
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೭:ದಕ್ಷ ಹಾಗೂ ಪ್ರಾಮಾಣಿಕ ಮತ್ತು ಮುತ್ಸದ್ದಿ ಅಧಿಕಾರಿ ಏಫ್.ಎಂ. ಜಾಮದಾರ ಅವರ ನಿವೃತ್ತಿ ನಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿರ್ಲಕ್ಷಕ್ಕೆ ಒಳಗಾಗಿ ತುಕ್ಕು ಹಿಡಿದಿದೆ. ಮಂಡಳಿ ಉದ್ದೇಶ ಸಾಕಾರಗೊಂಡಿಲ್ಲ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ಟೀಕಿಸಿದ್ದಾರೆ.
ಸಾಮಾಜಿಕ ಸಮಾನತೆಯ ಕನಸುಕಂಡ ಕ್ರಾಂತಿಕಾರಿ ಮನಸ್ಸುಳ್ಳ ೧೨ನೇ ಶತಮಾನದ ಮಹಾಮಾವತಾವಾದಿ ವಿಶ್ವಯರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮ ಹಾಗೂ ಬಸವಣ್ಣನವರು ತಂದೆ ಊರಾದ ಬಸವನ ಬಾಗೇವಾಡಿ ಬಸವ ಜನ್ಮಸ್ಥಳ ಇಂಗಳೇಶ್ವರ ಸೇರಿದಂತೆ ಇನ್ನು ಉಳಿದ ಶರಣರು ಜನಿಸಿದ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಶರಣರ ಕುರುಹುಗಳನ್ನು ಉಳಿಸಲು ಹಿಂದಿನ ಸರ್ಕಾರದ ಮುಖ್ಯಮಂತ್ರಿಯನ್ನು ಜೆ.ಎಚ್. ಪಟೇಲ ಇವರು ಕೂಡಲಸಂಗಮ ಅಭಿವೃದ್ಧಿ ಮಂಡಳಿ ರಚನೆ ಮಾಡಿದ್ದರು. ಅದರಲ್ಲಿಯೇ ಇಂಗಳೇಶ್ವರ ಬಸವನ ಬಾಗೇವಾಡಿ ಸೇರಿದಂತೆ ಇನ್ನು ಹಲವಾರು ಕ್ಷೇತ್ರಗಳನ್ನು ಕೂಡಲ ಸಂಗಮದ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹಿಂದಿನ ಐ.ಎ.ಎಸ್. ದಕ್ಷ ಅಧಿಕಾರಿ ಡಾ. ಎಸ್.ಎಂ.ಜಾಮದಾರ ಅವರನ್ನು ವಿಶೇಷ ಅಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು. ಅವರು ಜವಾಬ್ದಾರಿ ತೆಗೆದುಕೊಂಡ ನಂತರ ಕೂಡಲಸಂಗಮ ಹಾಗೂ ಬಸವನ ಬಾಗೇವಾಡಿ ಸ್ಮಾರಕ ನಿರ್ಮಿಸಿದರು. ಇದರಿಂದ ಶರಣ ಕ್ಷೇತ್ರಗಳ ಚಿತ್ರಣವೇ ಬದಲಾಯಿತು. ಸಾವಿರಾರು ಪ್ರವಾಸಿಗರು ದಿನ ನಿತ್ಯ ಕೂಡಲ ಸಂಗಮ ಹಾಗೂ ಬಸವನ ಬಾಗೇವಾಡಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್.ಎಂ.ಜಾಮದಾರ ಅವರ ನಿವೃತ್ತಿ ನಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರ ಕಛೇರಿ ಅಕ್ಷಶಃ ಅನಾಥವಾದಂತಾಗಿದೆ. ಕಛೇರಿಯಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜಾಮದಾರ ಅವರು ವಯೋ ನಿವೃತ್ತಿ ನಂತರ ಕೆ.ಎಸ್.ಅಧಿಕಾರಿಯಾದ ಮಹದೇವ ಮುರಗಿ ಅವರನ್ನು ಕೂಡಲ ಸಂಗಮ ಅಭಿವೃದ್ಧಿ ಮಂಡಳಿಗೆ ಪ್ರಭಾರಿ ಆಯುಕ್ತರನ್ನಾಗಿ ಸರ್ಕಾರ ನೇಮಿಸಿದೆ. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಜನರಿಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.