ಕೆ.ಕೆ.ಆರ್.ಡಿ.ಬಿ. ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ:ಮಂಡಳಿ ಕಾಮಗಾರಿ ಪ್ರಥಮಾದ್ಯತೆ ಮೇಲೆ ಪೂರ್ಣಗೊಳಿಸಿ:ಬಿ.ಫೌಜಿಯಾ ತರನ್ನುಮ್

ಕಲಬುರಗಿ:ಜೂ.21: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಕಾಮಗಾರಿಗಳನ್ನು ಪ್ರಥಮಾದ್ಯತೆ ಮೇಲೆ ಪೂರ್ಣಗೊಳಿಸುವಂತೆ ಅನುμÁ್ಠನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಪ್ರಗತಿಯಲ್ಲಿರುವ 1,897 ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಮಂಡಳಿಯಿಂದ 2013-14 ರಿಂದ 2024-25ನೇ ಸಾಲಿನ ವರೆಗೆ ಕಲಬುರಗಿ ಜಿಲ್ಲೆಗೆ 5,633.96 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಇದರಲ್ಲಿ 3,754.41 ಕೋಟಿ ರೂ. ಖರ್ಚು ಮಾಡಿ 11,655 ಕಾಮಗಾರಿಗಳ ಪೈಕಿ 9,248 ಕಾಮಗಾರಿಗಳು ಪೂರ್ಣಗೊಳಿಸಿದೆ. ಇನ್ನು ಪ್ರಾರಂಭಿಸಿದ 510 ಕಾಮಗಾರಿಗಳನ್ನು ಕೂಡಲೆ ಶುರು ಮಾಡುವಂತೆ ಡಿ.ಸಿ. ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನೀಯರಿಂಗ್, ಕೆ.ಆರ್.ಐ.ಡಿ.ಎಲ್., ಪಿ.ಎಂ.ಜಿ.ಎಸ್.ವೈ., ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ, ಶಾಲಾ ಶಿಕ್ಷಣ ಇಲಾಖೆ, ಸಿಡಾಕ್, ಆರೋಗ್ಯ ಇಲಾಖೆ ಹಾಗೂ ಸ್ಲಮ್ ಬೋರ್ಡ್ ಇಲಾಖೆಯ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ವಿವಿಧ ಅನುμÁ್ಠನ ಏಜೆನ್ಸಿಗಳ ಅಧಿಕಾರಿಗಳು ಇದ್ದರು.