
ಬೀದರ್: ಜು.೬:ಇತ್ತಿಚೀಗೆ ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಶಿವಾನಂದ ತಗಡೂರು ಅವರ ಮೌಖಿಕ ಅನುಮತಿ ಮೆರೆಗೆ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಾಬುವಾಲಿ ಅವರನ್ನು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ ಅವರ ನೇತೃತ್ವದಲ್ಲಿ ಬಾಬುವಾಲಿ ಅವರನ್ನು ಸನ್ಮಾನಿಸುವ ಮೂಲಕ ಶುಭ ಕೋರಲಾಯಿತು.
ವಾಲಿ ಅವರನ್ನು ಸನ್ಮಾನಿಸಿದ ಡಿ.ಕೆ ಗಣಪತಿ ಅವರು ಮಾತನಾಡಿ, ಹಿರಿಯರು ಹಾಗೂ ಅನುಭವಿಗಳು ಆದ ಬಾಬುವಾಲಿ ಅವರು, ಜಿಲ್ಲೆಯ ಪತ್ರಕರ್ತರ ಪಾಲಿಗೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಪತ್ರಿಕಾ ಭವನ ಸುಸೂತ್ರವಾಗಿ ನಡೆಯುವಲ್ಲಿ ಇವರ ಪಾತ್ರ ಬಹಳಷ್ಟಿದೆ. ಇವರ ಹಿರಿತನಕ್ಕೆ ಮನ್ನಣೆ ನೀಡಿ ಗೌರವ ಸಲಹೆಗಾರರನ್ನಾಗಿ ನೇಮಕ ಮಾಡಲು ಅನುಮತಿ ನೀಡಿದ ನಮ್ಮ ರಾಜ್ಯಾಧ್ಯಕ್ಷರಾದ ತಗಡೂರು ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ಸಂಘ ಅಭಿನಂದಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ಬಾಬು ವಾಲಿ ಮಾತನಾಡಿ, ಕೆಯುಡಬ್ಲುöಜೆ ರಾಜ್ಯಾಧ್ಯಕ್ಷರಾದ ತಗಡೂರು ಅವರು ನನ್ನನ್ನು ಜಿಲ್ಲಾ ಗೌರವ ಸಲಹೆಗಾರರ ಸ್ಥಾನಕ್ಕೆ ಗುರುತಿಸಲು ಅನುಮತಿಸಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಬಸವರಾಜ ಕಾಮಶೆಟ್ಟಿ ಸೇರಿದಂತೆ ಜಿಲ್ಲೆಯ ಇತರೆ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಮುಂಬರುವ ದಿನಗಳಲ್ಲಿ ನಾನು ಕೆಯುಡಬ್ಲುöಜೆ ಸಂಘದ ಅದ್ಯಕ್ಷ ಸ್ಥಾನದ ಅಕಾಂಕ್ಷಿ ಇಲ್ಲ. ರಾಜ್ಯ ಘಟಕದ ಸಲಹೆ ಮೆರೆಗೆ ಈ ಹುದ್ದೆ ಸ್ವೀಕರಿಸಿದ್ದೇನೆ. ಸಂಘದ ಅವಧಿ ಮುಗಿಯುವ ವರೆಗೆ ಸಂಘ ಕೊಡುವ ಗೌರವಕ್ಕೆ ಬದ್ದನಾಗಿರುವುದಾಗಿ ವಾಲಿ ತಿಳಿಸಿದರು.
ಈ ಸಂದರ್ಭದಲ್ಲಿ ವಾಲಿ ಅವರಿಗೆ ಕೆಯುಡಬ್ಲುöಜೆ ಪದಾಧಿಕಾರಿಗಳು ಸೇರಿದಂತೆ ಅನೇಕ ಪತ್ರಕರ್ತರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಗಂಧರ್ವ ಸೇನಾ, ಮಲ್ಲಿಕಾರ್ಜುನ ಬಿರಾದಾರ, ದೀಪಕ ವಾಲಿ, ಮಾಳಪ್ಪ ಅಡಸಾರೆ, ಶಶಿಕುಮಾರ ಪಾಟೀಲ, ವಿಜಯಕುಮಾರ ಪಾಟೀಲ, ಆನಂದ ದೇವಪ್ಪ, ಬಸವರಾಜ ಪವಾರ, ಮಲ್ಲಿಕಾರ್ಜುನ ಮರಕಲೆ, ಕೆಯುಡಬ್ಲುöಜೆ ಜಿಲ್ಲಾ ಸಂಘದ ಅಧ್ಯಕ್ಷ ಡಿ.ಕೆ ಗಣಪತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಕಾರ್ಯದರ್ಶಿಗಳಾದ ಪ್ರಥ್ವಿರಾಜ, ಸುನಿಲಕುಮಾರ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿ ಸದಸ್ಯ ಸಂತೋಷ ಚಟ್ಟಿ, ಪತ್ರÀಕರ್ತರಾದ ಮಹಾರುದ್ರ ಡಾಕುಳಗಿ, ವಿಜಯಕುಮಾರ ಅಷ್ಟುರೆ, ಸುನಿಲ ಭಾವಿಕಟ್ಟಿ, ವಿಜಯಕುಮಾರ ಸೋನಾರೆ, ಶ್ರೀಕಾಂತ ಪಾಟೀಲ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.