
ಗುರುಮಠಕಲ್: ನ.25:ವೈಧ್ಯೋನಾರಾಯಣ ದೇವ ಅನ್ನುವ ಘೋಷ ವಾಖ್ಯವು ಸನಾತನ ಕಾಲದಿಂದಲು ಬಂದಿದ್ದು ವೇದಗಳ ಕಾಲ ಋಷಿ ಮುನಿಗಳಿಂದಲು ಬಂದಿರುವುದು ಹಾಗೂ ವ?ಧ್ಯರು ಎಂದರೆ ಸಾಕ್ಷಾತ್ ದೇವರ ಸಮಾನರು ಎಂದು ಸು ಸಂಸ್ಕøತಿಯನ್ನು ತಿಳಿದಿರುವ ಭಾರತದೇಶದ ಪ್ರಜೆಗಳು ನಾವು. ಆದರೆ ಗುರುಮಠಕಲ್ ತಾಲೂಕಿನ ಚಂಡರಿಕಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಚಂಡರಿಕಿಯ ಸೆಪ್ಟಿಕ್ ಟ್ಯಾಂಕ್ ಬಳಸಲು ಬರದಂತೆ ಹಾಗಿದೆ, ಇದರಿಂದ ಬಳಸುತ್ತಿರುವ ನೀರು ಹೋರಗೆ ಹೊಗುವಹಾಗಿಲ್ಲ, ಇದರಿಂದ ಆರೋಗ್ಯ ಕೇಂದ್ರದಲ್ಲಿ ವ?ದ್ಯಾಧಿಕಾರಿಗಳಿಗು, ಮಹಿಳಾ ಸಿಬ್ಬಂದಿಗಳಿಗು ಶೌಚಾಲಯಕ್ಕೆ ಹೋಗಲು ತೊಂದರೆಯಾಗುತ್ತಿದೆ ಎಂದು ಆಡಳಿತ ವ?ದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಗಾಜರಕೋಟ ಇವರಿಂದ ಗ್ರಾಮ ಪಂಚಾಯತ್ ಕಾರ್ಯಲಯಕ್ಕೆ ದಿನಾಂಕ 03/02/2025 ರಂದು ವಿಷಯವನ್ನು ತಿಳಿಸಿ ಪ್ರತಿಯನ್ನು ಕೊಟ್ಟಿರುವುದು ನಿಜವಿರುತ್ತದೆ. ಆದರೆ ಇದುವರೆಗೂ ಯಾವುದೆ ಪ್ರಕ್ರಿಯೆಯನ್ನು ತೋರಿಸದೆ ಗ್ರಾ. ಪಂ. ಅಧಿಕಾರಿಗಳ ಜೋತೆ ವಿಷಯದ ಬಗ್ಗೆ ಪ್ರಸ್ಥಾಪಿಸಿದರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಅವರ ಹತ್ತಿರ ವಿಷಯ ತಿಳಿಸಿದರು ಇನ್ನೂ ಕಾರ್ಯವು ಕಾಗದಲ್ಲಿಯೆ ಉಳಿದಿದೆ ಆದುದರಿಂದ ಆಯುಷ್ಮಾನ್ ಆರೋಗ್ಯ ಮಂದಿರದ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಆರೋಗ್ಯ ಆಯುಷ್ಮಾನ್ ಮಂದಿರದ ಮೆಲ್ ಪದರವು ಶಿಥಿಲಗೊಂಡಿದ್ದು ಮತ್ತು ಬೆಳಕಿನ ವೆವಸ್ಥೆಯು ಇರುವುದಿಲ್ಲ ಕಾರಣ ಆರೋಗ್ಯ ಆಯುಷ್ಮಾನ್ ಮಂದಿರಕ್ಕೆ ಜಿಲ್ಲಾ ಅರೋಗ್ಯ ಅಧಿಕಾರಿಗಳು, ತಾಲುಕ ಪಂಚಾಯತ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಬೇಟ್ಟಿ ನೀಡಿ ಸೌಕರ್ಯ ಗಳನ್ನು ಒದಗಿಸಿ ಕೊಟ್ಟಲ್ಲಿ ಸಮೂದಾಯ ಆರೋಗ್ಯ ಅಧಿಕಾರಿಗಳಿಗು ಮತ್ತು ಸಿಬ್ಬಂದಿಯವರಿಗು ಸಾರ್ವಜನಿಕರ ಆರೋಗ್ಯ ಸೇವೆ ಮಾಡಲು ಮತಷ್ಟು ಶಕ್ತಿ ಬರುತ್ತದೆ ಎಂದು ಸಾರ್ವಜನಿಕರು ತಿಳಿಸಿದರು.






















