
ವಿಜಯಪುರ.ಜೂ೨೧: ಬದಲಾಗು ತ್ತಿರುವ ಕಾಲಮಾನದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು ಕೇವಲ ಗಂಡ-ಹೆಂಡತಿ ಮಾತ್ರ ವಾಸ ಮಾಡುತ್ತಾ ಏನಾದರೂ ಸಣ್ಣಪುಟ್ಟ ಘಟನೆಗಳಿಗೂ ಜಗಳವಾಡುತ್ತಾ ವಿವಾಹ ವಿಚ್ಛೇದನಗಳಿಗೆ ಒಳಗಾಗುತ್ತಿರುತ್ತಾರೆ, ಕೊನೆಯ ಪಕ್ಷ ಮಕ್ಕಳು ಹುಟ್ಟುವವರೆಗೂ ಉತ್ತಮ ಸಂಬಂಧಗಳು ಇರದಂತಹ ಪರಿಸ್ಥಿತಿಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಈ ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದ ಸಂದರ್ಭದಲ್ಲಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಯಾವುದೇ ಸಮಸ್ಯೆಗಳು ಬಂದರು ಅವರಿಗೆ ಆಸರೆಯಾಗಿ ಚಿಕ್ಕಪ್ಪ, ದೊಡ್ಡಪ್ಪ, ಸೋದರತ್ತೆ, ಮಾವ, ಅಜ್ಜಿ, ಮುತ್ತಜ್ಜಿ ಮುಂತಾಗಿ ಯಾರಾದರೂ ಗಂಡ ಹೆಂಡತಿಯ ನಡುವಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು ಎಂದು ಹಿರಿಯ ಪತ್ರಕರ್ತ ವಿಎಮ್ ಕಿಶೋರ್ ಕುಮಾರ್ ರವರು ತಿಳಿಸಿದರು.
ಅವರು ಇಲ್ಲಿನ ಎಸ್ ಎನ್ ಫಾರ್ಮ್ ಹೌಸ್ ನ ನಲ್ಲಿ ಜೆಸಿಐ ಹಾಗೂ ಸೀನಿಯರ್ ಚೇಂಬರ್ ವತಿಯಿಂದ ಏರ್ಪಡಿಸಲಾಗಿದ್ದ ಗುರುವಾರದಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದ ಹಿರಿಯ ದಂಪತಿಗಳ ಕಾರ್ಕಳದಲ್ಲಿ ನಡೆದ ಅಂತರಾಷ್ಟ್ರೀಯ ತರಬೇತಿ ಕಾರ್ಯಾಗಾರದಲ್ಲಿ ತರಭೇತಿ ಪಡೆದು ಬಂದವರ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಭಿನಂದನೆ ಸ್ವೀಕರಿಸಿದ ರೇಷ್ಮೆ ಗೂಡು ಮಾರುಕಟ್ಟೆಯ ನಿವೃತ್ತ ರೇಷ್ಮೆ ಅಧಿಕಾರಿ ವೆಂಕಟೇಶ್ ರವರು ಮಾತನಾಡಿ ಕುಟುಂಬದಲ್ಲಿ ಸಣ್ಣ ಪುಟ್ಟ ಲೋಪದೋಷಗಳು ಮಾತುಕತೆಗಳು ನಡೆದರೂ ಸಹ ಹೊಂದಾಣಕೆಯಿಂದ ಜೀವನ ಸಾಗಿಸಿದಾಗ ಆ ಕುಟುಂಬ ಸ್ವರ್ಗದಂತಿರುತ್ತದೆ ಎಂದರು.
ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯ ಸಹಾಯಕ ನಿರ್ದೇಶಕರಾದ ಕೆ ತಿಮ್ಮರಾಜುರವರು ಮಾತನಾಡಿ ಕಳೆದ ೪೦ ವರ್ಷಗಳಿಂದಲೂ ಜೆಸಿಐ ಸಂಸ್ಥೆ ತದನಂತರ ಅದರಲ್ಲಿನ ಮಾಜಿ ಅಧ್ಯಕ್ಷರುಗಳು ಸೀನಿಯರ್ ಚೇಂಬರ್ ಎಂದು ಮಾಡಿಕೊಂಡು ಎಂಟು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವುದು ಸಾಮಾನ್ಯವಾದ ವಿಷಯವಲ್ಲವೆಂದು ಪ್ರತಿ ವರ್ಷವೂ ಹೊಸ ಹೊಸ ಅಧ್ಯಕ್ಷರುಗಳ ನೇತೃತ್ವದಲ್ಲಿ ವಿಶೇಷ ಸೇವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇನ್ನೂ ಹೆಚ್ಚಿನ ಸೇವೆ ಇವುಗಳಿಂದ ಜನತೆಗೆ ದೊರೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಸೀನಿಯರ್ ಚೇಂಬರ್ ನ ವಿಜಯಪುರ ಘಟಕದ ಅಧ್ಯಕ್ಷರಾದ ಅನೀಸ್ ಉರ್ ರೆಹಮಾನ್ ರವರು ಮಾತನಾಡಿ ನಮ್ಮ ವಿಜಯಪುರ ಸಂಸ್ಥೆಯ ಸದಸ್ಯರುಗಳು ಕಾರ್ಕಳದಲ್ಲಿ ನಡೆದ ಅಂತರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಭಾಗವಹಿಸಿ ಅದರಲ್ಲಿಯೂ ನಮ್ಮ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಡಾ. ಎಮ್ ಶಿವಕುಮಾರ್ ರವರು ತರಬೇತುದಾರರಾಗಿಯೂ ಅಲ್ಲಿ ಕಾರ್ಯನಿರ್ವಹಿಸಿದ್ದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ರೇಷ್ಮೆ ಗೂಡು ಮಾರುಕಟ್ಟೆಯ ನಿವೃತ್ತ ರೇಷ್ಮೆ ಅಧಿಕಾರಿ ವೆಂಕಟೇಶ್- ಲಕ್ಷ್ಮಿ, ಜೆಎಸಿ ಕೋ ಆರ್ಡಿನೇಟರ್ ಮುನಿಕೃಷ್ಣಪ್ಪ- ಜಯಲಕ್ಷ್ಮಮ್ಮ, ಉಪಾಧ್ಯಕ್ಷರಾದ ಸೀನಿಯರ್ ಮುನಿವೀರಣ್ಣ-ಭಾರತಿ ಮತ್ತು ಹಿರಿಯ ಪತ್ರಕರ್ತರಾದ ವಿ .ಎಂ. ಕಿಶೋರ್ ಕುಮಾರ್-ಶೋಭಾ ದಂಪತಿಗಳಿಗೆ ಅಭಿನಂದಿಸಲಾಯಿತು.
ರಾಷ್ಟ್ರೀಯ ಸೀನಿಯರ್ ಚೇಂಬರ್ ನಿರ್ದೇಶಕರಾದ ಎನ್.ಜಯರಾಂ, ಮ್ಯಾನೇಜ್ಮೆಂಟ್ ಶ್ರೀನಿವಾಸ್, ಎಂ ಶಿವಕುಮಾರ್, ಕಾರ್ಯದರ್ಶಿ ಎ ಸಿ ಆನಂದ್, ಖಜಾಂಚಿ ಗಳಾದ ಚಿದಾನಂದ ಮೂರ್ತಿ, ಜೆಸಿಐ ವಲಯ ೧೪ರ ಅಧಿಕಾರಿಗಳು ಪುರಸಭಾ ಸದಸ್ಯರು ಆದ ಬೈರೇಗೌಡ, ದೇವನಹಳ್ಳಿ ಟಿಎಪಿಸಿಎಂಎಸ್ ನ ನಾಮಾಂಕಿತ ಸದಸ್ಯ ಬಿಜ್ಜವಾರ ನಾಗರಾಜು, ಎಸ್ ಆರ್ ಎಸ್ ಬಸವರಾಜು, ವಲಯ ತರಬೇತುದಾರರಾದ ಎಸ್ ರಮೇಶ್, ರೇಯಿಸ್ ವುರ್ ರೆಹಮಾನ್, ಶಿಕ್ಷಕರಾದ ನಾಗೇಶ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ಉಭಯ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.