ಲಾಭದ ಜತೆಗೆ ಲಗೂನಾ ಕ್ಲೋತಿಂಗನಿಂದ ಸಮಾಜ ಸೇವೆ

ಕನಕಪುರ.ನ೫:ಕೇವಲ ಆರ್ಥಿಕ ವ್ಯವಹಾರವನ್ನು ಮಾಡಿ ಲಾಭ ಗಳಿಸುವುದೆ ಮುಖ್ಯವಲ್ಲ ಬದಲಾಗಿ ನಮ್ಮ ಸಮಾಜವನ್ನು ಮೇಲೆತ್ತವ ಕೆಲಸವನ್ನು ಮಾಡುತ್ತ ಲಗೂನ ಕೋತಿಂಗ್ ಪ್ರೆ.ಲಿ ಮಾಡುತ್ತ ಬಂದಿದೆ ಎಂದು ಲಗೂನಾ ಕ್ಲೋತಿಂಗ್‌ನ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಸದಾಶಿವ ಹೇಳಿದ್ದಾರೆ.


ಅವರು ಕನಕಪುರ ತಾಲೂಕು ಕಸಬಾ ಹೋಬಳಿಗೆ ಸೇರಿದ ಕಾಳೇಗೌಡನ ದೊಡ್ಡಿಯ ಅಂಗನವಾಡಿ ಕೇಂದ್ರಕ್ಕೆ ಅಗತ್ಯ ವಸ್ತುಗಳಾದ ಕುರ್ಚಿ, ಟೇಬಲ್, ಗ್ಯಾಸ್ಸೌವ್, ಹೊದಿಕೆ ಕಲಿಕಾ ಸಾಮಗ್ರಿಗಳು, ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.


ಲಗೂನಾ ಕ್ಲೋತಿಂಗ್ ಕನಕಪುರದಲ್ಲಿ ಆರಂಭವಾದಂದಿನಿಂದ ಇಲ್ಲಿನ ವರೆಗೆ ಜನರ ಸಹಕಾರದಿಂದ ತುಂಬಾ ಚನ್ನಾಗಿ ನಮ್ಮ ಕಾರ್ಖಾನೆಯು ನಡೆಯುತ್ತಿದೆ ಆರಂಭದ ದಿನಗಳಲ್ಲಿ ಇದ್ದ ಕೆಲವು ಅಡೆತೆಡಳನ್ನು ಮೀರಿ ಇಂದಿಗೆ ಎಲ್ಲವೂ ಸಹ ಸರಿಯಾದ ರೀತಿಯಲ್ಲಿ ನಡೆಯುತ್ತಿರುವುದುಕ್ಕೆ ಇಲ್ಲಿನ ಜನರ ಸಹಕಾರವೇ ಕಾರಣವೆಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಅವಿನಾಶ್ರವರು ಮಾತನಾಡಿ ಸರ್ಕಾರದ ಜೊತೆ ಸಾಮಾಜಿಕ ಬದ್ದತೆಯನ್ನು ಇಟ್ಟುಕೊಂಡು ತಾವು ಗಳಿಸುವ ಲಾಭಾಂಶದಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಲಗೂನಾ ಕ್ಲೋತಿಂಗ್ನ ಕಾರ್ಯವೈಕರಿ ಶ್ಲಾಘನೀಯ ವೆಂದರು.


ಶಿವನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಎಸ್ ಎಂ. ಕೃಷ್ಣಮೂರ್ತಿ ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ಭಾಗದಲ್ಲಿ ಇರುವ ಲಗೂನಾ ಕ್ಲೋತಿಂಗ್ ಅತಿ ಹೆಚ್ಚು ತೆರಿಗೆಯನ್ನು ಪಾವಸುತ್ತಿದೆ ಇದರ ಜೊತೆಗೆ ಇಂತಹ ಕೆಲಸವನ್ನು ಮಾಡುತ್ತ ಬರುತ್ತಿರುವುದರಿಂದ ಜನ ಸಮಾನ್ಯರಿಗೆ ಸದುಪಯೋಗವಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಈಸಂದರ್ಭದಲ್ಲಿ ಶಿವನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಒಳಗೊಂಡಂತೆ ಲಗೂನ ಗಾರ್ಮೆಂಟ್ಸ್ನ ಮಾನವ ಸಂಪನ್ಮೂಲ ಮುಖ್ಯಸ್ಥೆ ಸ್ಮಿತಾ ಶೆಟ್ಟಿ ಸೇರಿದಂತೆ ಕಾಳೇಗೌಡನ ದೊಡ್ಡಿಯ ಅಂಗನವಾಡಿ ಸಿಬ್ಬಂದಿಗಳು, ಉಪಸ್ಥಿತರಿದ್ದರು.