ಕಲಬುರಗಿ,ಅ.28: ನಗರದ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್ ಎಕ್ಸಲೆನ್ಸ್, ಕರ್ನಾಟಕ ಮತ್ತು ಕೆ-ಟೆಕ್ ಸಹಯೋಗದೊಂದಿಗೆ, ಅಥಿSeಛಿಏ ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ ಕಾರ್ಯಕ್ರಮದ 2ನೇ ತಂಡದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು.
ಕಾರ್ಯಕ್ರಮ ಸುರಭಿ ಜೋಶಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರಬೆಂಗಳೂರಿನ ಐಐಎಸ್‍ಸಿ ಮತ್ತು ಸೈಸೆಕ್ ಕಾರ್ಯಕ್ರಮ ವ್ಯವಸ್ಥಾಪಕ ಗಿರೀಶ್ ಬಡಿಗೇರ್ ಅವರು ಕಾರ್ಯಕ್ರಮದ ಪರಿಚಯಾತ್ಮಕ ಭಾಷಣ ಮಾಡಿದರು. ಅವರು ಫಿನಿಶಿಂಗ್ ಸ್ಕೂಲ್ ಕಾರ್ಯಕ್ರಮದ ಉದ್ದೇಶಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಸೈಬರ್ ಭದ್ರತೆ ಬಗ್ಗೆ ಅರಿವು ಮೂಡಿಸಲು ಹಾಗೂ ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಸೈ ಸೆಕ್ ಮೂಲಕ ಕೈಗೊಂಡಿರುವ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು.
ಸಿಎಸ್‍ಇ ವಿಭಾಗದ ಮುಖ್ಯಸ್ಥರಾದ ಡಾ. ಸುಜಾತಾ ತೇರ್ದಾಳ ಅವರು ಗಣ್ಯರನ್ನು ಸ್ವಾಗತಿಸಿದರು.
ಅಗಮ್ಯ ಸೈಬರ್ ಟೆಕ್, ಧಾರವಾಡದ ಸಂಸ್ಥಾಪಕ ಮತ್ತು ಸಿಇಒ ಮಹೇಶ್ ವಸ್ತ್ರದ ಅವರು ಮುಖ್ಯ ಭಾಷಣ ಮಾಡಿದರು. ಸೈಬರ್ ಭದ್ರತೆಯು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಇದರಲ್ಲಿ ಹೇರಳವಾದ ಅವಕಾಶಗಳಿವೆ ಎಂದು ಅವರು ತಿಳಿಸಿದರು. ನುರಿತ ವೃತ್ತಿಪರರಿಗೆ ಬೇಡಿಕೆ ಹೆಚ್ಚಿದ್ದರೂ, ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮದ ಸಿದ್ಧತೆಯ ಕೊರತೆಯಿದೆ ಎಂದು ಅವರು ನುಡಿದರು.
ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಪ್ರಾಂಶುಪಾಲ ಡಾ. ಎಸ್. ಆರ್. ಪಾಟೀಲ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಡಾ. ಅನುರಾಧ ಅವರು ವಂದನಾರ್ಪಣೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಉಪಪ್ರಚಾರದ ಡಾ. ಭಾರತಿ ಹರಸುರ್, ಡಾ. ಎಸ್.ಆರ್. ಹೊಟ್ಟಿ, ಪರೀಕ್ಷಾ ನ್ಯಾಯಾಂತ್ರಾಣ ಅಧಿಕಾರಿಗಳಾದ ಡಾ.ಶ್ರೀದೇವಿ ಸೋಮ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಮುಖ್ಯಸ್ಥರಾದ ಡಾ. ಸುಜಾತ ತೆರದಾಳ್, ಪೆÇ್ರಫೆಸರ್ ಡಾ .ಅನುರಾಧ ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು






















