ಕೆಎಸ್‌ಆರ್‌ಟಿಸಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿ

ಬೆಂಗಳೂರು, ಜ.೧೯ : ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಪರಿಸರ ಸ್ನೇಹಿ ಉಪಕ್ರಮಗಳ ಯಶಸ್ವಿ ನಿರ್ವಹಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾಲಿಗೆ ಸಂಸ್ಥೆಗೆ ಸಾರಿಗೆ ಕ್ಷೇತ್ರದಲ್ಲಿ ಗ್ರೋ ಕೇರ್ ಇಂಡಿಯಾ ಪರಿಸರ ನಿರ್ವಹಣೆ ಪ್ರಶಸ್ತಿಯು ಗೋಲ್ಡ್ ಕೆಟಗರಿಯಲ್ಲಿ ದೊರೆತಿದೆ


ಜ.೧೭ರಂದು ನವದೆಹಲಿಯ ಏರೋಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕಿ ಹಾಗೂ ಜಂಟಿ ಕಾರ್ಯದರ್ಶಿಯವರಾದ ಮೃಣಾಲಿನಿ ಶ್ರೀವಾಸ್ತವ, ಭಾ.ಪೊ.ಸೇ. ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ದೆಹಲಿ ಕ್ಯಾಂಟೋನ್‌ಮೆಂಟ್ ಬೋರ್ಡ್‌ನ ಸದಸ್ಯ ಶ್ರೀ ರಾಜೇಶ್ ಗೋಯಲ್ ರವರು, ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ವೆಂಕಟೇಶ್ ಅವರಿಗೆ ಪ್ರದಾನ ಮಾಡಿದರು.