Home ಜಿಲ್ಲೆ ಕಲಬುರಗಿ ಮಹಿಳೆಯರಲ್ಲಿ ಎಚ್‍ಪಿವಿ ಲಸಿಕೆಗೆ ಕೆಕೆಆರ್‍ಡಿಬಿ ಹಣ

ಮಹಿಳೆಯರಲ್ಲಿ ಎಚ್‍ಪಿವಿ ಲಸಿಕೆಗೆ ಕೆಕೆಆರ್‍ಡಿಬಿ ಹಣ

ಜೇವರ್ಗಿ:ಮಾ.31: ‘ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್ ತಡೆಯಲು ಕೆಕೆಆರ್‍ಡಿಬಿ ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಉಚಿತ ಎಚ್‍ಪಿವಿ ಲಸಿಕೆ ನೀಡಲು ಯೋಜನೆ ರೂಪಿಸುತ್ತಿದೆ’ ಎಂದು ಕೆಕೆಆರ್‍ಡಿಬಿ ಅಧ್ಯಕ್ಷಡಾ.ಅಜಯ್ ಸಿಂಗ್ ಹೇಳಿದರು.

ತಾಲ್ಲೂಕಿನ ಗಂವ್ಹಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಫೌಂಡೇಷನ್ ವತಿಯಿಂದ ಆಯೋಜಿ-ಸಲಾಗಿದ್ದ ಸ್ತನ, ಗರ್ಭಕೋಶ ಕ್ಯಾನ್ಸರ್ ಹಾಗೂ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೆಕೆಆರ್‍ಡಿಬಿ ಈ ಲಸಿಕೆ ನೀಡುವ ಯೋಜನೆ ರೂಪಿಸಲಿದೆ. ಇದಕ್ಕಾಗಿ ಮಂಡಳಿಯಲ್ಲಿ ?15 ಕೋಟಿ ಮೀಸಲಿಡಲಾಗಿದೆ’ ಎಂದರು.

‘ಆರೋಗ್ಯ ಸೇವೆಗಳು ಹಳ್ಳಿ ಜನರಿಗೆ ಅವರಿರುವ ಸ್ಥಳದಲ್ಲೇ ಲಭ್ಯವಾಗುವಂತೆ

ಜೀವರ್ಗಿ ತಾಲ್ಲೂಕಿನ ಗಂವ್ಹಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ವಿಬಿರಕ್ಕೆ ಕೆಕೆಆರ್‍ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ರೋಗಿಗೆ ಚಿಕಿತ್ಸೆ ನೀಡುವ ಮೂಲಕ ಚಾಲನೆ ನೀಡಿದರು

ಮಾಡುವುದೇ ತಮ್ಮ ಗುರಿ. ಮಾಜಿ ಸಿಎಂ ದಿ.ಧರಂಸಿಂಗ್ ಪ್ರತಿಷ್ಠಾನದ ಅಡಿಯಲ್ಲಿ ಈಗಾಗಲೇ ಆನೇಕ ಸಾಮಾಜಿಕ ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ವರ್ಷದುದ್ದಕ್ಕೂ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಜೇವರ್ಗಿ ಜನರ ಸಂಪೂರ್ಣ ಆರೋಗ್ಯ ರಕ್ಷಣೆಯ ಸಂಕಲ್ಪ ಮಾಡಲಾಗಿದೆ’ ಎಂದರು.

ಇದ್ದರೆ ಬದುಕಲ್ಲಿ ಎಲ್ಲವೂ ಉಂಟು. ಹೀಗಾಗಿ ಜೇವರ್ಗಿಯ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಆರೋಗ್ಯ ಶಿಬಿರ ನಡೆಸಿ, ಸಾಮಾನ್ಯ ರೋಗಗಳ ತಪಾಸಣೆ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆ, ಕಿಡ್ನಿ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ಉಚಿತ ತಪಾಸಣೆ ನಡೆಸಿ ಅಗತ್ಯ ಮಾರ್ಗದರ್ಶನ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

‘ಆರೋಗ್ಯವೇ ಭಾಗ್ಯ,

ಗಂವ್ಹಾರ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳು ಕೇಂದ್ರದ ಮತ್ತು ಸಿಬ್ಬಂದಿ ವರ್ಗದವರು. ವೈದ್ಯರಾದ ಡಾ.ಕಾಮೇಶ್ವರಿ ದೇವಿ, ಡಾ.ಮಂಜುನಾಥ ದೋಶೆಟ್ಟಿ, ಛಿ.ಡಿಚಿಡಿ. ಅನುಗ್ರಹ ಕಣ್ಣಿನ ‘ಆಸ್ಪತ್ರೆಯ ತಂಡ ಹಾಗೂ ಸ್ಥಳೀಯ ಆಶಾ ಕಾರ್ಯಕರ್ತರ ತಂಡ ಶಿಬಿರದಲ್ಲಿ ತಪಾಸಣೆ ನಡೆಯಿತು.

ಶಾಸಕ ಡಾ.ಅಜಯ್ ಸಿಂಗ್ ಅವರು ವೈದ್ಯರಾಗಿ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಮೇಶ ಶರ್ಮಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದ-ಲಿಂಗರೆಡ್ಡಿ ಇಟಗಿ, ರುಕುಂ ಪಟೇಲ. ಜಿ.ಪಂ ಮಾಜಿ ಉಪಾಧ್ಯಕ್ಷ ಗುರುಲಿಂ ಗಪ್ಪಗೌಡ ಅಂದೋಲಾ, ಶಾಂತಪ್ಪ ಕೂಡಗಿ, ವಸಂತ ನರಿಬೋಳ, ಕಾಶೀಂ ಪಟೇಲ್ ಮುದಬಾಳ, ಮುನ್ನಾ ಪಟೇಲ್ ಯಾಳವಾರ, ವಿಜಯಕುಮಾರ ಪಾಟೀಲ, ಬಸವರಾಜ ಪಾಟೀಲ, ಸೋಫಿಸಾಬ ಗಂವ್ಹಾರ, ವಿಜಯಕುಮಾರ ಹಿರೇಮಠ, ಮಹಿಮೂದ್ ನೂರಿ, ಗೌಸುದ್ದೀನ್ ಖಾದ್ರಿ, ವಿಶ್ವರಾದ್ಯ ಗಂವ್ಹಾರ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.