Home ಜಿಲ್ಲೆ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಭೂಮಿ, ಅನುದಾನ ಮಂಜೂರಾತಿಸಚಿವ ಈಶ್ವರ ಖಂಡ್ರೆಗೆ ಅದ್ಧೂರಿ ಅಭಿನಂದನೆ

ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಭೂಮಿ, ಅನುದಾನ ಮಂಜೂರಾತಿಸಚಿವ ಈಶ್ವರ ಖಂಡ್ರೆಗೆ ಅದ್ಧೂರಿ ಅಭಿನಂದನೆ

ಬೀದರ್: ತಾಲ್ಲೂಕಿನ ಅತಿವಾಳ ಸಮೀಪ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಾಂಸ್ಕøತಿಕ ಕೇಂದ್ರಕ್ಕೆ ಜಮೀನು ಹಾಗೂ ಅನುದಾನ ಮಂಜೂರು ಮಾಡಿಸಿದ ಪ್ರಯುಕ್ತ ದಲಿತ ಸಮಾಜದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಅದ್ಧೂರಿಯಾಗಿ ಅಭಿನಂದಿಸಲಾಯಿತು.
ಅಭಿನಂದನಾ ಸಮಿತಿಯ ಪ್ರಮುಖರೂ ಆದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದಕುಮಾರ ಅಪ್ಪೆ ಅವರ ನೇತೃತ್ವದಲ್ಲಿ ಮೈಸೂರು ಪೇಟ ತೊಡಿಸಿ, ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಾಂಸ್ಕøತಿಕ ಕೇಂದ್ರಕ್ಕೆ ಅತಿವಾಳ ಸಮೀಪ 10 ಎಕರೆ ಜಮೀನು ಹಾಗೂ ರೂ. 15 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಇದರಿಂದ ದಲಿತ ಸಮಾಜದ ಬಹು ದಿನಗಳ ಬೇಡಿಕೆ ಈಡೇರಿದೆ. ಬರುವ ದಿನಗಳಲ್ಲಿ ರೂ. 50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೇಂದ್ರ ನಿರ್ಮಾಣವಾಗಲಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ದಲಿತ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಬದ್ಧನಾಗಿರುವೆ. ಸಮಾಜದವರ ಅಭಿವೃದ್ಧಿಗೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ದಲಿತ ಸಮಾಜದ ಕನಸಾಗಿತ್ತು. ಈಶ್ವರ ಖಂಡ್ರೆ ಅವರು ಅದನ್ನು ನನಸಾಗಿದ್ದಾರೆ. ಹೀಗಾಗಿ ಅವರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಲಾಗಿದೆ ಎಂದು ವಿನೋದಕುಮಾರ ಅಪ್ಪೆ ಹೇಳಿದರು.
ಕೌಠಾ (ಬಿ) ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು, ಆಣದೂರಿನ ಭಂತೆ ಸಂಘರಖ್ಖಿತ, ರೇಕುಳಗಿ ಮೌಂಟ್ ಬುದ್ಧ ವಿಹಾರದ ಭಂತೆ ರೇವತ, ಶಾಸಕ ರಹೀಂಖಾನ್, ಅಮೃತರಾವ್ ಚಿಮಕೋಡೆ, ಬಕ್ಕಪ್ಪ ಕೋಟೆ, ಮಾರುತಿ ಬೌದ್ಧೆ, ಶಿವರಾಜ ಹಾಸನಕರ್, ಅನಿಲಕುಮಾರ ಬೆಲ್ದಾರ್, ರಮೇಶ ಡಾಕುಳಗಿ, ಬಾಬುರಾವ್ ಪಾಸ್ವಾನ್, ವಿಲಾಸ್ ಮೋರೆ, ಮಾರುತಿ ಭಂಗಾರೆ, ವಿಠ್ಠಲದಾಸ್ ಪ್ಯಾಗೆ, ವಿಜಯಕುಮಾರ ಸೋನಾರೆ, ಸೂರ್ಯಕಾಂತ ಸಾಧುರೆ, ವಿನೋದ ಬಂದಗೆ, ಪ್ರಶಾಂತ ದೊಡ್ಡಿ, ವಿನಯ್ ಮಾಳಗೆ, ರಾಹುಲ್ ಭಂಗೂರೆ, ವಿಶಾಲ್ ಅಪ್ಪೆ, ದಿಗಂಬರ್ ಪುಂಗೆ, ಶಿವಕುಮಾರ ನೀಲಿಕಟ್ಟಿ, ಪವನ್ ಮಿಠಾರೆ ಮತ್ತಿತರರು ಇದ್ದರು.