Home ಜಿಲ್ಲೆ ಶ್ರಾವಣ ಕಡೆ ಸೋಮವಾರ : ಯುವ ಸಮೂಹದಿಂದ ಬಾಳೆಹಣ್ಣು ವಿತರಣೆ

ಶ್ರಾವಣ ಕಡೆ ಸೋಮವಾರ : ಯುವ ಸಮೂಹದಿಂದ ಬಾಳೆಹಣ್ಣು ವಿತರಣೆ

ಔರಾದ್ : ಪಟ್ಟಣದ ಸುಪ್ರಸಿದ್ಧ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಅಂಗವಾಗಿ ದರ್ಶನಕ್ಕೆ ಬಂದ ಭಕ್ತರಿಗೆ ಯುವ ಸಮೂಹದ ವತಿಯಿಂದ ಬಾಳೆಹಣ್ಣು ಪ್ರಸಾದ ವಿತರಣೆ ಮಾಡಲಾಯಿತು.
ಶ್ರಾವಣ ಮಾಸದ ನಿಮಿತ್ತ ಪ್ರತಿ ನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಆರಾಧ್ಯ ದೈವ ಅಮರೇಶ್ವರರಿಗೆ ಬಿಲ್ವಪತ್ರೆ ಅರ್ಪಿಸಿ ದರ್ಶನ ಪಡೆಯುತ್ತಾರೆ. ಶ್ರಾವಣ ಕೊನೆ ಸೋಮವಾರ ನಿಮಿತ್ತ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಅಮರೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಸಮೂಹದ ಸದಸ್ಯರು ಭಕ್ತಾದಿಗಳಿಗೆ ಬಾಳೆಹಣ್ಣು ಪ್ರಸಾದ ವಿತರಿಸಿ ಭಕ್ತಿಭಾವ ಮೆರೆದರು. ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಶ್ರಾವಣ ಮಾಸದ ಧಾರ್ಮಿಕ ಆಚರಣೆಗೆ ಮತ್ತಷ್ಟು ಮೆರುಗು ನೀಡಲಾಯಿತು. ಯುವಕರ ಸೇವಾ ಮನೋಭಾವಕ್ಕೆ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬಸವ ಚೌಕಂಪಳ್ಳೆ, ಅನಿಲ ದೇವಕತೆ, ಅರ್ಜುನ ಭಂಗೆ, ಚಂದ್ರಕಾAತ ಜೋಶಿ, ಶ್ರೀಕಾಂತ ಜೋಶಿ, ಅಂಬಾದಾಸ ಕಳಸೆ, ಭೀಮ ಹೇಳವೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.