
ಕಲಬುರಗಿ:ಜು.2:ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಸಾಮಾನ್ಯ ಜ್ಞಾನ ಉತ್ತಮ ಜೀವನಕ್ಕೆ ಅಡಿಪಾಯವಾಗುತ್ತದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಪ್ಯಾನಲ್ ವಕೀಲರಾದ ಹಣಮಂತರಾಯ ಅಟ್ಟೂರ ಹೇಳಿದರು.
ಕಲಬುರಗಿ ತಾಲ್ಲೂಕಿನ ಆಲಗುಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ ತಾಲ್ಲೂಕ ಪಂಚಾಯತ, ಆಲಗುಡ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಉಚಿತ ಕಾನೂನು ನೆರವು ಕೇಂದ್ರ ಉದ್ಘಾಟಿಸಿ ಮಾತನಾಡುತ್ತ ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶವೇನೆಂದರೆ ಎಲ್ಲರಿಗೂ ಸಮಾನ ನ್ಯಾಯ ದೊರೆಯುವಂತೆ ಮಾಡುವುದು.ಬಡವರು ಮತ್ತು ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ಒದಗಿಸುವುದು.
ಜನರಲ್ಲಿ ಕಾನೂನು ಅರಿವು ಮೂಡಿಸುವುದು.ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವುದು.
ನ್ಯಾಯಾಲಯದ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವುದು.
ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಪರಿಶಿಷ್ಟ ಜಾತಿ/ಪಂಗಡದವರು, ಅಂಗವಿಕಲರು ಹಾಗೂ ಇತರ ಅರ್ಹರಿಗೆ ನ್ಯಾಯ ದೊರೆಯಲು ನೆರವಾಗುವುದು ಆಗಿದೆ.ಸಂವಿಧಾನದ ಅನುಚ್ಛೇದ 39ಂ ಯ ಆಶಯವನ್ನು ಕಾರ್ಯರೂಪಕ್ಕೆ ತರುವುದು, ಅಂದರೆ ಆರ್ಥಿಕ ಅಥವಾ ಇತರ ಅಡಚಣೆಗಳಿಂದ ಯಾರೂ ನ್ಯಾಯದಿಂದ ವಂಚಿತರಾಗಬಾರದು. ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ನ್ಯಾಯ ಕೊಡಬೇಕೆಂಬ ಸಂಕಲ್ಪದಿಂದ ಪ್ರಾಧಿಕಾರವು ಈ ಕೇಂದ್ರವು ಸ್ಥಾಪಿಸಿದ್ದಾರೆ. ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದರು.ಗ್ರಾಮ ಪಂಚಾಯತ ಅಭಿವೃದ್ಧಿಅಧಿಕಾರಿಗಳಾದ ಬಂಡಪ್ಪ ಧನ್ನಿ, ಪ್ರಗತಿ ಪರ ರೈತರಾದ ಶರಣಬಸಪ್ಪ ಪಾಟೀಲ, ಉದ್ದಿಮೆದಾರಾರದ ಸತೀಶ ಪಾಟೀಲ, ಸರಕಾರಿ ಶಾಲಾ ಮುಖ್ಯ ಗುರುಳಾದ ಮೀನಾಕ್ಷಿ ಗುಂಡಗುರ್ತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಂಜುನಾಥ ಕೆರೂರ, ಶಿವಶರಣಪ್ಪ ಕಲಬುರಗಿ, ದೇವಿಂದ್ರ, ಮಹಾಂತೇಶ್ ತಳವಾರ, ಸುನೀಲಕುಮಾರ ಸುಲ್ತಾನಪುರ, ಶಂಕರನಾಗ ಬೀದಿಮನಿ,
ಮಹಾದೇವಪ್ಪ ಮೂಲಗೆ, ಶುಭಾಶ ಚಂದ್ರ ಚವಾಣ, ದರ್ಶನ ಸೇರಿದಂತೆ ಅನೇಕ ಜನ ಭಾಗವಹಿಸಿದರು































