
ಆಳಂದ:ಜ.೧೫: ತಾಲೂಕಿಗೆ ಅನಿರ್ಬಂದಿತ ಕ್ರಿಯಾ ಯೋಜನೆ ಕೈಗೆತ್ತಿಕೊಂಡ ವಿವಿಧ ಕಾಮಾರಿಗಳಲ್ಲಿ ಕಾಮಗಾರಿ ಮಾಡದೆ ಹಾಗೂ ಕೆಲವಡೆ ಅಪೂರ್ಣ ಕಾಮಗಾರಿ ಕೈಗೊಂಡು ಸುಮಾರು ೧.೭೫ಕೋಟಿ ರೂಪಾಯಿ ಹಾಗೂ ಸಿಎಂಜಿಎಸ್‌ವೈ ಕಾಮಗಾರಿಯಲ್ಲಿ೧.೧೫ಕೋಟಿ ಹೀಗೆ ೨.೯೦ಕೋಟಿ ರೂಪಾಯಿ ಹಾಡು ಹಗಲೆ ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಲೂಟಿ ಹಣವನ್ನು ಸರ್ಕಾರಿ ಖಜಾನೆ ಭರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ ರಾಠೋಡ ಅವರು ಇಂದಿಲ್ಲಿ ಒತ್ತಾಯಿಸಿದರು.
ಈ ಕುರಿತು ಪಟ್ಟಣದಲ್ಲಿ ಬುಧವಾರ ಕರೆದ ಕರೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿದ ದೂರಿನ ಪ್ರತಿಯೊಂದಿಗೆ ದಾಖಲೆಗಳು ಒದಗಿಸಿ ಮಾತನಾಡಿದರು. ೨೦೨೪-೨೫ನೇ ಸಾಲಿನಲ್ಲಿ ತಾಪಂ ಸೇರಿ ಸಂಬAಧಿತ ಇಲಾಖೆ ಮೂಲಕ ಅನುಷ್ಠಾನಗೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ಅನುದಾನ ದರ್ಬಳಕೆ, ಕಳಪೆ ಕಾಮಗಾರಿ ಹಾಗೂ ಸುಳ್ಳು ಬಿಲ್ಲುಗಳ ಮೂಲಕ ಸರ್ಕಾರದ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಸ್ಥಳ ಪರಿಶೀಲನೆಯ ವೇಳೆ ಹಲವಾರು ಕಾಮಗಾರಿಗಳು ಕಾಗದದಲ್ಲಿ ಮಾತ್ರ ಪೂರ್ಣಗೊಂಡಿರುವAತೆ ತೋರಿಸಿ ವಾಸ್ತವದಲ್ಲಿ ಯಾವುದೇ ಅಭಿವೃದ್ಧಿಯೇ ನಡೆದಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬAದಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಅಕ್ರಮಗಳಲ್ಲಿ ತಾಪಂ ಇಒ ಅಧಿಕಾರಿ, ಮತ್ತು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಸಂಬAಧಿತ ಕಿರಿಯ ಇಂಜಿನಿಯರುಗಳು ಹಾಗೂ ಗುತ್ತಿಗೆದಾರರು ಪರಸ್ಪರ ಶಾಮೀಲಾಗಿ ಕಾರ್ಯನಿರ್ವಹಿಸಿರುವ ಶಂಕೆ ಗಂಭೀರವಾಗಿದೆ ಎಂದು ಆರೋಪಿಸಿದ್ದಾರೆ.
