ಮದರ್ ತೆರೆಸಾ ಶಾಲೆಯಲ್ಲಿ ಸಡಗರ ಸಂಭ್ರಮದಿಂದಕೃಷ್ಣ ಜನ್ಮಾಷ್ಟಮಿ ಆಚರಣೆ

ಕಲಬುರಗಿ:ಅ.17:ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೃಷ್ಣ ಜನ್ಮಾಷ್ಟಮಿಯು ಕೃಷ್ಣನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ನರ್ಸರಿ, ಎಲ್.ಕೆ.ಜಿ, ಹಾಗೂ ಯು.ಕೆ.ಜಿ ಮಕ್ಕಳು ಕೃಷ್ಣನ ವಿವಿಧ ವೇಷ ಭೂಷಣಗಳ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಮಕ್ಕಳು ಬಹಳ ಉಲ್ಲಾಸ, ಉತ್ಸಾಹ, ಸಡಗರ ಸಂಭ್ರಮದಿಂದ ಕೃಷ್ಣ ರಾಧೆಯ ಉಡುಪು ಧರಿಸಿ ಸಂತಸಪಟ್ಟರು. ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ ಪಾಲಕರನ್ನು ಉದ್ದೇಶೀಸಿ ಶ್ರೀಕೃಷ್ಣನ ತಾಯಿ ಯಶೋಧ ಬಾಲ್ಯದಲ್ಲಿ ಕೃಷ್ಣನನ್ನು ಬೆಳೆಸಿದ ಪರಿ ಹಾಗೂ ಕೃಷ್ಣನ ಸಾಹಸ, ಧೈರ್ಯ, ಪಶು ಪಕ್ಷಿಯೊಡನೆ ಇದ್ದ ಭಾಂಧವ್ಯ, ಗೆಳೆಯರು ಹಾಗೂ ಸೋದರರ ಜೊತೆ ಒಡನಾಟ ಆತನಲ್ಲಿ ಇದ್ದ ಶ್ರಧ್ಧೆ, ಭಕ್ತಿ ಹಾಗೂ ಶ್ರೀಕೃಷ್ಣ ತಪ್ಪು ಮಾಡಿದರೆ ತಾಯಿ ಶಿಕ್ಷೆ ನೀಡುವ ರೀತಿ ಮತ್ತು ತೋರಿಸುವ ಕರುಣೆ, ಅನುಕಂಪ ಇವೆಲ್ಲವೂ ಪ್ರಸ್ತುತ ತಾಯಂದಿರರು ತಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಅತಿ ಮುದ್ದು ಮಾಡುವುದು, ಅತಿ ಪ್ರೀತಿ ಮಾಡುವುದು ಒಳ್ಳೆಯದಲ್ಲ. ತಮ್ಮ ಮಕ್ಕಳಿಗೆ ಸಂದರ್ಭಕ್ಕನುಸಾರವಾಗಿ ತಾಯಂದಿರರು ಶಿಕ್ಷೆಕೊಡಲೇಬೇಕು. ಅದಲ್ಲದೇ ಶ್ರೀಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾಗಿದೆ. ಕೃಷ್ಣನ ಬಾಲ್ಯದ ಜೀವನವು ಅನೇಕ ರೋಚಕ ಘಟನೆಗಳು ಮತ್ತು ಕಥೆಗಳಿಂದ ಕೂಡಿದೆ ಹಾಗೂ ಅನೇಕ ಪೌರಾಣಿಕ ಕಥೆಗಳ ಆಧಾರವಾಗಿವೆ ಎಂದು ಕೃಷ್ಣನ ಪೌರಾಣಿಕ ವೃತ್ತಾಂತ ತಿಳಿಸಿ ಹೇಳಿದರು ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಪಲ್ಲವಿ ಮಿಶ್ರಾ, ಶಾಹಿನ ಬೇಗಂ, ಕಲ್ಪನಾ ಹಿರೇಮಠ, ಧನಶ್ರೀ, ರಾಜೇಶ್ವರಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಶಿವಪುತ್ರಪ್ಪಾ ಡೆಂಕಿಯವರು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸಿದರು.