
ಕೆ.ಆರ್. ಪುರ,ಮೇ.೧೮- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿರುವ ಬೆಂಗಳೂರು ಸುತ್ತಮುತ್ತಲಿನ ರಸ್ತೆ ಅಭಿವೃದ್ದಿ ಕಾಮಗಾರಿಗಳ ಪೈಕಿ ಮಹದೇವಪುರ ಕ್ಷೇತ್ರದ
ಕಾಟಂನಲ್ಲೂರು ಕ್ರಾಸ್ ನಿಂದ ಅತ್ತಿಬೆಲೆವರೆಗೆ ಬರುವ ಸತ್ಯಸಾಯಿ ಆಶ್ರಮದ ಮುಂದೆ ಮೇಲುಸೇತುವೆ ಕಾಮಗಾರಿ, ವರ್ತೂರು ಕೋಡಿ ಬಳಿ ಗ್ರೇಡ್ ಸೆಪರೆಟರ್, ವರ್ತೂರು ಗ್ರಾಮದ ಎಲೀವೇಟಡ್ ಕಾರಿಡಾರ್, ಗುಂಜೂರು ರಸ್ತೆ ಹಾಗೂ ದೊಮ್ಮಸಂದ್ರ ಮೇಲುಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಕೆಆರ್ ಡಿಸಿಎಲ್ ನಿರ್ದೇಶಕರಾದ ಸುಶೀಲಮ್ಮ .ಎನ್, ಪರಿವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಟಂ ನಲ್ಲೂರು ಕ್ರಾಸ್ ಭೂ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯನ್ನು ಮುಗಿಸಬೇಕೆಂದು ಸೂಚನೆ ನೀಡಿದರು. ಭೂ ಮಾಲೀಕರಿಗೆ ಪರಿಹಾರ ನೀಡಿದ ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸಿ ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಾಮನಿರ್ದೇಶಿತ ಪಾಲಿಕೆ ಸದಸ್ಯ ಎನ್.ಎ.ನಾರಾಯಣಸ್ವಾಮಿ,ಅಧೀಕ್ಷಕ ಅಭಿಯಂತರರಾದ ಪ್ರಮೀತ್, ಕಾರ್ಯಪಾಲಕ ಇಂಜಿನಿಯರ್ ಸಂಪತ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಲುವಯ್ಯ, ವಾಡ್೯ ಅಧ್ಯಕ್ಷ ಸತ್ಯ, ಅಂಜಿನಪ್ಪ ಸೇರಿದಂತೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.