
ಜೇವರ್ಗಿ :ಜ.24:ತಾಲೂಕಿನ ಕೋಳಕೂರ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ 110 ವಿದ್ಯಾರ್ಥಿಗಳು (9ಮತ್ತು 10ನೆಯ ತರಗತಿ) ಅಭ್ಯಾಸ ಮಾಡುತ್ತಿದ್ದು ಶಿಕ್ಷಕರು ಸಿಬ್ಬಂದಿಗಳು ಹಾಗೂ ಬಿಸಿ ಊಟದ ಅಡುಗೆಯವರು ಸೇರಿ 23 ಜನರು ಇರುವುದು ಈ ಶಾಲೆಗೆ ಕೋಳಕೂರ ಣo ಕೂಡಿದರ್ಗಾ ಮುಖ್ಯ ರಸ್ತೆಯಿಂದ ಸರಕಾರಿ ಪ್ರೌಢಶಾಲೆಗೆ ಅಂದಾಜು 227 ಮೀಟರ್ ಹಾಗೂ ಶಾಲೆಯ ಪಕ್ಕದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ 9 ಮೀಟರ್ ಉದ್ದದ ರಸ್ತೆಗೆ 2024 ಮತ್ತು 25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೆ ಕೆ ಆರ್ ಡಿ ಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ರವರು ಮುತುವರ್ಜಿ ವಹಿಸಿ ಈ ಶಾಲೆಯ ರಸ್ತೆಗೆ 20 ಲಕ್ಷ ರೂಪಾಯಿಗಳು ಇಟ್ಟು ಭೂಸೇನಾ ನಿಗಮಕ್ಕೆ ಕೆಲಸ ಮಾಡಲು ವಹಿಸಿದ್ದಾರೆ. ಈ ಕಾಮಗಾರಿ ಟೆಂಡರ್ ಆಗಿ ಸುಮಾರು ತಿಂಗಳಾಗಿವೆ ಕೆಲವು ತಿಂಗಳಗಳ ಹಿಂದೆ ಸಿಸಿ ರಸ್ತೆ ಕಾಮಗಾರಿ ಮಾಡಲು ಭೂ ಸೇನಾ ನಿಗಮದವರು ಕಂಕರ್ ಅಥವಾ ಕಡಿ ಹಾಕಿ ಸುಮಾರು ಏಳೆಂಟು ತಿಂಗಳಾಗಿದೆ ಅಲ್ಲಿಂದ ಇಲ್ಲಿಯವರೆಗೆ ಹಾಕಿರುವ ಕಂಕರ್ ಅಥವಾ ಕಡಿಯಿಂದ ವಿದ್ಯಾರ್ಥಿಗಳು ಸೈಕಲ್ ಮೇಲಿಂದ ಮತ್ತು ಶಿಕ್ಷಕರ ಬೈಕುಗಳು ಹಲವಾರು ಬಾರಿ ಸ್ಕಿಡ್ ಆಗಿ ಬಿದ್ದಿರುತ್ತಾರೆಂದು ಶಾಲೆಯ ವಿದ್ಯಾರ್ಥಿಗಳು ಹೇಳಿದ್ದಾರೆ ಹಾಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಹಲವಾರು ಬಾರಿ ತಾಲೂಕಿನ ಶಾಸಕರ ಆಪ್ತ ಸಹಾಯಕರಿಗೆ ಭೇಟಿಯಾಗಿ ಅವರ ಮುಖಾಂತರ ಸಂಬಂಧಿಸಿದ ನಿಗಮದ ಅಧಿಕಾರಿಗಳಿಗೆ ಹಾಗೂ ಜೈ ಯಾದ ಆನಂದ ರವರಿಗೆ ಫೆÇೀನ್ ಮುಖಾಂತರ ಹೇಳಿದರು ಅಧಿಕಾರಿಗಳು ಈ ಕೆಲಸ ಮಾಡಲು ನಿರ್ಲಕ್ಷ ತೋರಿದ್ದು ಮಾನ್ಯ ಕೆಕೆಆರ್‍ಡಿಬಿ ಅಧ್ಯಕ್ಷರು ಹಾಗೂ ಶಾಸಕರು ಜೇವರ್ಗಿ ರವರು ಕಾಮಗಾರಿ ನಿರ್ವಹಿಸುವಲ್ಲಿ ನಿರ್ಲಕ್ಷ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ತಕ್ಷಣ ಕೆಲಸ ಪ್ರಾರಂಭ ಮಾಡುವಂತೆ ಆದೇಶಿಸಬೇಕೆಂದು ಎಸ್ ಡಿ ಎಮ್ ಸಿ ಅಧ್ಯಕ್ಷರು ವಿದ್ಯಾರ್ಥಿಗಳು ಎಸ್‍ಡಿಎಂಸಿ ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ ಸಮಿತಿಯ ಸಂಚಾಲಕರು ಮನವಿ ಮಾಡಿದ್ದಾರೆ. ವಿಳಂಬವಾದರೆ ವಿದ್ಯಾರ್ಥಿಗಳು ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಹಾಗೂ ಮಕ್ಕಳ ಪಾಲಕರು ಶಾಸಕರ ಕಚೇರಿ ಮುಂದೆ ಹೋರಾಟ ರೂಪಿಸಲಾಗುವುದೆಂದು ಹೇಳಿದ್ದಾರೆ ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಪುತ್ರಪ್ಪ ಕೋಡಿ ಸದಸ್ಯರಾದ ರವಿಗೌಡ ಪಾಟೀಲ್ ಮದ್ರಿಕಿ ಡಿ ಎಸ್ ಎಸ್ ತಾಲೂಕ ಸಂಚಾಲಕರಾದ ಸಿದ್ರಾಮ ಕಟ್ಟಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.