ದೂರುನಲ್ಲಿ ಅವರು ಕಾಮಗಾರಿ ಸಂಖ್ಯೆವಾರು ವಿವರಗಳನ್ನು ಉಲ್ಲೇಖಿಸಿ, ಸುಮಾರು ೨.೯೦ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ರುದ್ರವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಮಗಾ ಆರ್ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೋಣೆಗಳ ದುರಸ್ತಿಗೆ ಮಂಜೂರಾದ ೪.೭೫ ಲಕ್ಷ ರೂ. ಅನುದಾನದಲ್ಲಿ ವಾಸ್ತವವಾಗಿ ಕೇವಲ ಸುಣ್ಣ-ಬಣ್ಣ ಹಾಗೂ ಒಂದು ಕೋಣೆಗೆ ಶೀಟ್ ಹಾಕಲಾಗಿದ್ದು, ಅಂದಾಜು ೨೦ ರಿಂದ ೩೦ ಸಾವಿರ ರೂ. ವೆಚ್ಚವಾಗಿದ್ದರೂ ಸುಮಾರು ೪ ಲಕ್ಷ ರೂ. ಹಣ ದರ್ಬಳಕೆಯಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ೮ ಅಂಗನವಾಡಿ ಕೇಂದ್ರಗಳಿಗೆ ಅಲಮಾರಿ ಖರೀದಿಗೆ, ವಾಟರ್ ಫಿಲ್ಟರ್ ಹಾಗೂ ಮಿಕ್ಸರ್ ವಿತರಣೆಗೆ, ಫ್ಯಾನ್ ಮತ್ತು ವಿದ್ಯುತೀಕರಣ ಕಾಮಗಾರಿಗಳಿಗೆ ಮಂಜೂರಾದ ಅನುದಾನಗಳಲ್ಲಿ ಕಳಪೆ ಸಾಮಗ್ರಿ ಬಳಕೆ, ಹಳೆಯ ವಸ್ತುಗಳ ರಿಪೇರಿ, ಹಾಗೂ ಸುಳ್ಳು ಬಿಲ್ಲುಗಳ ಮೂಲಕ ೫ಲಕ್ಷ ಹಣವನ್ನು ದುರುಪಯೋಗ ಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರುದ್ರವಾಡಿ ಪಂಚಾಯತ್ ವಾರ್ಡ್ ಅಂಗನವಾಡಿ ದುರಸ್ತಿ, ವಿವಿಧ ಅಂಗನವಾಡಿ ಕೇಂದ್ರಗಳ ನವೀಕರಣ, ಗ್ರಾಮ ಗ್ರಂಥಾಲಯ ಉನ್ನತೀಕರಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಮಗಾರಿಗಳು, ರಸ್ತೆ ಕಾಮಗಾರಿ ಹಾಗೂ ಶಾಲಾ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಲ್ಲಿ ಯಾವುದೇ ಅಥವಾ ಅಲ್ಪ ಪ್ರಮಾಣದ ಕೆಲಸ ಮಾಡದೇ ಬಿಲ್ಲು ಪಾವತಿ ಮಾಡಲಾಗಿದೆ ಎಂದು ವೆಂಕಟೇಶ ರಾಠೋಡ ಆರೋಪಿಸಿದ್ದಾರೆ.
ಕಾಮಗಾರಿ ಸಂಖ್ಯೆ ೪೮ ಮತ್ತು ೫೦ – ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಪ ಅಥವಾ ಯಾವುದೇ ಕಾಮಗಾರಿ ಮಾಡದೇ ಒಟ್ಟಾರೆ ೬.೫೦ ಲಕ್ಷ ಹಣ ರ‍್ಬಳಕೆಯಾಗಿದೆ. ಕಾಮಗಾರಿ ಸಂಖ್ಯೆ ೫೨ (ರಸ್ತೆ ಕಾಮಗಾರಿ) ೨ ವರ್ಷಗಳ ಹಿಂದೆ ನಿರ್ಮಿತ ರಸ್ತೆಗೆ ಮರುಬಿಲ್ಲು ಹಾಕಿ ೪.೦೦ ಲಕ್ಷ ಹಣ ರ‍್ಬಳಕೆಯಾಗಿದೆ. ಕಾಮಗಾರಿ ಸಂಖ್ಯೆ ೫೨ (ಶಾಲಾ ಶೌಚಾಲಯ) – ಮೋಘಾ ಬಿ ಗ್ರಾಮದ ಸರಕಾರಿ ಶಾಲೆಯ ಅಂಗವಿಕಲ ಶೌಚಾಲಯ ಕಳಪೆ ಹಾಗೂ ಅಪೂರ್ಣವಾಗಿದ್ದು, ೨.೦೦ ಲಕ್ಷ ಹಣ ಲೂಪವಾಗಿದೆ.
ಈ ಎಲ್ಲ ಕಾಮಗಾರಿಗಳಿಗೆ ಸಂಬAಧಿಸಿದAತೆ ಜಿಪಿಎಸ್ ಫೋಟೋಗಳು ಹಾಗೂ ವೀಡಿಯೊ ಸಾಕ್ಷ್ಯಗಳನ್ನು ದೂರಿಗೆ ಲಗತ್ತಿಸಲಾಗಿದೆ ಎಂದು ತಿಳಿಸಿರುವ ಅವರು, ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳ ತನಿಖಾ ತಂಡ ರಚಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಸಂಬAಧಿತ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ದರ್ಬಳಕೆಯಾದ ಸಂಪೂರ್ಣ ಹಣವನ್ನು ಸರ್ಕಾರದ ಖಜಾನೆಗೆ ಮರುಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸರ್ಕಾರದ ಹಣವನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಬೇಕಾಗಿದ್ದು, ಈ ರೀತಿಯ ಭ್ರಷ್ಟಾಚಾರವನ್ನು ತಡೆಗಟ್ಟಲು ಜಿಲ್ಲಾ ಪಂಚಾಯತ್ ಆಡಳಿತ ತಕ್ಷಣ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಠೋಡ ಆಗ್ರಹಿಸಿದ್ದಾರೆ. ಘೋಷ್ಠಿಯಲ್ಲಿ ಪ್ರವೀಣ ಮೊದಲೆ, ಸೇವಾಗ ರಾಠೋಡ ಇದ್ದರು.

























