾಲುಮತ ಉದ್ಯಮಿಗಳ ಸಂಘದ ವತಿಯಿಂದ ೨೦೨೬ರ ಮೇ ೨೪ ರಂದು ಬೆಂಗಳೂರಿನ ಜ್ಞಾನಗಂಗಾ ನಗರದ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ (ಅಮ್ಮಾ ಆಶ್ರಮದ ಹತ್ತಿರ)ಶ್ರೀ ಕನಕದಾಸ ಸಮುದಾಯ ಭವನದಲ್ಲಿ “ಕನಕೋದ್ಯಮಿಗಳ ಸಮ್ಮಿಲನ ಮತ್ತು ಉದ್ಯಮಶೀಲತಾ ಅವಕಾಶಗಳ ಅರಿವು” ಕಾರ್ಯಕ್ರಮಕ್ಕೆ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀಗಳಾದ ಈಶ್ವರಾನಂದಪುರಿ ಮಹಾಸ್ವಾಮಿಗಲು ಚಾಲನೆ ನೀಡಿದರು.
ರಾಮೊಹಳ್ಳಿ ರಾಮಕೃಷ್ಣಾಶ್ರಮದ ಏರ್ಪಡಿಸಲಾಗಿತ್ತು. ಯೋಗೇಶ್ವರಾನಂದ ಮಹಾಸ್ವಾಮಿಗಳ ಸಾವಿಧ್ಯದಲ್ಲಿ. ರಾಜ್ಯ ಪಂಚಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್ ಎಂ ರೇವಣ್ಣನವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ ಖಾಶ್ಯಂಪೂರ್, ಮಾಜಿ ಶಾಸಕರಾದ ಶ್ರೀ ಹುಲಿನಾಯ್ಕರ್, ಶಿಕ್ಷಣ ತಜ್ಞ ಮತ್ತು ಯುವ ನೇತಾರ ಬಿ ಜಿ ವಿನಯಕುಮಾರ್, ಟಿ.ಬಿ.ಬೆಳಗಾವಿ, ಡಾ.ಲೀಲಾ, ರುದ್ರಣ್ಣ ಗುಳಗುಳಿ, ಸಿದ್ದಲಿಂಗ ಪೂಜಾರಿ, ಗ್ಯಾನಪ್ಪ ಹುಡೇದ್, ಸುನೀಲ್ ಜಯರಾಜ್ ರವರು ಭಾಗವಹಿಸಿದ್ದರು.






















