
ಕೋಲಾರ,ಜೂ,೫- ಸಮಾಜಕ್ಕೆ ಆರ್ಥಿಕ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರಿ ರಂಗವೂ ಜನತೆಯಲ್ಲಿ ಸ್ವಚ್ಚತೆಯ ಅರಿವು ನೀಡುವ ಕೆಲಸ ಮಾಡಲು ಮುಂದಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಸ್ವಚ್ಚತಾ ಸೆ ಸಹಕಾರ್ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಸಂಕಲ್ಪ ಮಾಡಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಿ.ಆರ್.ರಾಮಚಂದ್ರೇಗೌಡ ತಿಳಿಸಿದರು.
ನಗರದ ಕುವೆಂಪು ಉದ್ಯಾನವನದಲ್ಲಿ ಅಂತರರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಡಿಯಲ್ಲಿ ಪ್ರಧಾನಿಯವರು ಮನ್ ಕೀ ಬಾತ್‌ನಲ್ಲಿ ನೀಡಿದ ಸಲಹೆಯಂತೆ ನಡೆಸುತ್ತಿರುವ ‘ಸ್ವಚ್ಚತಾ ಸೆ ಸಹಕಾರ್ ಕಾರ್ಯಕ್ರಮದಡಿ ‘ಏಕ್ ಪೇಸ್ ಮಾ ಕೆ ನಾಮ್ ಹೆಸರಿನಲ್ಲಿ ಸ್ವಚ್ಚತಾ ಕಾರ್ಯ ಮತ್ತು ಗಿಡನೆಡುವ ಕಾರ್ಯಕ್ಕೆಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮವು ನಮ್ಮತಾಯಿ ಮತ್ತು ನಮ್ಮ ಭೂಮಿಗೆ ಗೌರವ ಸೂಚಿಸುವ ಸಲುವಾಗಿ ಹಮ್ಮಿಕೊಳ್ಳುತ್ತಿದ್ದು, ಇದನ್ನು ಜಿಲ್ಲೆಯಲ್ಲಿ ವರ್ಷ ಪೂರ್ತಿ ಆಚರಿಸಲು ಯೂನಿಯನ್ ನಿರ್ಧರಿಸಿದೆ ಎಂದು ತಿಳಿಸಿದ ಅವರು, ಎಲ್ಲಾ ಸಹಕಾರಿಗಳು ವಾರಕ್ಕೊಂದು ದಿನ ಇಂತಹ ಕಾರ್ಯ ನಡೆಸೋಣ ಬನ್ನಿ ಎಂದರು.
ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿದೇಶಾದ್ಯಂತ ಚಾಲನೆ ನೀಡಿದ್ದಾರೆ. ಅದರ ಧ್ಯೇಯೋದೇಶವೇ ಸ್ವಚ್ಚತಾ ಸೇ ಸಹಕಾರ ಕಾರ್ಯಕ್ರಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕುವೆಂಪು ಉದ್ಯಾನವನ್ನು ಸ್ವಚ್ಚಗೊಳಿಸುವ ಮೂಲಕ ‘ಸ್ವಚ್ಚ ತಾ ಸೆ ಸಹಕಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಅಣ್ಣಿಹಳ್ಳಿ ನಾಗರಾಜ್, ಉರುಗಿಲಿ ರುದ್ರಸ್ವಾಮಿ, ಅರುಣಮ್ಮ, ಪಿ.ಎನ್.ಕೃಷ್ಣಾರೆಡ್ಡಿ, ಹಾಲು ಒಕ್ಕೂಟದ ಈಶ್ವರಪ್ಪ, ಸಹಕಾರಿ ಯೂನಿಯನ್ ಸಿಇಓ ಭಾರತಿ, ಲಕ್ಷ್ಮಮ್ಮ, ರವಿಕುಮಾರ್, ಮುರಳಿ, ಗಂಗೋತ್ರಿ, ಸಹಕಾರ ಸಂಘಗಳ ಲೆಕ್ಕರಿಶೋಧನಾ ಇಲಾಖೆಯ ಕವಿತ ಮತ್ತಿತರರು ಹಾಜರಿದ್ದರು.