
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೨೯: ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಕ್ಷೇತ್ರದ ಅಧಿಪತಿ ಪವಾಡ ಪುರುಷ ಲಿಂಗೈಕ್ಯ ಶ್ರೀ ಸಿದ್ದಲಿಂಗ ಮಹಾರಾಜರ ಸಮಾಧಿ ಸ್ಥಳದ ಜೀಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ಈ ನಿಮಿತ್ಯ ಪುರಾಣ ಪ್ರಸಿದ್ಧ ಸ್ಥಳದ ರಕ್ಷಣೆಗಾಗಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕಾಗಿ ದೇಣಿಗೆ ಸಂಗ್ರಹ ಕಾರ್ಯಕ್ಕೆ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಹಾಗೂ ಯರನಾಳದ ಶ್ರೀ ಗುರು ಸಂಗನಬಸವ ಮಹಾಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು.
ಉಭಯ ಶ್ರೀಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ಕೆ ಪ್ರಥಮ ದಿನದಂದೇ ಸ್ಥಳೀಯ ಭಕ್ತರು ಸ್ಪಂದಿಸಿ ದೇಣಿಗೆ ನೀಡುವ ವಾಗ್ದಾನ ಮಾಡಿದರು. ಒಂದೇ ದಿನದಲ್ಲಿ ೧೧ ಲಕ್ಷ ೩೬ ಸಾವಿರ ರೂ. ಹಣ ಉಭಯ ಪೂಜ್ಯರ ಸಮ್ಮುಖದಲ್ಲಿ ಸಂಗ್ರಹವಾಯಿತು.
ಈ ಸಂದರ್ಭದಲ್ಲಿ ಯರನಾಳದ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ ಮಾತನಾಡಿ, ಯರನಾಳ ಬೇರೆ ಅಲ್ಲ, ಲಚ್ಯಾಣ ಬೇರೆ ಅಲ್ಲ ಎರಡು ಮಠಗಳು ಒಂದೇ.ನಾಣ್ಯದ ಎರಡು ಮುಖಗಳು ಇದ್ದಹಾಗೆ. ಲಚ್ಯಾಣ ಕ್ಷೇತ್ರದಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಮಠದಲ್ಲಿ ಜೀರ್ಣೋದ್ಧಾರ ಕಾರ್ಯ ಇಲ್ಲಿನ ಕಮರಿಮಠದ ಪೀಠಾಧೀಶರಾದ ಶ್ರೀ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ನೇತೃತ್ವದಲ್ಲಿ ನಡೆಯುತ್ತಿರುವದು ಸಂತಸದ ಸಂಗತಿ. ಈ ಪವಿತ್ರವಾದ ಕಾರ್ಯಕ್ಕೆ ಸ್ವತ: ಗೌರವಾಧ್ಯಕ್ಷ ಸ್ಥಾನ ಹೊಂದಿರುವ ವೇದಾಂತ ಅಂತರಾಷ್ಟಿçÃಯ ಶಿಕ್ಷಣ ಸಂಸ್ಥೆಯ ವತಿಯಿಂದ ೧ ಕೋಟಿ ರೂಪಾಯಿ ಧನ ಸಹಾಯ ನೀಡುವದಾಗಿ ವಾಗ್ದಾನ ಮಾಡಿದರು.
ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಮಾತನಾಡಿ, ಬರುವ ೨೦೨೭ನೇ ಸಾಲಿನಲ್ಲಿ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ಲಿಂಗೈಕ್ಯ ಶತಮಾನೋತ್ಸವ ಅದ್ದೂರಿಯಾಗಿ ಜರುಗಿಸಲು ಉದ್ದೇಶಿಸಲಾಗಿದೆ. ಈ ನಿಮಿತ್ಯ ಮಠದಲ್ಲಿ ಜೀಣೋದ್ಧಾರ ಕಾರ್ಯ ನಿತ್ಯ ಭರದಿಂದ ಸಾಗಿವೆ. ಭಕ್ತರು ಈ ಪವಿತ್ರವಾದ ಕಾರ್ಯಕ್ಕೆ ತನು, ಮನ, ಧನದಿಂದ ಸಹಕರಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖೋಪಾಧ್ಯಾಯ ಡಿ.ಎಸ್. ಪಾಟೀಲ, ಗಣ್ಯರಾದ ಎಂ.ಎಸ್. ಮುಜಗೊಂಡ, ಜಗನ್ನಾಥ ಕೋಟೆ, ನಿವೃತ್ತ ಶಿಕ್ಷಕ ವಿ.ಎಂ.ಕರಾಳೆ, ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಶೋಕಗೌಡ ಪಾಟೀಲ, ಕಮರಿಮಠದ ವ್ಯವಸ್ಥಾಪಕ ಎಂ.ಕೆ. ಬಿರಾದಾರ, ಗ್ರಾಮದ ಪ್ರಮುಖರಾದ ಗೌರಿಶಂಕರ ಬಾಬುಳಗಿ, ಸಂಕಪ್ಪಗೌಡ ಬಿರಾದಾರ, ಹನಮಂತ ಮುಜಗೊಂಡ, ಶಿವಾನಂದ ವಾಲಿ, ಕಲ್ಲನಗೌಡ ಪಾಟೀಲ, ಭೀಮಶ್ಯಾ ಗೊಳ್ಳಗಿ, ಹಿರಗಪ್ಪ ಯಳಮೇಲಿ, ಬಸವರಾಜ ಅಚ್ಚೇಗಾಂವ ಹಾಗೂ ಇತರರು ಉಪಸ್ಥಿತರಿದ್ದರು.